ಕೃಷ್ಣ ಭಕ್ತಿ ಮಾಡಲು ಹರಿಯಾಣದ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯಾದ ಭಾರತಿ ಅರೋರಾ ಇವರಿಂದ ಸ್ವೇಚ್ಛೆಯಿಂದ ನಿವೃತ್ತಿ ಪಡೆಯುವ ನಿರ್ಧಾರ !

ಇತರ ಪೊಲೀಸ್ ಅಧಿಕಾರಿಗಳು ಪೊಲೀಸ್ ಅಧಿಕಾರಿ ಅರೋರಾರಂತೆ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ ಸಾಧನೆಯನ್ನೂ ಮಾಡಿದರೆ ಭಾರತದಲ್ಲಿ ರಾಮರಾಜ್ಯ ಬರಲು ಸಹಾಯವಾಗಲಿದೆ !

ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಭಾರತಿ ಅರೋರಾ

ಚಂಡೀಗಡ್ : ಸಂತ ಮೀರಾಬಾಯಿಯಂತೆ ಕೃಷ್ಣಭಕ್ತಿಯಲ್ಲಿ ಜೀವನವನ್ನು ಕಳೆಯಲಿಕ್ಕಾಗಿ ಹರಿಯಾಣದ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿ ಭಾರತಿ ಅರೋರಾ ಸ್ವೇಚ್ಛಾ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಅರೋರಾ ಅವರಿಗೆ ತಮ್ಮ ಉಳಿದ ಜೀವನವನ್ನು ಧಾರ್ಮಿಕ ಚಟುವಟಿಕೆಗಳಲ್ಲಿ ಕಳೆಯಲಿಕ್ಕಿದೆ ಎಂದು ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹರಿಯಾಣದ ‘ಕಾಡರ್’ನ ಭಾರತೀಯ ಪೊಲೀಸ್ ಸೇವೆಯಲ್ಲಿನ (ಐಪಿಎಸ್) ಅಧಿಕಾರಿಯಾದ ಅರೋರಾ ಅವರ ಅರ್ಜಿ ಕುರಿತು ಸರಕಾರವು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

1. ಹರಿಯಾಣ ರೈಲ್ವೆ ಪೊಲೀಸ್‍ನಲ್ಲಿ ಪೊಲೀಸ್ ಅಧೀಕ್ಷಕರಾಗಿದ್ದಾಗ, ಅವರು ಸಮಜೌತಾ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಸ್ವಾಭಾವಿಕವಾಗಿ, ಅವರು 2031 ರಲ್ಲಿ ನಿವೃತ್ತರಾಗುತ್ತಿದ್ದರು; ಆದರೆ ಅವರು 10 ವರ್ಷದ ಮೊದಲೇ ಸ್ವಯಂಪ್ರೇರಣೆಯಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಅದಕ್ಕಾಗಿಯೇ ಆಶ್ಚರ್ಯ ವ್ಯಕ್ತಪಡಿಸಲಾಗುತ್ತಿದೆ.

2. ಈ ನಿಟ್ಟಿನಲ್ಲಿ ಅವರು ಜುಲೈ 24 ರಂದು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಅವರ ಅಭಿಪ್ರಾಯದಂತೆ, ಪೊಲೀಸ್ ಸೇವೆ ಅವರಿಗೆ ಹೆಮ್ಮೆಯ ವಿಷಯವಾಗಿದೆ; ಆದರೆ ಅವರಿಗೆ ತಮ್ಮ ಉಳಿದ ಜೀವನವನ್ನು ಧಾರ್ಮಿಕ ರೀತಿಯಲ್ಲಿ ಕಳೆಯುವ ಇಚ್ಛೆಯಿದೆ. ಅವರಿಗೆ ಚೈತನ್ಯ ಮಹಾಪ್ರಭು, ಸಂತ ಕಬೀರ ಮತ್ತು ಸಂತ ಮೀರಾಬಾಯಿ ಇವರೆಲ್ಲರಂತೆ ಶ್ರೀಕೃಷ್ಣನ ಭಕ್ತಿ ಮಾಡಲಿಕ್ಕಿದೆ.(ಪೊಲೀಸ್ ಪಡೆಯಲ್ಲಿ ಇಂತಹ ಅಧಿಕಾರಿ ಅಥವಾ ಇಂತಹ ಸಿಬ್ಬಂದಿ ಸಿಗುವುದು ಬಹಳ ಅಪರೂಪವಾಗಿದೆ ! – ಸಂಪಾದಕರು)

3. ಅರೋರಾ ಅವರಿಗೆ ಹರಿಯಾಣ ಕಾಡರ್‍ ನ ಐಪಿಎಸ್ ವಿಕಾಸ್ ಅರೋರಾ ಅವರೊಂದಿಗೆ ವಿವಾಹವಾಗಿದೆ. 50 ವರ್ಷದ ಅರೋರಾ ಸ್ವಯಂಪ್ರೇರಿತ ನಿವೃತ್ತಿಗಾಗಿ ಅರ್ಜಿ ಸಲ್ಲಿಸಿದ ಮೊದಲ ಮಹಿಳಾ ಪೊಲೀಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ, ಹಿರಿಯ ಪೊಲೀಸ್ ಅಧಿಕಾರಿಗಳು ತಿಳುವಳಿಕೆಯನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. (ಹಿಂದೂಗಳಿಗೆ ಧರ್ಮಶಿಕ್ಷಣ ಕೊರತೆಯಿಂದ ವ್ಯಕ್ತಿಯು ಧಾರ್ಮಿಕ ಕೆಲಸಕ್ಕಾಗಿ ಸ್ವಯಂ ನಿವೃತ್ತಿ ಪಡೆದರೆ, ಅವರಿಗೆ ತಿಳುವಳಿಕೆ ನೀಡಲು ಪ್ರಯತ್ನಿಸಲಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ತದ್ವಿರುದ್ಧ ಜೈನ ಪಂಥದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ತಮ್ಮ ತಂದೆಯ ಕೋಟಿಗಟ್ಟಲೆ ಆಸ್ತಿಯನ್ನು ತ್ಯಾಗ ಮಾಡಿ ಸನ್ಯಾಸಿಗಳಾಗುತ್ತಾರೆ ಹಾಗೂ ಅವರ ಮೆರವಣಿಗೆಯನ್ನು ನಡೆಸುತ್ತಾರೆ; ಆನಂದೋತ್ಸವ ಆಚರಿಸಲಾಗುತ್ತದೆ. – ಸಂಪಾದಕರು)