ಅಬುಧಾಬಿಯಲ್ಲಿ ಭವ್ಯವಾದ ಹಿಂದೂ ದೇವಸ್ಥಾನದ ನಿರ್ಮಾಣ ಕಾರ್ಯ ಏಪ್ರಿಲ್‍ನಲ್ಲಿ ಪೂರ್ಣಗೊಳ್ಳಲಿದೆ !

ಅಬುಧಾಬಿ (ಯುನೈಟೆಡ್ ಅರಬ್ ಎಮಿರೇಟ್ಸ್) – ಇಲ್ಲಿ ನಿರ್ಮಿಸಲಾಗುತ್ತಿರುವ ಹಿಂದೂಗಳ ಸ್ವಾಮಿನಾರಾಯಣ ದೇವಸ್ಥಾನದ ನಿರ್ಮಾಣ ಮುಂದಿನ ತಿಂಗಳಲ್ಲಿ ಅಂದರೆ ಎಪ್ರಿಲ್‍ನಲ್ಲಿ ಪೂರ್ಣಗೊಳ್ಳಲಿದೆ. ಗುಜರಾತ ಮತ್ತು ರಾಜಸ್ಥಾನದ ೨ ಸಾವಿರಕ್ಕೂ ಹೆಚ್ಚು ಶಿಲ್ಪಿಗಳು ಸುಂದರವಾಗಿ ಕೆತ್ತಿದ ಕಲ್ಲಿನ ಗೋಡೆಗಳನ್ನು ದೇವಸ್ಥಾನದ ನಿರ್ಮಾಣಕ್ಕಾಗಿ ಕಳುಹಿಸಲಾಗಿದೆ. ಆದ್ದರಿಂದ ಈ ದೇವಸ್ಥಾನದ ನಿರ್ಮಾಣವು ಸಂಪೂರ್ಣವಾಗಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿರುತ್ತದೆ. ದೇವಸ್ಥಾನದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಅದನ್ನು ವಿಶ್ವ ಪ್ರವಾಸೋದ್ಯಮಕ್ಕೆ ಮುಕ್ತಗೊಳಿಲಾಗುವುದು. (ಹಿಂದೂಗಳ ದೇವಸ್ಥಾನಗಳು ಸುಂದರ ಮತ್ತು ಕೆತ್ತನೆಕೆಲಸಗಳನ್ನು ಮಾಡಿದ್ದರೂ ಅವು ಪ್ರವಾಸೋದ್ಯಮದ ಕೇಂದ್ರವಾಗುವುದಿಲ್ಲ ಎಂಬುದನ್ನು ಹಿಂದೂಗಳು ಮತ್ತು ದೇವಸ್ಥಾನದ ನಿರ್ವಾಹಕರು ನೆನಪಿನಲ್ಲಿಡಬೇಕು. ದೇವಸ್ಥಾನಗಳು ಚೈತನ್ಯದ ಮೂಲವಾಗಿವೆ. ಅವುಗಳನ್ನು ಅದೇ ದೃಷ್ಟಿಕೋನದಲ್ಲಿ ನೋಡಬೇಕು ಹಾಗೂ ಜಗತ್ತಿಗೂ ಅದೇ ದೃಷ್ಟಿಕೋನದಲ್ಲಿ ನೋಡಲು ಕಲಿಸಬೇಕು. ಈ ದೇವಸ್ಥಾನದಿಂದ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡುವುದರೊಂದಿಗೆ ಇತರ ಧರ್ಮಗಳಿಗೆ ಹಿಂದೂ ಧರ್ಮದ ಅಭ್ಯಾಸ ಮಾಡುವ ವ್ಯವಸ್ಥೆಯನ್ನೂ ಮಾಡಬೇಕು ! – ಸಂಪಾದಕರು)

ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರಲಿವೆ. ಈ ದೇವಾಲಯವು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಸಂಕೀರ್ಣ(ಬಡಾವಣೆಯಂತೆ) ವಾಗಿರಲಿದೆ. ಭೇಟಿ ನೀಡುವವರಿಗೆ ಕೇಂದ್ರ, ಪ್ರಾರ್ಥನಾ ಸ್ಥಳ, ಪ್ರದರ್ಶನ, ಶಿಕ್ಷಣ ಕ್ಷೇತ್ರ, ಮಕ್ಕಳಿಗಾಗಿ ಆಟದ ಮೈದಾನ, ಉದ್ಯಾನವನ, ಪುಸ್ತಕಗಳು ಮತ್ತು ಉಡುಗೊರೆಗಳ ಅಂಗಡಿಗಳು ಇರುತ್ತವೆ. ವಾಹನ ನಿಲುಗಡೆಗೆ ದೊಡ್ಡ ಜಾಗವನ್ನು ಸಹ ಒದಗಿಸಲಾಗಿದ್ದು,೧೨ ಸಾವಿರ ವಾಹನಗಳನ್ನು ಸುಲಭವಾಗಿ ನಿಲುಗಡೆ ಮಾಡಬಹುದು. ದೇವಸ್ಥಾನದ ಪ್ರದೇಶದಲ್ಲಿ ೨ ಹೆಲಿಪ್ಯಾಡ್‍ಗಳನ್ನು ನಿರ್ಮಿಸಲಾಗಿದೆ.