ಜೀವನದ ಸಾರವಾಗಿರುವ ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವುದು ಅವಶ್ಯಕ ! – ನಟಿ ಮೌನಿ ರಾಯ್

* ಇಷ್ಟು ದೊಡ್ಡ ಚಲನಚಿತ್ರೋದ್ಯಮದಲ್ಲಿ ಕೇವಲ ಒಂದೆರಡು ವ್ಯಕ್ತಿಗಳು ಮಾತ್ರ ಶ್ರೀಮದ್ ಭಗವದ್ಗೀತೆಯ ಬಗ್ಗೆ ಇಂತಹ ಬೇಡಿಕೆಯನ್ನು ಮಾಡುತ್ತಾರೆ, ಎಂಬುದನ್ನು ಗಮನದಲ್ಲಿಡಿ ! ಮೂಲತಃ, ಇಂತಹ ಬೇಡಿಕೆಯನ್ನು ಮಾಡುವ ಅಗತ್ಯವಿಲ್ಲ. ಕೇಂದ್ರ ಸರಕಾರವು ಇಂತಹ ನಿರ್ಧಾರ ಮೊದಲೇ ತೆಗೆದುಕೊಳ್ಳಬೇಕಿತ್ತು ಎಂದು ಹಿಂದೂಗಳಿಗೆ ಅನಿಸುತ್ತದೆ !

* ಜಾತ್ಯತೀತ ದೇಶದಲ್ಲಿ ಧರ್ಮವನ್ನು ದೂರ ಮಾಡಿರುವುದರಿಂದ ಸಮಾಜದ ನೈತಿಕತೆ ಹದಗೆಟ್ಟಿದೆ. ಅದನ್ನು ಪುನಃ ಸ್ಥಾಪಿಸಲು ಧರ್ಮ ಶಿಕ್ಷಣ ಮತ್ತು ಸಾಧನೆ ಬಿಟ್ಟರೆ ಪರ್ಯಾಯ ಮಾರ್ಗಗಳಿಲ್ಲ!

ಮುಂಬಯಿ : ಸಂಚಾರ ನಿಷೇಧದ ಸಮಯದಲ್ಲಿ ನಾನು ಧಾರ್ಮಿಕತೆಯತ್ತ ಆಕರ್ಷಿತಳಾಗಿದ್ದೆ. ಆ ಸಮಯದಲ್ಲಿ ನಾನು ನನ್ನ ಸ್ನೇಹಿತ ತೆಗೆದುಕೊಳ್ಳುತ್ತಿದ್ದ ಗೀತೆಯ ತರಗತಿಯಲ್ಲಿ ಭಾಗವಹಿಸುತ್ತಿದ್ದೆ. ನನ್ನ ಪ್ರಕಾರ ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಬೇಕು. ಇದು ಕೇವಲ ಧಾರ್ಮಿಕ ಗ್ರಂಥವಲ್ಲ, ಅದು ಜೀವನದ ಸಾರವಾಗಿದೆ. ನಿಜವಾದ ಜ್ಞಾನವಿದೆ. ಯಾವುದೇ ಪ್ರಶ್ನೆ ಇರಲಿ, ಗೀತೆಯಲ್ಲಿ ಉತ್ತರವಿದೆ ಎಂದು ನಟಿ ಮೌನಿ ರಾಯ್ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೌನಿ ರಾಯ್ ತಮ್ಮ ಮಾತನ್ನು ಮುಂದುವರೆಸುತ್ತಾ,

. ಬಾಲ್ಯದಿಂದಲೂ ನಮ್ಮ ಮನೆಯಲ್ಲಿ ಗೀತೆಯನ್ನು ಪಠಿಸಲಾಗುತ್ತಿತ್ತು. ನಾನು ಆಗ ಗೀತೆಯನ್ನು ಓದಲು ಪ್ರಯತ್ನಿಸುತ್ತಿದ್ದೆ; ಆದರೆ ಆ ಸಮಯದಲ್ಲಿ ನನಗೆ ಹೆಚ್ಚು ತಿಳಿಯುತ್ತಿರಲಿಲ್ಲ; ಆದರೆ ಈಗ ನಾನು ಶ್ರೀಮದ್ ಭಗವದ್ಗೀತೆಯ ಮಹತ್ವವನ್ನು ಅರಿತುಕೊಂಡಿದ್ದೇನೆ ಮತ್ತು ಅದನ್ನು ಪ್ರಪಂಚದಾದ್ಯಂತ ಪ್ರಸಾರ ಮಾಡಲು ನಾನು ಕೆಲಸ ಮಾಡುತ್ತಿದ್ದೇನೆ.

. ಚಿತ್ರರಂಗದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಗೀತೆಯನ್ನು ಓದಬೇಕು; ಏಕೆಂದರೆ ಈ ಕ್ಷೇತ್ರದಲ್ಲಿ ವ್ಯಕ್ತಿಯು ತನ್ನನ್ನು ತಾನು ಮರೆತುಹೋಗುವಷ್ಟು ಕಾರ್ಯನಿರತನಾಗುತ್ತಾನೆ. ಇಂತಹ ಸಂದರ್ಭಗಳಲ್ಲಿ ಗೀತೆಯ ಸಹಾಯವಾಗಬಹುದು.

೩. ನಾವು ಅಜ್ಞಾನಿಗಳು ಆಗಿದ್ದೇವೆ. ನಾವು ವೇದಗಳು, ಉಪನಿಷತ್ತುಗಳು ಇತ್ಯಾದಿಗಳನ್ನು ಹೊಂದಿರುವ ದೇಶದಲ್ಲಿದ್ದೇವೆ ಮತ್ತು ನಾವು ಇದರ ಬಗ್ಗೆ ಏನನ್ನೂ ಮಾಡುವುದಿಲ್ಲ. ನಾವು ಚಿನ್ನದ ಗಣಿ ಮೇಲೆ ಕುಳಿತು ಅದರ ಬಗ್ಗೆ ನಿಷ್ಕ್ರಿಯರಾಗಿದ್ದೇವೆ. ಅದು ಹಳ್ಳಿಯಾಗಲಿ, ನಗರವಾಗಲಿ ಎಲ್ಲರಿಗೂ ಗೀತೆಯ ಅವಶ್ಯಕತೆಯಿದೆ.