ಸಂಚಾರ ನಿಷೇಧದಿಂದ ಮುಚ್ಚಲ್ಪಟ್ಟಿರುವ ಸಿರಸಾ (ಹರಿಯಾಣಾ) ದ ‘ರೈಸ್ ಮಿಲ್’ಗೆ ವಿದ್ಯುತ್ ಇಲಾಖೆಯು ೯೦ ಕೋಟಿ ರೂಪಾಯಿ ವಿದ್ಯುತ್ ಬಿಲ್ ನೀಡಿದೆ !

ಇದರಿಂದ ವಿದ್ಯುತ್ ವಿತರಣಾ ವಿಭಾಗದ ಕೆಲಸ ಹೇಗೆ ನಡೆಯುತ್ತಿರಬಹುದು ಎಂಬ ಕಲ್ಪನೆ ಬರಬಹುದು ! ದೋಷಪೂರ್ಣ ಪಾವತಿಗಳನ್ನು ಕಳುಹಿಸುವ ಮೂಲಕ  ಗ್ರಾಹಕರಿಗೆ ಮನಸ್ತಾಪ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು !

ಸಿರಸಾ (ಹರಿಯಾಣಾ) – ಸಂಚಾರ ನಿಷೇಧದಿಂದ ಮುಚ್ಚಿದ್ದ ಸಿರಸಾದ ಕಲಾಂವಲಿ ಪ್ರದೇಶದ ‘ಗಣೇಶ ರೈಸ್ ಮಿಲ್’ಗೆ ವಿದ್ಯುತ್ ವಿತರಣಾ ಇಲಾಖೆ ೯೦ ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಕಳುಹಿಸಿದೆ. ಇದು ತಾಂತ್ರಿಕ ದೋಷದಿಂದಾಯಿತು ಎಂದು ವಿದ್ಯುತ್ ವಿತರಣಾ ಇಲಾಖೆಯು ಒಪ್ಪಿಕೊಂಡಿದೆ.

ಈ ಪಾವತಿಯನ್ನು ನೋಡಿ ‘ಗಣೇಶ ರೈಸ್ ಮಿಲ್’ ನಿರ್ದೇಶಕರ ನಿದ್ರೆ ಹಾರಿಹೋಯಿತು. ಯಾವಾಗಲು ‘ಮಿಲ್’ಗೆ ೫ ರಿಂದ ೬ ಲಕ್ಷ ರೂಪಾಯಿವರೆಗೆ ಬಿಲ್ ಬರುತ್ತಿತ್ತು. ಉಪ ವಿಭಾಗೀಯ ಅಧಿಕಾರಿ ರವಿ ಕುಮಾರ್ ಅವರು ಹೊಸ ಪಾವತಿಯ ಬಗೆಗಿನ ಗೊಂದಲವನ್ನು ಆದಷ್ಟು ಬೇಗನೆ ಪರಿಹರಿಸಿ ಹೊಸ ಪಾವತಿಯನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.