ಆಂಬುಲೆನ್ಸ್‍ನ ಚಾಲಕ ೩೫,೦೦೦ ರೂಪಾಯಿ ಕೇಳಿದ್ದರಿಂದ ಅಸಹಾಯಕ ತಂದೆಯ ಕೃತಿ !
ಪದೇ ಪದೇ ಇಂತಹ ದೂರುಗಳು ಬಂದರೂ ಇಂತಹ ಪ್ರಸಂಗಗಳನ್ನು ತಡೆಯಲು ಸಾಧ್ಯವಾಗದಿರುವುದು ಸರಕಾರಿ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ ! ಇಂತಹ ಅಮಾನವೀಯ ಕೃತ್ಯಗಳನ್ನು ಎಸಗುವವರನ್ನು ಸರಕಾರವು ಸೆರೆಮನೆಗೆ ಅಟ್ಟಬೇಕು ! ಇಂತಹ ಘಟನೆಗಳನ್ನು ತಡೆಗಟ್ಟಲು ಸರಕಾರವು ರಾಷ್ಟ್ರೀಯ ಮಟ್ಟದಲ್ಲಿ ಆಂಬ್ಯುಲೆನ್ಸ್ ಚಾಲಕರಿಗೆ ಶುಲ್ಕವನ್ನು ಏಕೆ ನಿಗದಿಪಡಿಸುವುದಿಲ್ಲ ? |
ಕೋಟಾ (ರಾಜಸ್ಥಾನ) – ಕೊರೊನಾದಿಂದ ಮೃತಪಟ್ಟ ತನ್ನ ಸ್ವಂತ ಮಗಳ ಶವವನ್ನು ಮನೆಗೆ ಕೊಂಡೊಯ್ಯಲು ಆಂಬುಲೆನ್ಸ್ ಚಾಲಕನು ೩೫೦೦೦ ರೂಪಾಯಿ ಕೇಳಿದನು. ಮೃತಪಟ್ಟ ಮಗಳನ್ನು ತಂದೆಯು ಕಾರಿನಲ್ಲಿ ಸೀಟ್ ಬೆಲ್ಟ್ ಕಟ್ಟಿ ತೆಗೆದುಕೊಂಡು ಹೋದ ಆಘಾತಕಾರಿ ಘಟನೆಯು ಬಹಿರಂಗಗೊಂಡಿದೆ. ಈ ಘಟನೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗಿದೆ.
(ಸೌಜನ್ಯ : ABP NEWS )
ಈ ಬಗ್ಗೆ ಮೃತಪಟ್ಟ ಹುಡುಗಿಯ ಚಿಕ್ಕಪ್ಪ ಮಧು ರಾಜಾ ಇವರು ಪ್ರಸಾರ ಮಾಧ್ಯಮರೊಂದಿಗೆ ಮಾತನಾಡುವಾಗ, ತನ್ನ ಸೋದರನ ೩೪ ವರ್ಷದ ಮಗಳು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ನಂತರ ‘ವಾರ್ಡ್ ಬಾಯ್‍ನಿಂದ ಹಿಡಿದು ಆಂಬುಲೆನ್ಸ್ ಚಾಲಕನವರೆಗೆ ಎಲ್ಲರೂ ನಮ್ಮಿಂದ ಹಣಕ್ಕಾಗಿ ಬೇಡಿಕೆ ಇಟ್ಟರು. ವಾರ್ಡ್ ಬಾಯ್ ಸೋದರನ ಮಗಳ ಶವವನ್ನು ‘ಸ್ಟ್ರೆಚರ್’ನಿಂದ ಆಂಬ್ಯುಲೆನ್ಸ್ ತನಕ ತರಲು ೧ ಸಾವಿರ ರೂಪಾಯಿ ಕೇಳಿದ. ಹೇಗೋ ಮಾಡಿ ಶವವನ್ನು ಆಂಬುಲೆನ್ಸ್ ತನಕ ತಂದನಂತರ ಬೇರೆ ಬೇರೆ ಆಂಬುಲೆನ್ಸ್ ಚಾಲಕರು ಆಕೆಯ ಶವವನ್ನು ಮನೆಗೆ ಕೊಂಡೊಯ್ಯಲು ೧೮,೦೦೦ ದಿಂದ ೩೫,೦೦೦ ರೂಪಾಯಿ ತನಕ ಬೇಡಿಕೆ ಮಾಡಿದರು. ನಂತರ ಮೃತ ಪಟ್ಟ ಹುಡುಗಿಯ ತಂದೆಯು ಮಗಳ ಮೃತ ದೇಹವನ್ನು ಕಾರಿನ ಸೀಟಿನ ಮೇಲೆ ಇರಿಸಿ, ಅದನ್ನು ಸೀಟ್ ಬೆಲ್ಟ್‍ನಿಂದ ಕಟ್ಟಿ ಮನೆಗೆ ಕರೆದೊಯ್ದರು. ಅವರ ಮಗಳು ವಿವಾಹಿತಳಾಗಿದ್ದು ಒಬ್ಬ ಮಗನೂ ಇದ್ದಾನೆ.