ಮುಸ್ಲಿಮರ ವಿರೋಧದ ನಂತರ ಬ್ರಿಟನ್‌ನ ಶಾಲೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ತೋರಿಸಿದ ಶಿಕ್ಷಕ ಅಮಾನತು !

ವಿರೋಧದ ನಂತರ ಮುಖ್ಯಾಧ್ಯಾಪಕರಿಂದ ಕ್ಷಮೆಯಾಚನೆ !

ಮುಸ್ಲಿಮರು ತಮ್ಮ ಧಾರ್ಮಿಕ ಭಾವನೆಗಳ ಬಗ್ಗೆ ಎಚ್ಚರಕೆಯಿಂದಿರುತ್ತಾರೆ ಮತ್ತು ಅವರ ಭಾವನೆಗಳನ್ನು ಅವಮಾನಿಸುವವರನ್ನು ತಕ್ಷಣ ವಿರೋಧಿಸುತ್ತಾರೆ, ಆದರೆ ಹೆಚ್ಚಿನ ಜನ್ಮಹಿಂದೂಗಳು ಇಂತಹ ಘಟನೆಗಳ ಬಗ್ಗೆ ನಿಷ್ಕ್ರಿಯರಾಗಿದ್ದಾರೆ, ಮತ್ತು ಅವರಲ್ಲಿ ಧಾರ್ಮಾಭಿಮಾನವೂ ಇರುವುದಿಲ್ಲ !

ಲಂಡನ್ (ಬ್ರಿಟನ) – ಬ್ರಿಟನ್ನಿನ ವೆಸ್ಟ ಯಾರ್ಕ್‌ಶೈರನಲ್ಲಿರುವ ಬ್ಯಾಟ್ಲಿ ಗ್ರಾಮರ ಶಾಲೆಯಲ್ಲಿ ಚಾರ್ಲಿ ಹೆಬ್ಡೊ ಮಾಸಿಕ ಪತ್ರಿಕೆಯಲ್ಲಿ ಪ್ರಸಿದ್ಧವಾಗಿದ್ದ ಪ್ರವಾದಿ ಮುಹಮ್ಮದ ಅವರ ಚಿತ್ರವನ್ನು ತೋರಿಸಲಾಗಿತ್ತು. ನಂತರ ಸ್ಥಳೀಯ ಮುಸ್ಲಿಮರು ದೊಡ್ಡ ಪ್ರಮಾಣದಲ್ಲಿ ವಿರೋಧಿಸಿದರು. ಇದಕ್ಕಾಗಿ ಮುಖ್ಯಾಧ್ಯಾಪಕರು ಕ್ಷಮೆಯಾಚಿಸಿದ್ದಾರೆ. ಧಾರ್ಮಿಕ ಶಿಕ್ಷಣ ನೀಡುವ ಶಿಕ್ಷಕರು ಈ ಚಿತ್ರವನ್ನು ತೋರಿಸಿದ್ದರು. ಶಾಲೆಯು ಅವರನ್ನು ಅಮಾನತುಗೊಳಿಸಿದೆ. ‘ಧಾರ್ಮಿಕ ಶಿಕ್ಷಣ ನೀಡುವ ಪಠ್ಯಕ್ರಮವನ್ನು ಪರಿಶೀಲಿಸಲಾಗುವುದು’ ಎಂದು ಮುಖ್ಯ ಶಿಕ್ಷಕರು ಹೇಳಿದರು. ಕೆಲವು ತಿಂಗಳುಗಳ ಹಿಂದೆ ಅಂತಹ ಚಿತ್ರವನ್ನು ತೋರಿಸಿದ್ದಕ್ಕಾಗಿ ಮತಾಂಧ ವಿದ್ಯಾರ್ಥಿಯೊಬ್ಬ ಫ್ರಾನ್ಸ್‌ನ ಶಿಕ್ಷಕನ ಶಿರಚ್ಛೇದ ಮಾಡಿದ್ದನು.

ಮತ್ತೊಂದೆಡೆ ಶಿಕ್ಷಣ ಇಲಾಖೆ ಮುಸ್ಲಿಮರ ಪ್ರತಿಭಟನೆಯನ್ನು ವಿರೋಧಿಸುತ್ತಾ, ‘ಕೊರೋನಾ ಕಾಲದಲ್ಲಿ ಇಂತಹ ನಿಯಮಗಳ ಉಲ್ಲಂಘನೆ ಸ್ವೀಕಾರಾರ್ಹವಲ್ಲ’ ಎಂದು ಹೇಳಿದೆ. ಶಿಕ್ಷಣ ಇಲಾಖೆಯ ವಕ್ತಾರರು, ‘ಶಾಲೆಯು ತನ್ನ ಪಠ್ಯಕ್ರಮದಲ್ಲಿ ವಿವಿಧ ವಿಚಾರಗಳನ್ನು ಹೊಂದಿದೆ; ಅದು ಆಹ್ವಾನವಾಗಲಿ ಅಥವಾ ವಿವಾದಿತವಾಗಿರಲಿ ಅದನ್ನು ಸೇರ್ಪಡಿಸುವ ಸ್ವಾತಂತ್ರ್ಯ ಅವರಿಗೆ ಇದೆ’, ಎಂದರು.