ನಗರಗಳಲ್ಲಿ ಹಿಂಸಾಚಾರವನ್ನುಂಟುಮಾಡಲು ಮಾವೋವಾದಿಗಳಿಂದ ಗೆರಿಲ್ಲಾ ದಾಳಿಯ ಸಂಚು !

ಕಾರ್ಮಿಕರು, ದಲಿತರು ಮತ್ತು ಅಲ್ಪಸಂಖ್ಯಾತರ ಬೆಂಬಲವನ್ನು ಪಡೆಯುವ ಪ್ರಯತ್ನ

ಈ ಸಂಚನ್ನು ತಡೆಗಟ್ಟಲು ಸೆಪ್ಟೆಂಬರ್ 26 ರಂದು ಕೇಂದ್ರ ಗೃಹ ಸಚಿವರಿಂದ ಮಾವೊವಾದಿ ಪ್ರಭಾವವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ

ಮಾವೋವಾದವನ್ನು ದೇಶದಿಂದ ಉಚ್ಚಾಟಿಸಲು, ಮಾವೋವಾದಿಗಳ ಸಹಿತ ವಿವಿಧ ಕ್ಷೇತ್ರಗಳಲ್ಲಿರುವ ಅವರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ ! – ಸಂಪಾದಕರು 

ಮುಂಬಯಿ : ಮಾವೋವಾದಿಗಳು ಮುಂಬಯಿ, ಪುಣೆ, ನಾಗಪುರ, ದೆಹಲಿ ಮತ್ತು ಕೊಲಕಾತಾ ಈ ನಗರಗಳಲ್ಲಿ ತಮ್ಮ ಜಾಲಗಳನ್ನು ಮರು ಸ್ಥಾಪಿಸಿದ್ದು ದೇಶದ ಇತರ ನಗರ ಪ್ರದೇಶಗಳಲ್ಲಿ ಜಾಲವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವಿವಿಧ ನಗರಗಳಲ್ಲಿ ಸಂಘಟಕರನ್ನು ನೇಮಿಸಿದ್ದಾರೆ. ಮಾವೋವಾದಿಗಳು `ನಗರ ಸೇನಾಪಡೆ’ಯನ್ನು ಅಭಿವೃದ್ಧಿಪಡಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಗೆರಿಲ್ಲಾ ದಾಳಿಯ ರಣನೀತಿಯನ್ನು ರೂಪಿಸಿದ್ದಾರೆ. ಅವರು ಸರಕಾರಿ ಗುಪ್ತಚರ ಏಜೆನ್ಸಿಗಳಲ್ಲಿ ನುಸುಳಲು ಪ್ರಯತ್ನಿಸುತ್ತಿದ್ದಾರೆ. `ಹಿಂದುತ್ವದ ರಾಜಕೀಯದಿಂದ ಉಂಟಾಗುವ ಅಸಮಾಧಾನಗಳನ್ನು ಬಂಡವಾಳವಾಗಿಸಿಕೊಳ್ಳುವ ಸಮಯ ಬಂದಿದೆ’, ಎಂದು ಅವರಿಗೆ ಅನಿಸುತ್ತದೆ. ಆಡಳಿತವು ಒಂದುವೇಳೆ ಮಾವೋವಾದಿಗಳ ನಗರ ಯೋಜನೆಯ ಗಾಂಭೀರ್ಯವನ್ನು ಬೇಗನೇ ಗುರುತಿಸದಿದ್ದರೆ, ದೇಶದ ವಿವಿಧ ನಗರಗಳು ಹಿಂಸಾಚಾರವನ್ನು ಎದುರಿಸಬೇಕಾಗಬಹುದು ಎಂದು ಮೂಲಗಳು ಎಚ್ಚರಿಸಿದೆ. ಈ ನಿಟ್ಟಿನಲ್ಲಿ ಸರಕಾರವು ಎಚ್ಚರವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೆಪ್ಟೆಂಬರ್ 26 ರಂದು ಎಲ್ಲಾ ಮಾವೋವಾದಿ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯೊಂದನ್ನು ಕರೆದಿದ್ದಾರೆ. ಈ ಸಭೆಯಲ್ಲಿ ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.

1. ‘ಇಂಡಿಯನ್ ಎಕ್ಸ್ ಪ್ರೆಸ್’ ಎಂಬ ಆಂಗ್ಲ ವರ್ತಮಾನಪತ್ರಿಕೆಯಲ್ಲಿ ಇತ್ತೀಚೆಗೆ ಮಾವೋವಾದಿ ಪಿತೂರಿಯ ಕುರಿತು ವರದಿಯನ್ನು ಮುದ್ರಿಸಲಾಗಿದೆ. ಅದರಂತೆ ಕೋರೆಗಾಂವ್ ಭೀಮಾ ಪ್ರಕರಣದಲ್ಲಿ ಮಾವೋವಾದಿಗಳ ನಗರ ನಾಯಕತ್ವದ ವಿರುದ್ಧ ಒಂದು ದೊಡ್ಡ ಕ್ರಮ ಕೈಗೊಳ್ಳಲಾಗಿತ್ತು. ಆದ್ದರಿಂದ ಅವರ ದೇಶವಿರೋಧಿ ಚಟುವಟಿಕೆಗಳು ದುರ್ಬಲಗೊಂಡಿದ್ದವು. ಈಗ ಅವರು ನಗರ ಜಾಲವನ್ನು ಪುನರ್ ನಿರ್ಮಿಸಲು ಆರಂಭಿಸಿದ್ದಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಅವರು ಭಾರತೀಯ ಕಮ್ಯುನಿಸ್ಟ್ ಪಕ್ಷದ (ಮಾವೋವಾದಿ) ಕೇಂದ್ರ ಸಮಿತಿಯ 7 ಸದಸ್ಯರನ್ನು ನೇಮಿಸಿದ್ದಾರೆ.

2. ಮಾವೋವಾದಿಗಳು ತಮ್ಮ ಯೋಜನೆಗಳ ಬಗ್ಗೆ ಚರ್ಚಿಸಲು ಮತ್ತು ಕ್ರಮ ಕೈಗೊಳ್ಳಲು ನಿಯಮಿತವಾಗಿ ‘ಆನ್‍ಲೈನ್’ ಸಭೆಗಳನ್ನು ನಡೆಸಲು ಆರಂಭಿಸಿದೆ. ‘ಮಾವೋವಾದಿಗಳು ಜಾತಿ ಮತ್ತು ಧರ್ಮದ ರಾಜಕೀಯದಿಂದ ಉದ್ಭವಿಸಿರುವ ಸಾಮಾಜಿಕ ಅಂತರದ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ಕಾರ್ಮಿಕ ವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರಲ್ಲಿ (ವಿಶೇಷವಾಗಿ ಮುಸಲ್ಮಾನರ) ಬೆಂಬಲಿಗರನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ಈಗಾಗಲೇ ದೆಹಲಿ ಮತ್ತು ಕೊಲಕಾತಾದಲ್ಲಿ ಮುಖ್ಯ ವಿಶ್ವವಿದ್ಯಾಲಯಗಳ ಜಾಲವನ್ನು ಹೊಂದಿದ್ದಾರೆ. ಈ ಮಾಧ್ಯಮದಿಂದ ಬಂಡುಕೋರ ಯುವಕರನ್ನು ಕಟ್ಟರವಾದಿಯನ್ನಾಗಿಸಲು ಅವರ ಪ್ರಯತ್ನ ನಡೆಯುತ್ತಿದೆ.