ದೇಶದಲ್ಲಿ ಭಗವಾನ್ ಶ್ರೀರಾಮನ ಹೆಸರಿನಲ್ಲಿ ೩ ಸಾವಿರದ ೬೨೬ ಹಾಗೂ ಶ್ರೀಕೃಷ್ಣನ ಹೆಸರಿನಲ್ಲಿ ೩ ಸಾವಿರದ ೩೦೯ ಗ್ರಾಮಗಳ ಹೆಸರುಗಳಿವೆ !

‘ದೇವರನ್ನು ರಿಟೈರ್ಡ್ ಮಾಡಿ’ ಎನ್ನುವವರ ಹೆಸರನ್ನು ಯಾರಾದರೂ ಯಾವುದಾದರೂ ಗ್ರಾಮಕ್ಕೆ ಕೊಡುತ್ತಾರೆಯೇ ?

ನವ ದೆಹಲಿ – ದೇಶದಲ್ಲಿ ೨೦೨೧ ರಲ್ಲಿ ಮಾಡಿದ ಜನಗಣತಿಗನುಸಾರ ಭಗವಾನ್ ಶ್ರೀರಾಮನ ಹೆಸರಿರುವ ೩ ಸಾವಿರದ ೬೨೬ ಹಾಗೂ ಭಗವಾನ್ ಶ್ರೀಕೃಷ್ಣನ ಹೆಸರಿರುವ ೩ ಸಾವಿರದ ೩೦೯ ಗ್ರಾಮಗಳಿವೆ. ಅದೇ ರೀತಿ ಶ್ರೀಗಣೇಶನ ಹೆಸರಿರುವ ೪೪೬ ಮತ್ತು ಗುರುನಾನಕ ಇವರ ಹೆಸರಿರುವ ೩೫ ಗ್ರಾಮಗಳಿವೆ. ದೇಶದಲ್ಲಿ ೬ ಲಕ್ಷ ೭೭ ಸಾವಿರಕ್ಕಿಂತ ಹೆಚ್ಚು ಗ್ರಾಮದ ಹೆಸರಿನ ಅಭ್ಯಾಸ ಮಾಡಿದ ನಂತರ ಈ ಮಾಹಿತಿ ಬೆಳಕಿಗೆ ಬಂದಿದೆ.

೧. ದೇಶದಲ್ಲಿ ೪೧ ಕಾಶಿ ಮತ್ತು ೧೭ ಪ್ರಯಾಗರಾಜ ಹೆಸರಿರುವ ಗ್ರಾಮಗಳಿವೆ.

೨. ಭಾರತದಲ್ಲಿ ಬಾಂಗ್ಲಾದೇಶದ ರಾಜಧಾನಿ ‘ಢಾಕಾ’ ಹೆಸರಿನ ೨೮ ಗ್ರಾಮಗಳಿದ್ದೂ ‘ನೇಪಾಲ’ನ ಹೆಸರಿನ ೪೦ ಗ್ರಾಮಗಳಿವೆ.

೩. ದೇಶದಲ್ಲಿ ೧೮೭ ಗ್ರಾಮದ ಹೆಸರು ‘ಭರತ’ ಎಂದಿದೆ ಹಾಗೂ ೧೬೦ ಗ್ರಾಮದ ಹೆಸರು ‘ಲಕ್ಷ್ಮಣ’ ಎಂದಿದೆ. ‘ಸೀತಾ’ ಹೆಸರಿನ ೭೫ ಗ್ರಾಮಗಳಿದ್ದು ‘ಹನುಮಾನ’ ಹೆಸರಿರುವ ೩೬೭ ಗ್ರಾಮಗಳಿವೆ. ರಾವಣನ ಹೆಸರಿರುವ ೬ ಗ್ರಾಮಗಳು ಸಹ ಇವೆ. ಆದರೆ ರಾವಣನ ಸಹೋದರ ವಿಭೀಷಣನ ಹೆಸರಿನ ಯಾವುದೇ ಗ್ರಾಮವಿಲ್ಲ.

೪. ದೇಶದಲ್ಲಿ ಕುರುಕ್ಷೇತ್ರ ಹೆಸರಿನ ಯಾವುದೇ ಗ್ರಾಮಗಳಿಲ್ಲ. ಧರ್ಮರಾಜ ಯುಧಿಷ್ಠಿರ ಹೆಸರಿನ ೨ ಗ್ರಾಮಗಳಿವೆ ಹಾಗೂ ಭೀಮನ ಹೆಸರಿನ ೩೮೫, ಅರ್ಜುನ ೨೫೯, ಧೃತರಾಷ್ಟ್ರನ ೮, ಕಂಸ ಇವನ ಹೆಸರಿನ ೪೨ ಗ್ರಾಮಗಳಿವೆ. ಒಡಿಶಾದಲ್ಲಿ ಕೇವಲ ಒಂದು ಗ್ರಾಮದ ಹೆಸರು ಭೀಷ್ಮ ಪಿತಾಮಹನ ಎಂದಿದೆ.

೫. ಮ. ಗಾಂಧೀಜಿ ಅವರ ಹೆಸರಿನ ೧೧೭ ಗ್ರಾಮಗಳಿವೆ ಹಾಗೂ ನೆಹರು ಇವರ ಹೆಸರಿನ ೭೨ ಗ್ರಾಮಗಳಿವೆ. ಮಾಜಿ ಪ್ರಧಾನಿ ಲಾಲ ಬಹದ್ದೂರ್ ಶಾಸ್ತ್ರಿ ಇವರ ಹೆಸರು ೨೦೧೧ ರ ವರೆಗೆ ಒಂದೂ ಗ್ರಾಮಕ್ಕೂ ಹೆಸರು ಇರಲಿಲ್ಲ. ಇಂದಿರಾ ಗಾಂಧಿ ೩೬, ರಾಜೀವ್ ಗಾಂಧಿ ೧೯ ಮತ್ತು ಸುಭಾಷಚಂದ್ರ ಬೋಸ್ ಇವರ ಹೆಸರು ೨೭ ಗ್ರಾಮಗಳಿಗಿದೆ.

೬. ಮೊಗಲ್ ಬಾದಶಹ ಅಕ್ಬರ್ ಇವನ ಹೆಸರಿನ ೨೩೪, ಬಾಬರ್ ೬೨, ಹುಮಾಯೂಂ ೩೦, ಶಾಹಜಹಾನ್ ೫೧ ಮತ್ತು ಔರಂಗಜೇಬ್ ಇವನ ಹೆಸರಿನ ೮ ಗ್ರಾಮಗಳಿದ್ದು ಈ ಎಲ್ಲಾ ಗ್ರಾಮಗಳು ಉತ್ತರಪ್ರದೇಶದ ಬೀಜನೌರ ಜಿಲ್ಲೆಯಲ್ಲಿವೆ. (ಭಾಜಪ ರಾಜ್ಯದಲ್ಲಿ ಇರುವ ಈ ಹೆಸರು ತಕ್ಷಣವೇ ಬದಲಾಯಿಸಿ ಮೊಗಲರ ಗುಲಾಮಗಿರಿ ಮುಗಿಸುವುದು ಅವಶ್ಯಕವಾಗಿದೆ ! – ಸಂಪಾದಕರು)