ನಾಗರಿಕರಿಂದ ಕೊರೋನಾದ ನಿಯಮಗಳನ್ನು ಪಾಲನೆಯಾಗುವಂತೆ ಕೃತಿ ಮಾಡುವಾಗ ಆಡಳಿತವು ಕಾನೂನನ್ನು ಉಲ್ಲಂಘಿಸದಂತೆ ನೋಡಿಕೊಳ್ಳಬೇಕು !
ಅಗರ್ತಲಾ (ತ್ರಿಪುರಾ) – ರಾಜ್ಯದ ಪಶ್ಚಿಮ ತ್ರಿಪುರಾದ ಜಿಲ್ಲಾಧಿಕಾರಿ ಶೈಲೇಶ್ ಕುಮಾರ್ ಯಾದವ್ ಇವರು ವಿವಾಹ ಸ್ಥಳಕ್ಕೆ ತೆರಳಿ ಮದುವೆಯನ್ನು ನಿಲ್ಲಿಸಿದರು. ನಂತರ ಅವರು ಟೀಕೆಗೆ ಗುರಿಯಾದಾಗ ಕ್ಷಮೆಯಾಚಿಸಿದ್ದಾರೆ. ‘ಯಾರ ಉದ್ದೇಶಕ್ಕೂ ನೋವುಂಟು ಮಾಡುವುದು ನನ್ನ ಉದ್ದೇಶವಿರಲಿಲ್ಲ’ ಎಂದು ಯಾದವ್ ಹೇಳಿದ್ದಾರೆ. ಮುಖ್ಯಮಂತ್ರಿ ಬಿಪ್ಲಾವ್ ಕುಮಾರ್ ದೇಬ್ ಈ ಬಗ್ಗೆ ವರದಿ ನೀಡುವಂತೆ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿ ಯಾದವ್ ಅವರೇ ಮದುವೆ ಸ್ಥಳದಲ್ಲಿ ಕೊರೋನಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವಿಡಿಯೊ ಒಂದು ಪ್ರಸಾರವಾದ ನಂತರ ಜನರು ಅವರನ್ನು ಟೀಕಿಸಿದ್ದಾರೆ.