ರಾಜಸ್ಥಾನ : ಸಂವಿತ್ ಸೋಮಗಿರಿ ಮಹಾರಾಜರ ದೇಹತ್ಯಾಗ !

ಜೋಧ್‌ಪುರ (ರಾಜಸ್ಥಾನ) – ಬಿಕಾನೆರ್‌ನ ಶಿವಬಾಡಿ ಮಠದ ಮಹಂತ ಸಂವಿತ್ ಸೋಮಗಿರಿ ಮಹಾರಾಜ ಇವರು ಮೇ ೧೮ ರ ರಾತ್ರಿ ಬಿಕಾನೆರ್‌ನಲ್ಲಿ ದೇಹತ್ಯಾಗ ಮಾಡಿದರು. ಸಂವಿತ್ ಸೋಮಗಿರಿ ಮಹಾರಾಜ ಎಂಜಿನಿಯರ್ ಆಗಿದ್ದರು. ಅವರು ಬೃಹತ್ ಪ್ರಮಾಣದಲ್ಲಿ ಭಗವದ್ಗೀತೆಯನ್ನು ಪ್ರಸಾರ ಮಾಡಿದರು. ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅವರ ಅನುಯಾಯಿಗಳಿದ್ದಾರೆ. ಬಿಕಾನೆರ್ ಹೊರತುಪಡಿಸಿ ಮೌಂಟ್ ಅಬುವಿನಲ್ಲಿ ಒಂದು ಮಠ ಇದೆ. ಸಂವಿತ್ ಸೋಮಗಿರಿ ಮಹಾರಾಜರ ದೇಹತ್ಯಾಗದ ನಂತರ ಬಿಕಾನೇರ್‌ನಲ್ಲಿರುವ ದೇವಾಲಯ, ಮಠ ಮತ್ತು ಆಶ್ರಮದ ಮಹಂತ ಮತ್ತು ಪುರೋಹಿತರು ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

೨೦೧೬ ಬಿಕಾನೆರ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ್ದ ಹಿಂದೂ ರಾಷ್ಟ್ರದ ವಿಷಯದ ಕುರಿತು ಮಾರ್ಗದರ್ಶನ ಮಾಡುತ್ತಿರುವ ಸಂವಿತ್ ಸೋಮಗಿರಿ ಮಹಾರಾಜ್

 

ಉಜ್ಜಯಿನಿಯ ಗುರುಕುಲ್ ಸಮ್ಮೇಳನದಲ್ಲಿ ಸಂವಿತ್ ಸೋಮಗಿರಿ ಮಹಾರಾಜ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರು ಸದ್ಗುರು ಡಾ. ಚಾರುದತ್ತ ಪಿಂಗಲೆ ಅವರೊಂದಿಗೆ ಮಾತನಾಡುವ ಕ್ಷಣ! (ವರ್ಷ ೨೦೧೮)

 

ಬಿಕಾನೆರ್‌ನ ಶಿವಬದಿ ಶಿವ ಮಂದಿರದಲ್ಲಿ ನಡೆದ ಧರ್ಮಶಿಕ್ಷಣ ಪ್ರದರ್ಶನಕ್ಕೆ ಭೇಟಿ ನೀಡಿದಾಗ, ಸಂವಿತ್ ಸೋಮಗಿರಿ ಮಹಾರಾಜ್ ಮತ್ತು ಅವರೊಂದಿಗೆ ಮಾತನಾಡುತ್ತಿರುವ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂಧೆ

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಮನತುಂಬಿ ಆಶೀರ್ವಾದ

ಸಂವಿತ್ ಸೋಮಗಿರಿ ಮಹಾರಾಜ ಅವರಿಗೆ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯೊಂದಿಗಿದ್ದ ಋಣಾನುಬಂಧ !

೨೦೧೬ ರಲ್ಲಿ ಸಂವಿತ್ ಸೋಮಗಿರಿ ಮಹಾರಾಜ ಅವರೊಂದಿಗೆ ಸಂಪರ್ಕಕ್ಕೆ ಬಂದಾಗಿನಿಂದ, ಹಿಂದೂ ಜಾಗೃತಿ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅವರು ನಿರಂತರವಾಗಿ ಆಶೀರ್ವಾದವನ್ನು ನೀಡಿದ್ದಾರೆ. ರಾಜಸ್ಥಾನದ ಬಿಕಾನೆರನಲ್ಲಿ ಧರ್ಮಪ್ರಸಾರಕ್ಕಾಗಿ ಹೋಗುವ ಹಿಂದೂ ಜನಜಾಗೃತಿ ಸಮಿತಿಯ ಪೂರ್ಣವೇಳೆ ಕಾರ್ಯಕರ್ತರಿಗೆ ವಸತಿ ಮತ್ತು ಊಟವನ್ನು ಮಹಾರಾಜರ ಶಿವಬಾಡಿ ಮಠದಲ್ಲಿಯೇ ಏರ್ಪಡಿಸಲಾಗುತ್ತಿತ್ತು. ಗೋವಾದಲ್ಲಿ ನಡೆಯುತ್ತಿದ್ದ ಎಲ್ಲ ಅಖಿಲ ಭಾರತೀಯ ಹಿಂದೂ ಅಧಿವೇಶನಗಳಿಗೆ ಮಹಾರಾಜರು ತಪ್ಪದೇ ಉಪಸ್ಥಿತರಿರುತ್ತಿದ್ದರು. ಶಿವಬಾಡಿಯ ಶಿವ ಮಂದಿರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಸಮಿತಿಯ ಧರ್ಮಶಿಕ್ಷಣ ನೀಡುವ ಫಲಕಗಳ ಪ್ರದರ್ಶನ ಹಾಕಲು ಅಥವಾ ಸನಾತನ ಸಂಸ್ಥೆಯ ಗ್ರಂಥಪ್ರದರ್ಶನವನ್ನು ಹಾಕಲು ಅವರಿಂದ ಆಮಂತ್ರಣ ಇದ್ದೇ ಇರುತ್ತದೆ. ಕೋಟಾಗೆ ಧರ್ಮಪ್ರಸಾರಕ್ಕೆ ಹೋಗುವ ಕಾರ್ಯಕರ್ತರಿಗೆ ಅವರು ಅಲ್ಲಿಯ ತಮ್ಮ ಸಾಧಕರಲ್ಲಿಯೇ ಸಂಪೂರ್ಣ ವ್ಯವಸ್ಥೆಯನ್ನು ಮಾಡಿದರು. ಕಾಲಕಾಲಕ್ಕೆ ಅವರು ಕಾರ್ಯಕ್ಕೆ ಉಪಯುಕ್ತ ಸಂಪರ್ಕಗಳನ್ನು ಒದಗಿಸುತ್ತಿದ್ದರು.

ಹಿಂದೂಗಳಲ್ಲಿ ಚೇತನಾವನ್ನು ಜಾಗೃತವಾಗಿರಿಸುವ ವಿಶಿಷ್ಟ ಸಂತರು !

ಗೀತಾ ಪರೀಕ್ಷೆಯ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಗೀತೆಯ ಜ್ಞಾನವನ್ನು ನೀಡುವುದಿರಲಿ, ಸಂವಿತ್ ಶೂಟಿಂಗ್ ಸಂಸ್ಥೆಯ ಮೂಲಕ ಯುವಕರಿಗೆ ತರಬೇತಿ ನೀಡುವುದಿರಲಿ ಅಥವಾ ಶಿವಬಾಡಿ ದೇವಾಲಯದ ಸ್ವರೂಪವನ್ನು ಪರಿವರ್ತಿಸುವ ಮೂಲಕ ಬಿಕಾನೆರ್ ಜನರಿಗೆ ಧರ್ಮಪೀಠವನ್ನು ನೀಡುವುದಾಗಲಿ ಹೀಗೆ ಅನೇಕ ಕಾರ್ಯಗಳನ್ನು ಮಾಡಿ ಹಿಂದೂಗಳಲ್ಲಿ ಚೇತನಾವನ್ನು ಜಾಗೃತಗೊಳಿಸಿದಂತಹ ವಿಶಿಷ್ಟ ಸಂತರಾಗಿದ್ದರು. ಧರ್ಮಕ್ಕಾಗಿ ಕಾರ್ಯ ಮಾಡುವವರಿಗೆಲ್ಲ ಅವರು ಆಧಾರವಾಗಿದ್ದರು.

ಸಂವಿತ್ ಸೋಮಗಿರಿ ಮಹಾರಾಜರು ಮಾಡುತ್ತಿರುವ ಧರ್ಮಕಾರ್ಯವನ್ನು ಮುಂದುವರಿಸುವುದೇ ಧರ್ಮಭಿಮಾನಿಗಳ ಸಾಧನೆಯಾಗಿದೆ !

ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿದ್ದು ನಂತರ ಸಂನ್ಯಾಸತ್ವದೆಡೆಗೆ ತಿರುಗಿದ ಸಂವಿತ್ ಸೋಮಗಿರಿ ಮಹಾರಾಜರಿಗೆ ಆಧುನಿಕತೆಯನ್ನು ಉಪಯೋಗಿಸಿ ಧರ್ಮವನ್ನು ಸಮಾಜದೊಳಗೆ ತಲುಪಿಸುವ ತಳಮಳವಿತ್ತು. ವಿವಿಧ ಆಧುನಿಕ ಸಲಕರಣೆಗಳ ಮೂಲಕ ಸನಾತನ ಧರ್ಮದ ಮಹತ್ವವನ್ನು ಜಗತ್ತಿಗೆ ತಿಳಿಸುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕೆಲಸವು ಅವರಿಗೆ ವಿಶೇಷವಾಗಿ ಇಷ್ಟವಾಗಿತ್ತು. ಅವರ ದೇಹತ್ಯಾಗದಿಂದ ಅನೇಕ ಹಿಂದೂಗಳು, ಭಕ್ತರು ಸ್ಥೂಲದಲ್ಲಿನ ಆಧಾರವನ್ನು ಕಳೆದುಕೊಂಡಿದ್ದಾರೆ. ಹತಾಶರಾಗಿದ್ದ ಹಿಂದೂಗಳಲ್ಲಿ ನವಚೇತನವನ್ನು ಮೂಡಿಸುವ ಮೂಲಕ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದ್ದ ಮಹಾರಾಜರು ದೇಹ ತ್ಯಾಗ ಮಾಡಿದ್ದರೂ, ಭವಿಷ್ಯದಲ್ಲಿ ಅವರ ಕಾರ್ಯವನ್ನು ಮುಂದುವರಿಸುವುದು ಪ್ರತಿಯೊಬ್ಬ ಧರ್ಮಾಭಿಮಾನಿ ಹಿಂದೂಗಳ ಸಾಧನೆಯೇ ಆಗಿರಲಿದೆ. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

– ಶ್ರೀ. ಆನಂದ ಜಾಖೋಟಿಯಾ, ಸಮನ್ವಯಕರು, ರಾಜಸ್ಥಾನ ಮತ್ತು ಮಧ್ಯಪ್ರದೇಶ, ಹಿಂದೂ ಜನಜಾಗೃತಿ ಸಮಿತಿ.