ಬದಾಯು (ಉತ್ತರಪ್ರದೇಶ)ನಲ್ಲಿ ಸಾಧುವಿನ ಅಮಾನುಷವಾಗಿ ಹತ್ಯೆ, ಶವವನ್ನು ರಸ್ತೆ ಬದಿಗೆ ಎಸೆಯಲಾಗಿತ್ತು !

ಉತ್ತರಪ್ರದೇಶದಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ವಿವಿಧ ಕಾರಣಗಳಿಗಾಗಿ ಅನೇಕ ಸಾಧುಗಳ ಹತ್ಯೆಯಾಗುತ್ತಿರುವ ಘಟನೆಗಳು ನಡೆಯುತ್ತಿವೆ. ಇದು ರಾಜ್ಯದ ಕಾನೂನು-ವ್ಯವಸ್ಥೆಯ ಶೋಚನೀಯ ಸ್ಥಿತಿಯನ್ನು ತೋರಿಸುತ್ತದೆ ! ಬಿಜೆಪಿ ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೇ ಸಂಭವಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಬದಾಯು (ಉತ್ತರಪ್ರದೇಶ) – ಇಲ್ಲಿನ ಮಿಹೌನಾ ಗ್ರಾಮದಲ್ಲಿ ಓರ್ವ ಸಾಧುವನ್ನು ಅಮಾನುಷವಾಗಿ ಹತ್ಯೆ ಮಾಡಿ ಅವರ ಅರೆಬೆತ್ತಲೆ ದೇಹವನ್ನು ರಸ್ತೆಬದಿಯಲ್ಲಿ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಸಾಧುವಿನ ಮುಖ ಜಜ್ಜಿರುವುದು ಕಂಡುಬಂದಿದೆ. ಸಾಧುವಿನ ದೇಹಗವನ್ನು ಸುಡುವ ಪ್ರಯತ್ನವೂ ನಡೆದಿದೆ. ಎರಡು ದಿನಗಳ ಹಿಂದೆ ಈ ಸಾಧುವನ್ನು ಓರ್ವ ಯುವಕನ ಮನೆಯಲ್ಲಿ ನೋಡಿದ್ದರು ಎಂದು ಇಲ್ಲಿ ಕೆಲವರು ಹೇಳಿದ್ದಾರೆ. ಸಾಧುವಿನ ಶವ ಪತ್ತೆಯಾದ ನಂತರ ಯುವಕ ನಾಪತ್ತೆಯಾಗಿದ್ದಾನೆ. ಸಾಧುವಿನ ಹೆಸರು ರಾಮಚಂದ್ರವಾಗಿದ್ದು ಅವರು ಇಸ್ಲಾಂನಗರದ ಸೊಹರಾ ಗ್ರಾಮದ ನಿವಾಸಿ ಎಂದು ಮಾಹಿತಿ ಸಿಕ್ಕಿದೆ.