ಕೊರೋನಾದ ಕಾಲದಲ್ಲಿ ವಿದೇಶದಲ್ಲಿ ಹಸುವನ್ನು ತಬ್ಬಿಕೊಳ್ಳುವ ವಿಧಾನ ನಾಗರಿಕರಿಗೆ ಲಾಭದಾಯಕವಾಗುತ್ತಿದೆ !

ಮಾನಸಿಕ ಒತ್ತಡವನ್ನು ನಿವಾರಿಸಲು ಸೂಕ್ತ ಪರಿಹಾರ ಎಂದು ಅಮೇರಿಕಾ ಮತ್ತು ಯುರೋಪಿನ ಜನರ ಅಭಿಪ್ರಾಯ !

‘ಕೌ ಥೆರಪಿ'(ಗೋವು ಚಿಕಿತ್ಸೆ) ವಿದೇಶದಲ್ಲಿ ಬಹಳ ಜನಪ್ರಿಯವಾಗುತ್ತಿದೆ. ಭಾರತದಲ್ಲಿ ಹೀಗೆ ಎಂದಾದರೂ ಸಾಧ್ಯವಿದೆಯೇ ? ವಿದೇಶಿಯರು ಹಸುಗಳ ಮಹತ್ವವನ್ನು ಅರ್ಥಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಹಿಂದೂ ಸಂಸ್ಕೃತಿಯಲ್ಲಿ ಹಸುವಿನ ಮಹತ್ವವನ್ನು ಒತ್ತಿಹೇಳಲಾಗಿದ್ದರೂ, ಗೋಹತ್ಯೆಯನ್ನು ತಡೆಯಲು ಅಥವಾ ಹಸುಗಳನ್ನು ಸಾಕಲು ಏನೂ ಮಾಡಲಾಗುತ್ತಿಲ್ಲ, ಎಂಬುದು ಸಂತಾಪಜನಕವಾಗಿದೆ !

ಮುಂಬಯಿ – ಕೊರೊನಾದ ಕಾಲದಲ್ಲಿ ಆಗುತ್ತಿರುವ ಮಾನಸಿಕ ಒತ್ತಡವನ್ನು ಎದುರಿಸಲು ಅಮೇರಿಕಾ ಮತ್ತು ಯುರೋಪಿನ ಜನರು ಹಸುಗಳನ್ನು ತಬ್ಬಿಕೊಳ್ಳಲಾರಂಭಿಸಿದ್ದಾರೆ. ಇದಕ್ಕಾಗಿ ಅನೇಕರು ೧೪,೫೦೦ ರೂಪಾಯಿ ತನಕ ಹಣವನ್ನೂ ನೀಡುತ್ತಿದ್ದಾರೆ. ಈ ಮೊದಲು ವಿದೇಶದಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿರುವುದು ಗಮನಕ್ಕೆ ಬಂದಿತ್ತು; ಆದರೆ ಕೊರೊನಾ ಕಾಲಾವಧಿಯಲ್ಲಿ ಇದರಲ್ಲಿ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತದೆ. ಹಸುವನ್ನು ತಬ್ಬಿಕೊಳ್ಳುವ ಪದ್ಧತಿಯು ಮಾನಸಿಕ ಒತ್ತಡವನ್ನು ನಿವಾರಿಸುವುದರ ಜೊತೆಗೆ ಆರೋಗ್ಯವಂತರಾಗಿರಲು ಸಹ ಲಾಭದಾಯಕವಾಗಿದೆ ಎಂದು ಗಮನಕ್ಕೆ ಬಂದಿದೆ.

ಹಸುಗಳನ್ನು ತಬ್ಬಿಕೊಳ್ಳುವುದರಿಂದ ಹಾರ್ಮೋನ್ ಆಕ್ಸಿಟೋಸಿನ್, ಸಿರೊಟೋನಿನ್ ಮತ್ತು ಡೋಪಮೈನ್ ಗೆ ಪ್ರಚೋದಕವಾಗಿ ಕಾರ್ಯನಿರ್ವಹಿಸುತ್ತದೆ. ಕಾರ್ಟಿಸೋಲ್ ಕಡಿಮೆಗೊಳಿಸುತ್ತದೆ. ಜೊತೆಗೆ ಒತ್ತಡ, ಆತಂಕ ಮತ್ತು ಉದ್ವಿಗ್ನತೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಸುವಿನ ಸ್ವಭಾವ ಶಾಂತ, ಸೌಮ್ಯ ಮತ್ತು ತಾಳ್ಮೆಯಿಂದ ಕೂಡಿರುತ್ತದೆ. ಹಸುವನ್ನು ತಬ್ಬಿಕೊಳ್ಳುವುದರಿಂದ ವ್ಯಕ್ತಿಯ ಶರೀರದಲ್ಲಿನ ಜೀರ್ಣ ಕ್ರಿಯೆ, ರೋಗ ನಿರೋಧಕ ಶಕ್ತಿ ಮತ್ತು ಒತ್ತಡವನ್ನು ನಿಯಂತ್ರಿಸಲು ಸಹಾಯವಾಗುತ್ತದೆ.