ನೀವು ಧರ್ಮಕಾರ್ಯಕ್ಕೆ ಆಯ್ಕೆಯಾಗುವುದು ಅದೃಷ್ಟದ ವಿಷಯ ! – ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ

ಭೂಮಿ ಪೂಜೆಯ ಸಮಯದಲ್ಲಿ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಮತ್ತು ನಮಸ್ಕಾರ ಮಾಡುವಾಗ ಸದ್ಗುರು (ಡಾ) ಚಾರುದತ್ತ ಪಿಂಗಳೆ

ಹರಿದ್ವಾರ, – ನಾವು ಏನನ್ನೂ ಮಾಡುವುದಿಲ್ಲ, ದೇವರೇ ನಮ್ಮಿಂದ ಮಾಡಿಸಿಕೊಳ್ಳುತ್ತಾನೆ. ಧರ್ಮಪ್ರಸಾರದ ಕಾರ್ಯಕ್ಕೆ ನಿಮ್ಮನ್ನು ಆಯ್ಕೆ ಮಾಡುವುದು ಬಹಳ ಅದೃಷ್ಟದ ವಿಷಯವಾಗಿದೆ. ಇದು ಧರ್ಮದ ರಕ್ಷಣೆಯ ಕಾರ್ಯವಾಗಿದೆ ಎಂದು ಕರ್ನಾಟಕದ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕುಂಭಮೇಳದ ಸಂದರ್ಭದಲ್ಲಿ, ಗಂಗಾನದಿ ಎದುರಿನ ಬಡೆ ಹನುಮಾನ ಮಂದಿರ ಪ್ರತಿಷ್ಠಾನದ ಆವರಣದಲ್ಲಿ ಧರ್ಮಜಾಗೃತಿ ಪ್ರದರ್ಶನವನ್ನು ಆಯೋಜಿಸಲಾಗುವುದು. ಈ ಪ್ರದರ್ಶನ ಸ್ಥಳದ ಭೂಮಿ ಪೂಜೆ ಮತ್ತು ಧರ್ಮಧ್ವಾಜದ ಪೂಜೆಯ ಸಮಯದಲ್ಲಿ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ) ಚಾರುದತ್ತ ಪಿಂಗಳೆ ಮತ್ತು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ ಉಪಸ್ಥಿತರಿದ್ದರು.

ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ‘ಹಿಂದಿನ ಜನ್ಮದಲ್ಲಿ ನೀವು ಶ್ರೀ ರಾಮಚಂದ್ರನ ಸೇವೆ ಮಾಡಿದ್ದರಿಂದ, ಈಗ ಮತ್ತೊಮ್ಮೆ ನಿಮ್ಮೆಲ್ಲರಿಗೂ ಧರ್ಮಪ್ರಸಾರದ ಅವಕಾಶ ಸಿಕ್ಕಿದೆ’ ಎಂದು ಹೇಳಿದರು. ಆದ್ದರಿಂದ ನೀವು ಇನ್ನು ಮುಂದೆ ಭೂಮಿಯ ಮೇಲೆ ಜನಿಸುವುದಿಲ್ಲ. ನೀವು ಮಹಾನ್ ದೇವದೂತರಾಗಲಿದ್ದೀರಿ. ಅಗತ್ಯವಿದ್ದರೆ, ನೀವು ನಮ್ಮಂತಹ ಸಂತರಾಗಿ ಜನಿಸುವಿರಿ. ನೀವು ತುಂಬಾ ಅದೃಷ್ಟವಂತರು. ಈಗಿನ ಪೀಳಿಗೆ ವ್ಯರ್ಥವಾಗುತ್ತಿರುವಾಗ ನಿಮ್ಮಂತಹ ಯುವಕರನ್ನು ನೋಡಿ ತುಂಬಾ ಸಮಾಧಾನವಾಗುತ್ತಿದೆ. ಸಾಮರ್ಥ್ಯ ಹೊಂದಿರುವವರು ಮಾತ್ರ ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ದೇವರ ಅನುಗ್ರಹದಿಂದ, ನಾನು ನಿಮ್ಮೊಂದಿಗೆ ಇದ್ದೇನೆ. ಗುರುಗಳ ಆಜ್ಞೆಯನ್ನು ಪಾಲಿಸುತ್ತಾ ಮುಂದೆ ಹೋಗಿ. ಭಾರತದ ನವೀಕರಣವು ನಿಮ್ಮ ಮೂಲಕ ಆಗಲಿದೆ. ಎಲ್ಲವೂ ದೇವರ ಇಚ್ಛೆಯಂತೆ ನಡೆಯುತ್ತದೆ. ಸುಖ-ದುಃಖ ದೇವರ ಪ್ರಸಾದವಾಗಿದೆ, ಹೀಗೆ ಭಾವ ಇಟ್ಟುಕೊಳ್ಳಿ. ಈ ರಾಷ್ಟ್ರ ಮಾತ್ರವಲ್ಲ, ಸ್ವರ್ಗ ಮತ್ತು ಗ್ರಹಗಳಲ್ಲಿಯೂ ಧರ್ಮದ ಪಾಲನೆ ಆಗದೇ ಇರುವಲ್ಲಿ ನೀವು ಧರ್ಮಪಾಲನೆಯನ್ನು ಮಾಡಲು ಪ್ರಯತ್ನಿಸುವಿರಿ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.

ಬಡೆ ಹನುಮಾನಜೀ ಮಂದಿರ ಪ್ರತಿಷ್ಠಾನ ಮಠದ ಮಠಾಧೀಶರಾದ ಪ.ಪೂ. ಶ್ರೀ ದಿವ್ಯಾಧೀಷ ತೀರ್ಥ ಸ್ವಾಮಿ, ಮಠದ ವ್ಯವಸ್ಥಾಪಕ ಶ್ರೀ. ಕೃಷ್ಣಕುಮಾರ ಆಚಾರ್ಯ ಇವರು ಈ ಧರ್ಮಜಾಗೃತಿ ಪ್ರದರ್ಶನಕ್ಕಾಗಿ ಬಡೆ ಹನುಮಾನಜೀ ಮಂದಿರದ ಕ್ಷೇತ್ರದಲ್ಲಿ ಜಾಗವನ್ನು ಒದಗಿಸಿದ್ದಾರೆ. ಬಡೆ ಹನುಮಾನಜೀ ದೇವಸ್ಥಾನದ ಅರ್ಚಕ ಶ್ರೀ. ಓಂಕರನಾಥ ಶುಕ್ಲಾ ಇವರೂ ಕೂಡ ಈ ಕಾರ್ಯಕ್ಕಾಗಿ ಸಹಕಾರ ನೀಡುತ್ತಿದ್ದಾರೆ.

ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಅವರು ಸಾಧಕರಿಗೆ ನೀಡಿದ ಆಶೀರ್ವಾದ

ಈ ಸಮಯದಲ್ಲಿ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿಯವರು ಸಾಧಕರಿಗೆ ಆಶಿರ್ವಾದ ನೀಡುತ್ತಾ, ‘ನಿಮಗೆ ಯಾವುದೇ ತೊಂದರೆಗಳು ಬರುವುದಿಲ್ಲ ಮತ್ತು ನೀವು ಯಾವಾಗಲೂ ಆರೋಗ್ಯವಂತರಾಗಿರುತ್ತೀರಿ. ನಿಮ್ಮಲ್ಲಿ ಆನಂದವಿದೆ, ನೀವು ಎಲ್ಲಾ ಸೇವೆಗಳನ್ನು ಬಹಳ ಭಾವಪೂರ್ಣವಾಗಿ ಮಾಡುತ್ತಿದ್ದೀರಿ. ನಿಮ್ಮಂತಹ ಪವಿತ್ರ ಆತ್ಮಗಳನ್ನು ಭೇಟಿಯಾಗಿ ನನಗೆ ಆನಂದವಾಯಿತು. ಇಲ್ಲಿ ಜನರು ಬೇಡಲು ಬರುತ್ತಾರೆ. ನೀವು ನೀಡಲು ಬಂದಿದ್ದೀರಿ’ ಎಂದು ಹೇಳಿದರು.