ಅಂತರ್‌ಧರ್ಮೀಯ ಪಾಲಾಗುವ ಯುವತಿಯರಿಗೆ ಆಪ್ತ ಸಮಾಲೋಚನೆ ಅಗತ್ಯ – ವಿಶ್ವಪ್ರಸನ್ನ ತೀರ್ಥ ಸ್ವಾಮಿ, ಪೇಜಾವರ ಮಠ

ಭಾರತದಲ್ಲಿ ರಾಮರಾಜ್ಯ ತರಲು ಹಿಂದೂಗಳು ಪಣ ಹಾಗೂ ಪ್ರಯತ್ನ ಮಾಡುವುದು ಅಗತ್ಯ

ಶಿವಮೊಗ್ಗ – ನಮ್ಮ ಕುಟುಂಬದ ಹೆಣ್ಣುಮಕ್ಕಳು ಬೇರೆ ಧರ್ಮದವರ ಪಾಲಾಗುತ್ತಾರೆ. ಹಿಂದೂ ಧರ್ಮ ಬೆಳವಣಿಗೆಗೆ ದೊಡ್ಡ ತೊಡಕು ಆಗಿದೆ. ಬದುಕಿನ ಅಡಚಣೆಗಳನ್ನು ಎದುರಿಸಲಾಗದೇ ಹೆಣ್ಣುಮಕ್ಕಳು ಆತ್ಮಹತ್ಯೆ ಶರಣಾಗುವುದನ್ನು ಕಾಣುತ್ತಿದ್ದೇವೆ. ಅದಕ್ಕೋಸ್ಕರ ಮಾತೃಮಂಡಳಿ ಬೇಕು ಎಂದು ಸೂಚನೆ ಮಾಡಿದ್ದೇನೆ. ವಧು-ವರರನ್ನು ಹುಡುಕುವುದು ತೊಂದರೆದಾಯಕವಾದಾಗ ಬೇರೆ ಧರ್ಮದವರೊಂದಿಗೆ ಮದುವೆ ಮಾಡಿ ಸಂತ್ರೆಸ್ತೆಯಾದುವ ಹೆಣ್ಣುಮಕ್ಕಳ ಸಮಸ್ಯೆಗೆ ತಕ್ಕ ಪರಿಹಾರ ಸೂಚಿಸಬಹುದು ಎಂದರು. ಇಂತಹ ಸಂಕಟದಲ್ಲಿ ಸಿಲುಕಿರುವ ಮಹಿಳೆಯರನ್ನು ಕರೆಸಿ ಅವರಿಗೆ ಪರಿಹಾರವನ್ನು ಕಂಡುಕೊಳ್ಳಲು ಮಾರ್ತಮಂಡಳಿಯನ್ನು ಸ್ಥಾಪಿಸಬೇಕು. ಮಹಿಳೆಯರ ಸಮಸ್ಯೆಗಳನ್ನು ಕೇಳಿಸಿಕೊಂಡು ಯೋಗ್ಯವಾದ ಉಪಾಯವನ್ನು ನೀಡಬೇಕು, ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರು ಶಿವಮೊಗ್ಗದಲ್ಲಿ ಪ್ರವಚನಕ್ಕಾಗಿ ಬಂದಾಗ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಅಂತರ್‌ಧರ್ಮಿಯ ಮದುವೆಗಾಗಿ ಬ್ರಾಹ್ಮಣ ಯುವತಿಯರನ್ನು ಗುರಿ ಮಾಡಲಾಗುತ್ತಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೇವಲ ಶ್ರೀರಾಮಮಂದಿರ ನಿರ್ಮಾಣ ಮಾಡಿದರೆ ರಾಮರಾಜ್ಯ ಬರುವುದಿಲ್ಲ, ನಾವು ನಿರ್ಮಾಣ ಮಾಡಬೇಕು !

ವಿಶ್ವಪ್ರಸನ್ನ ತೀರ್ಥ ಸ್ವಾಮಿ ತಮ್ಮ ಮಾತನ್ನು ಮುಂದುವರೆಸುತ್ತಾ, ನಮ್ಮ ಧ್ಯೇಯ ಕೇವಲ ಮಂದಿರ ನಿರ್ಮಾಣಕ್ಕಷ್ಟೇ ಆಗಬಾರದು. ರಾಮ ಮಂದಿರ ನಿರ್ವಹಣೆಯ ಬಗ್ಗೆಯೂ ಇರಬೇಕು. ಮಂದಿರ ಮತ್ತೆ ಧ್ವಂಸ ಆಗದೇ ಸಹಸ್ರಾರು ವರ್ಷ ಮತ್ತೆ ಹಾಳು ಗೆಡುವದಂತೆ ಉಳಿಸಿಕೊಳ್ಳಬೇಕಾದ ನಮ್ಮ ಪರಂಪರೆಯ ಪ್ರತೀಕ ಆಗಬೇಕು. ಧರ್ಮದ ಜತೆ ಸಂಸ್ಕೃತಿಯೂ ಉಳಿದರೆ ಮಾತ್ರ ಅರ್ಥವಿರುತ್ತೆ. ನಮ್ಮ ಮಕ್ಕಳಿಗೆ ರಾಮನ ಪಾಠ ಕಲಿಸಬೇಕು, ಪುರಾಣ ಪ್ರವಚನಗಳಾಗಬೇಕು. ಕೇವಲ ರಾಮ ಮಂದಿರ ನಿರ್ಮಾಣವಾದಾಗ ಮಾತ್ರಕ್ಕೆ ರಾಮ ರಾಜ್ಯವಾಗುವುದಿಲ್ಲ. ನಾವೆಲ್ಲಾ ರಾಮ ರಾಜ್ಯ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಹೇಳಿದರು.