ಉಸಿರುಗಟ್ಟಿದ್ದರಿಂದ ಮಹಂತ ನರೇಂದ್ರ ಗಿರಿಯವರ ಮೃತ್ಯು

ಪ್ರಯಾಗರಾಜ (ಉತ್ತರಪ್ರದೇಶ) – ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿಯವರ ಶವವಿಚ್ಛೇದನೆಯನ್ನು ನಡೆಸಿದ ಐವರು ಡಾಕ್ಟರರು ಮಹಂತರ ಮೃತ್ಯು ಉಸಿರುಗಟ್ಟಿದುದರಿಂದಾಗಿದೆ ಎಂದು ವರದಿ ನೀಡಿದ್ದಾರೆ. ಅವರ ಕತ್ತಿನಲ್ಲಿ ನೇಣಿನ ಗುರುತು ಹಾಗೂ ‘ವ್ಹೀ ಆಕಾರ ಮೂಡಿದೆ. ಇದರ ಆಧಾರದಲ್ಲಿ ಪೊಲೀಸರು ಈಗ ಮುಂದಿನ ಅನ್ವೇಷಣೆ ನಡೆಸುತ್ತಿದ್ದಾರೆ. ಪೊಲೀಸರು ಆದ್ಯಾ ಪ್ರಸಾದ ತಿವಾರೀ ಹಾಗೂ ಅವರ ಮಗ ಸಂದೀಪ ತಿವಾರಿಯನ್ನು ಬಂಧಿಸಿ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಬಳಿಕ ಇಬ್ಬರಿಗೂ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಹಂತ ನರೇಂದ್ರ ಗಿರಿಯವರ ಪಾರ್ಥಿವ ಶರೀರದ ಭೂಸಮಾಧಿ !

ಮಹಂತ ನರೇಂದ್ರ ಗಿರಿಯವರ ಮೃತದೇಹದ ಶವವಿಚ್ಛೇದನೆದ ಬಳಿಕ ಅವರ ಪಾರ್ಥಿವವನ್ನು ಸಾಧುಗಳಿಗೆ ಒಪ್ಪಿಸಲಾಯಿತು. ಅನಂತರ ವಿಧಿಪೂರ್ವಕವಾಗಿ ಅವರಿಗೆ ಪ್ರಯಾಗರಾಜದಲ್ಲಿನ ಬಾಘಂಬರೀ ಮಠದಲ್ಲಿಯೇ ಭೂಸಮಾಧಿ ಮಾಡಲಾಯಿತು. ಅದಕ್ಕಿಂತ ಮೊದಲು ಅವರ ಅಂತ್ಯಯಾತ್ರೆ ನಡೆಯಿತು. ಅನಂತರ ಪಾರ್ಥಿವವನ್ನು ಗಂಗಾ ತೀರಕ್ಕೆ ಕೊಂಡೊಯ್ದು ಅಲ್ಲಿ ಸ್ನಾನ ಮಾಡಿಸಲಾಯಿತು. ಅನಂತರ ಅಲ್ಲಿನ ಲೆಟೆ ಹನುಮಾನ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿಸಿ ಅಂತ್ಯಯಾತ್ರೆಯು ಮಧ್ಯಾಹ್ನ ಮಠಕ್ಕೆ ತಲುಪಿತು. ಅನಂತರ ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಾಗಿದ್ದ ಸಂತರು, ಮಹಂತರು, ಸಾಧುಗಳ ಹಸ್ತದಲ್ಲಿ ಭೂಸಮಾಧಿ ಮಾಡಲಾಯಿತು.