೬ ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ ೧೨ ವರ್ಷದ ಹುಡುಗ !

ಆನ್‌ಲೈನ್‌ ಅಧ್ಯಯನ ಮಾಡುವಾಗ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡುವ ಚಟ ಆರಂಭವಾಗಿತ್ತು !

ತಮ್ಮ ಮಕ್ಕಳು ಮೊಬೈಲ್ ಫೋನ್‌ನಲ್ಲಿ ಏನು ನೋಡುತ್ತಾರೆ, ಎಂಬುದನ್ನು ನೋಡುವುದು ಪೋಷಕರ ಜವಾಬ್ದಾರಿಯಾಗಿದ್ದರೂ, ಅವರು ಗಮನ ಹರಿಸದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಬೇಕಾಗಿದೆ !

ಶ್ರೀಗಂಗಾನಗರ (ರಾಜಸ್ಥಾನ) – ಇಲ್ಲಿಯ ರಾಯಸಿಂಗ್‌ನಗರದಲ್ಲಿ ಓರ್ವ ೧೨ ವರ್ಷದ ಬಾಲಕ ಸಂಚಾರವಣಿಯಲ್ಲಿ ವಿಡಿಯೋಗಳನ್ನು ವೀಕ್ಷಿಸುತ್ತಾ ತನ್ನ ೬ ವರ್ಷದ ಸಹೋದರಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಾಲಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕಳೆದ ಒಂದು ವರ್ಷದಿಂದ ಆರೋಪಿ ವಿದ್ಯಾರ್ಥಿ ತನ್ನ ತಂದೆಯ ಮೊಬೈಲ್ ಉಪಯೋಗಿಸಿ ಆನ್‌ಲೈನ್ ಶಿಕ್ಷಣ ಪಡೆಯುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ರೀತಿ ಶಿಕ್ಷಣ ಪಡೆಯುವಾಗ, ಒಂದು ದಿನ ಆತನಿಗೆ ಅಶ್ಲೀಲ ವೀಡಿಯೊದ ನೋಟಿಫಿಕೇಷನ್ ಬಂದಿತು ಮತ್ತು ತಿಳಿಯದೆ ಅದನ್ನು ಒತ್ತಿದನು. ಅಂದಿನಿಂದ ಅವನಿಗೆ ಅಶ್ಲೀಲ ವೀಡಿಯೊಗಳನ್ನು ನೋಡುವ ಚಟ ಅಂಟಿಕೊಂಡಿತು. ಇದರಿಂದ ಅತ್ಯಾಚಾರದ ಘಟನೆ ನಡೆಯಿತು.