ಸೌದಿ ಅರೇಬಿಯಾದ ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತದ ವಿಷಯ ಸೇರ್ಪಡೆ !

ಇಸ್ಲಾಮಿಕ್ ದೇಶಗಳನ್ನು ಪ್ರತಿನಿಧಿಸುವ ಸೌದಿ ಅರೇಬಿಯಾದಂತಹ ಸಾಂಪ್ರದಾಯಿಕ ಇಸ್ಲಾಮಿಕ್ ದೇಶದಲ್ಲಿ, ರಾಮಾಯಣ ಮತ್ತು ಮಹಾಭಾರತವನ್ನು ಕಲಿಸಲು ನಿರ್ಧರಿಸಲಾಗಿದೆ; ಆದರೆ ಭಾರತದ ಶಾಲೆಗಳಲ್ಲಿ ಗೀತೆವನ್ನು ಕಲಿಸುವ ನಿರ್ಧಾರ ತೆಗೆದುಕೊಂಡಾಗ, ಜಾತ್ಯತೀತವಾದಿಗಳು ಕಿರುಚಾಡುತ್ತಾರೆ, ಇದು ಖೇದಕರ !

ರಿಯಾದ್ (ಸೌದಿ ಅರೇಬಿಯಾ) – ಸೌದಿ ಅರೇಬಿಯಾ ತನ್ನ ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸಿದೆ. ‘ವಿಷನ್ ೨೦೩೦’ ಅಡಿಯಲ್ಲಿ ಇತರ ದೇಶಗಳ ಇತಿಹಾಸ ಮತ್ತು ಸಂಸ್ಕೃತಿಯನ್ನು ಅಧ್ಯಯನ ಮಾಡುವುದು ಅವಶ್ಯಕ ಎಂದು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ. ಇದಕ್ಕಾಗಿಯೇ ಸೌದಿ ಅರೇಬಿಯಾದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸಲಾಗುವುದು. ಇದರಿಂದ ಭಾರತೀಯ ಸಂಸ್ಕೃತಿಯಲ್ಲಿನ ಯೋಗ, ಆಯುರ್ವೇದ ಇತ್ಯಾದಿಗಳ ಬಗ್ಗೆ ಮಾಹಿತಿ ಸಿಗಲಿದೆ ಎಂದು ಹೇಳಲಾಗುತ್ತದೆ. ಇದಲ್ಲದೆ, ಇಂಗ್ಲಿಷ್ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ.