ಫರುಖಾಬಾದ್ (ಉತ್ತರ ಪ್ರದೇಶ) ದಲ್ಲಿ ನಡೆದ ಶಾಂತಿ ಸಮಿತಿಯ ಸಭೆಯಲ್ಲಿ ನಗರ ದಂಡಾಧಿಕಾರಿ ಅಶೋಕಕುಮಾರ ಮೌರ್ಯ ಇವರಿಂದ ಹಿಂದೂದ್ರೋಹಿ ಹೇಳಿಕೆ !
ಯಾವುದೇ ಆಡಳಿತಾಧಿಕಾರಿಗಳು ಇತರ ಧರ್ಮಗಳ ಆಚರಣೆಯ ಬಗ್ಗೆ ಅಂತಹ ಹೇಳಿಕೆ ನೀಡುವ ಧೈರ್ಯವನ್ನು ತೋರಿಸುವುದಿಲ್ಲ; ಏಕೆಂದರೆ ಅದರ ಪರಿಣಾಮಗಳು ಅವರಿಗೆ ತಿಳಿದಿರುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಫರೂಕಾಬಾದ್ (ಉತ್ತರ ಪ್ರದೇಶ) – ಹೋಳಿ ಎಂದರೆ, ಜನರು ಮದ್ಯಪಾನ ಮಾಡುತ್ತಾರೆ ಮತ್ತು ನಶೆ ಕುಡಿಯುತ್ತಾರೆ. ಅದು ಮಾದಕ ದ್ರವ್ಯ ಸೇವನೆಯ ಉತ್ಸವವಾಗಿದೆ. ಆದ್ದರಿಂದ ಈ ಕಾಲಾವಧಿಯಲ್ಲಿ ನಗರದಲ್ಲಿ ಯಾವುದೇ ಅನುಮಾನಾಸ್ಪದ ಘಟನೆಗಳ ಬಗ್ಗೆ ಆಡಳಿತವು ನಿಗಾ ವಹಿಸಬೇಕಾಗುತ್ತದೆ. ಒಂದು ವೇಳೆ ನಿಮಗೆ ಎಲ್ಲಿಯಾದರೂ ಮದ್ಯ ಮತ್ತು ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ನಿಮಗೆ ಸಿಕ್ಕಿದ್ದಲ್ಲಿ, ನೀವು ಅದನ್ನು ತಕ್ಷಣ ಪೊಲೀಸರಿಗೆ ವರದಿ ನೀಡಿ, ಎಂದು ನಗರ ದಂಡಾಧಿಕಾರಿ ಅಶೋಕಕುಮಾರ ಮೌರ್ಯ ಇವರು ಶಾಂತಿ ಸಮಿತಿ ಸಭೆಯಲ್ಲಿ ಹೇಳಿದರು. ಈ ಸಭೆಯ ಸಮಯದಲ್ಲಿ, ಹೋಳಿ ಮತ್ತು ಶಬ-ಎ-ಬಾರಾತ ಈ ಉತ್ಸವದ ನಿಯೋಜನೆಯ ಕುರಿತು ಚರ್ಚಿಸಲಾಯಿತು.
ಹೋಳಿ ಬಗ್ಗೆ ದಂಡಾಧಿಕಾರಿ ಮೌರ್ಯ ಹೇಳಿಕೆಯನ್ನು ಕೇಳಿದ ನಂತರ, ಅಲ್ಲಿ ಉಪಸ್ಥಿತವಿದ್ದ ನ್ಯಾಯವಾದಿ ಡಾ. ದೀಪಕ ದ್ವಿವೇದಿಯವರು ಕೋಪಗೊಂಡರು. ಅವರು ಮೌರ್ಯ ಅವರನ್ನು ಕ್ಷಮೆಯಾಚಿಸಲು ಕೇಳಿದರು. (ಹಿಂದೂ ಹಬ್ಬಗಳ ಬಗ್ಗೆ ಅಯೋಗ್ಯ ಹೇಳಿಕೆ ನೀಡುವವರನ್ನು ತಕ್ಷಣ ವಿರೋಧಿಸಿದ್ದಕ್ಕಾಗಿ ನ್ಯಾಯವಾದಿ ಡಾ. ದೀಪಕ ದ್ವಿವೇದಿ ಅವರಿಗೆ ಅಭಿನಂದನೆಗಳು ! – ಸಂಪಾದಕರು) ನಂತರ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಮೌರ್ಯರವರ ವಿರುದ್ಧ ಚೌಕ ಬಾಜಾರ ಇಲ್ಲಿ ಪ್ರತಿಭಟನೆ ಮಾಡಿ ಅವರ ಪ್ರತಿಕೃತಿಯನ್ನು ದಹಿಸಿದರು.
➡सिटी मजिस्ट्रेट अशोक मौर्य का विवादित बयान:-
➡होली के त्योहार को बताया नशे का त्योहार
➡पीस कमेटी की बैठक में बोले सिटी मजिस्ट्रेट
➡सौहार्द, भाईचारा न होकर होली नशे का त्योहार
➡सिटी मजिस्ट्रेट के बयान के बाद लोगों में रोष pic.twitter.com/PJCQUyAULY
— भारत समाचार (@bstvlive) March 22, 2021