ಜೈಪುರದ ಹಿಂದೂ ದೇವಾಲಯಗಳ ಧ್ವನಿವರ್ಧಕದ ಮೇಲೆ ಆಡಳಿತದಿಂದ ನಿಷೇಧ; ಆದರೆ ಇತರ ಧರ್ಮದವರಿಗೆ ವಿನಾಯಿತಿ !

ಬಿಜೆಪಿ ಶಾಸಕರಿಂದ ವಿರೋಧ !

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಇರುವುದರಿಂದ ಹಿಂದೂ ಧರ್ಮದ ಮೇಲೆ ದಾಳಿ ಮಾಡುವ ಪ್ರಯತ್ನಗಳೇ ನಡೆಯಲಿವೆ ! ಇದನ್ನು ಹಿಂದೂಗಳು ಒಟ್ಟಾಗಿ ಕಾನೂನುರೀತ್ಯಾ ವಿರೋಧಿಸಬೇಕು !

ಜೈಪುರ (ರಾಜಸ್ಥಾನ) – ನಗರದ ಹಿಂದೂ ದೇವಾಲಯಗಳ ಮೇಲೆ ಧ್ವನಿವರ್ಧಕಗಳನ್ನು ಬಲವಂತವಾಗಿ ನಿಲ್ಲಿಸಿದ ಬಗ್ಗೆ ಉತ್ತರಿಸುವಂತೆ ಬಿಜೆಪಿ ಶಾಸಕ ಮತ್ತು ಮಾಜಿ ಮಹಾಪೌರ ಅಶೋಕ ಲಾಹೋಟಿ ನಗರದ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇತರ ಧಾರ್ಮಿಕ ಸ್ಥಳಗಳಿಗೆ ಧ್ವನಿವರ್ಧಕಗಳನ್ನು ಹಾಕಲು ಅವಕಾಶವಿದೆ. ಲಾಹೋಟಿಯವರು ಈ ಪತ್ರವನ್ನು ಟ್ವಿಟರ್‍ನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು, ರಾಜ್ಯದ ಮುಖ್ಯಮಂತ್ರಿ ಅಶೋಕ ಗಲಹೊತ ಮತ್ತು ಸಾಂಗಾನೇರನ ಆಡಳಿತವು ಹಿಂದೂ ದೇವಾಲಯಗಳ ಮೇಲಿನ ಧ್ವನಿವರ್ಧಕದಿಂದ ಕೇಳಿಬರುವ ಆರತಿ ಮತ್ತು ಪೂಜೆಯನ್ನು ನಿಲ್ಲಿಸುತ್ತಿದೆ ಆದರೆ ಇತರ ಧರ್ಮಗಳ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಮೇಲೆ ಯಾವುದೇ ನಿಷೇಧವಿಲ್ಲ. ಎಂದು ಬರೆದಿದ್ದಾರೆ.