ಡೆಹರಾಡೂನ್‌ನಲ್ಲಿ (ಉತ್ತರಖಂಡ) ಹಿಂದೂ ಯುವ ವಾಹಿನಿಯು ೧೫೦ ದೇವಾಲಯಗಳ ಹೊರಗೆ ದೇವಾಲಯಗಳಲ್ಲಿ ಇತರ ಧರ್ಮದವರಿಗೆ ಪ್ರವೇಶವಿಲ್ಲವೆಂಬ ಫಲಕ !

ಪೊಲೀಸರಿಂದ ಅಪರಾಧ ದಾಖಲು !

ಇದರಲ್ಲಿ ಅಪರಾಧವನ್ನು ದಾಖಲಿಸುವಂತೆ ಏನಿದೆ ? ಹಿಂದೂ ದೇವಾಲಯಗಳನ್ನು ಪ್ರವೇಶಿಸಲು ಯಾರಿಗೆ ಅನುಮತಿ ನೀಡಬೇಕು ಮತ್ತು ಯಾರಿಗೆ ನೀಡಬಾರದು ಎಂಬುದನ್ನು ನಿರ್ಧರಿಸಲು ಅವರಿಗೆ ಹಕ್ಕಿದೆ. ಇತರ ಧರ್ಮದವರಿಗೆ ಮಕ್ಕಾವನ್ನು ಪ್ರವೇಶಿಸಲು ಅವಕಾಶವಿಲ್ಲದಿದ್ದರೆ, ಹಿಂದೂ ದೇವಾಲಯಗಳಲ್ಲಿ ಹಿಂದೂಗಳು ಇತರ ಧರ್ಮದವರಿಗೆ ಪ್ರವೇಶವನ್ನು ನಿರಾಕರಿಸಿದರೆ, ಅದು ತಪ್ಪು ಹೇಗಾಗುತ್ತದೆ? ‘ಗೋಮಾಂಸ ತಿನ್ನುವ ಮತಾಂಧರು ದೇವಾಲಯಗಳನ್ನು ಪ್ರವೇಶಿಸಿದರೆ ದೇವಾಲಯದ ಪಾವಿತ್ರ್ಯತೆ ನಾಶವಾಗುವುದು’, ಎಂದು ಹಿಂದೂಗಳಿಗೆ ಅನಿಸುತ್ತದೆ ! ಉತ್ತರಾಖಂಡದಲ್ಲಿ ಬಿಜೆಪಿ ಸರಕಾರವಿರುವಾಗ ಇಂತಹ ಅಪರಾಧವನ್ನು ನೊಂದಾಯಿಸುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಡೆಹರಾಡೂನ್ (ಉತ್ತರಾಖಂಡ) – ಇಲ್ಲಿನ ೧೫೦ ಕ್ಕೂ ಹೆಚ್ಚು ದೇವಾಲಯಗಳ ಮುಂದೆ ‘ಈ ತೀರ್ಥಸ್ಥಳ ಹಿಂದೂಗಳಿಗೆ ಪವಿತ್ರ ಸ್ಥಳವಾಗಿದೆ. ಹಿಂದೂಯೇತರರು ಇಲ್ಲಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ’, ಎಂದು ಹಿಂದೂ ಯುವ ವಾಹಿನಿಯವರು ಫಲಕವನ್ನು ಹಾಕಿದ್ದಾರೆ. ಇದರ ನಂತರ ರಾಜ್ಯದ ಇತರ ದೇವಾಲಯಗಳಲ್ಲೂ ಇಂತಹ ಫಲಕಗಳನ್ನು ಹಾಕಲು ಉದ್ದೇಶವಿದೆ ಎಂದು ಸಂಘಟನೆ ಹೇಳಿದೆ. ಈ ಫಲಕದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಿತು ರಾಂಧಾವಾ ಅವರ ಹೆಸರು ಇದ್ದು, ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಂತರ ಪೊಲೀಸರು ಕ್ರಮ ಕೈಗೊಂಡು ಫಲಕಗಳನ್ನು ತೆಗೆದುಹಾಕಲು ಪ್ರಾರಂಭಿಸಿದರು ಮತ್ತು ಈ ಪ್ರಕರಣದಲ್ಲಿ ಕೆಲವು ಜನರನ್ನು ಬಂಧಿಸಲಾಗಿದೆ.(ಮಸೀದಿಯ ಮೇಲಿನ ಕಾನೂನುಬಾಹಿರ ಧ್ವನಿವರ್ಧಕಗಳನ್ನು ತೆಗೆಸಲು ಭಯ ಪಡುವ, ಗಲಭೆಯಲ್ಲಿ ಹಿಂದೂಗಳ ರಕ್ಷಣೆ ಮಾಡದಿರುವ, ಅದೇರೀತಿ ಮತಾಂಧರಿಂದ ಹೊಡೆಸಿಕೊಳ್ಳುವ ಪೊಲೀಸರು ಹಿಂದೂಗಳ ಮೇಲೆ ಗಂಡಸ್ತನ ತೋರಿಸುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕ)

. ಹಿಂದೂ ಯುವ ವಾಹಿನಿಯ ರಾಜ್ಯ ಅಧ್ಯಕ್ಷ ಗೋವಿಂದ ಇವರು, ‘ಹಿಂದೂಯೇತರರು ದೇವಸ್ಥಾನವನ್ನು ಪ್ರವೇಶಿಸಲು ಪ್ರಯತ್ನಿಸಿದರೆ, ಅವರಿಗೆ ತಕ್ಕ ಪಾಠ ಕಲಿಸಿ ಪೊಲೀಸರಲ್ಲಿ ಒಪ್ಪಿಸಲಾಗುವುದು’, ಎಂದು ಎಚ್ಚರಿಸಿದರು. ಅದೇರೀತಿ, ದೇವಾಲಯಗಳು ಸನಾತನ ಧರ್ಮದ ಶ್ರದ್ಧಾಸ್ಥಾನವಾಗಿದೆ ಇಲ್ಲಿ ಇತರ ಧರ್ಮಗಳಿಗೆ ಏನು ಕೆಲಸ ? ನಾವು ಮಾಡುತ್ತಿರುವುದು ಧರ್ಮದ ರಕ್ಷಣೆಗಾಗಿ ಎಂದೂ ಅವರು ಹೇಳಿದರು.

೨. ಘಟನೆಯನ್ನು ಟೀಕಿಸಿದ ಕಾಂಗ್ರೆಸ್, ಇದು ಯೋಜಿತ ಕಾರ್ಯ ಎಂದು ಹೇಳಿದರು. ಕಳೆದ ೪ ವರ್ಷಗಳಲ್ಲಿ ಬಿಜೆಪಿ ಸರಕಾರವು ಯಾವುದೇ ವಿಶೇಷ ಕಾರ್ಯಗಳನ್ನು ಮಾಡಿಲ್ಲ. ಅದನ್ನು ಮರೆಮಾಚುವ ಸಲುವಾಗಿ, ಶ್ರೀ ರಾಮ, ಹರಿದ ಜೀನ್ಸ್ ಮುಂತಾದ ವಿಷಯಗಳನ್ನು ಎತ್ತಿ ಜನರ ಗಮನವನ್ನು ಇತರತ್ತ ಸೆಳೆಯಲಾಗುತ್ತಿದೆ. ಬಿಜೆಪಿಗೆ ಚುನಾವಣೆ ಬಂತೆಂದರೆ, ಶ್ರೀ ರಾಮ, ಹಿಂದೂ-ಮುಸ್ಲಿಂ, ಭಾರತ-ಪಾಕಿಸ್ತಾನ ಮುಂತಾದ ಅಂಶಗಳು ಮನಸ್ಸಿಗೆ ಬರಲು ಪ್ರಾರಂಭಿಸುತ್ತವೆ. (ಚುನಾವಣೆ ಬಂತೆಂದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇವಾಲಯಗಳಿಗೆ ಹೋಗಲು ಬಯಸುತ್ತಾರೆ ಎಂಬುದು ಹಿಂದೂಗಳಿಗೆ ತಿಳಿದಿದೆ ! – ಸಂಪಾದಕ)