ಸಲಿಂಗಕಾಮಿ ವಿವಾಹದಂತಹ ‘ಕೆಟ್ಟ ವಿಷಯಗಳನ್ನು’ ದೇವರು ಆಶೀರ್ವದಿಸುವುದಿಲ್ಲ ! – ವ್ಯಾಟಿಕನ್ ಚರ್ಚ್

ಇಂತಹ ಹೇಳಿಕೆಯನ್ನು ಶಂಕರಾಚಾರ್ಯರು ನೀಡುತ್ತಿದ್ದರೆ, ಎಲ್ಲಾ ಜಾತ್ಯತೀತವಾದಿಗಳು, ಪ್ರಗತಿ (ಅಧೋಗತಿ) ಪರರು ಅವರನ್ನು ‘ಸನಾತಾನಿ’ ಎಂದು ಕರೆಯುತ್ತಿದ್ದರು; ಆದರೆ ವ್ಯಾಟಿಕನ್ ಚರ್ಚ್ ಸಲಿಂಗ ವಿವಾಹವನ್ನು ವಿರೋಧಿಸಿದಾಗ ಎಲ್ಲರೂ ಮೌನವಾಗಿದ್ದಾರೆ !

ವ್ಯಾಟಿಕನ್ ಸಿಟಿ – ಸಲಿಂಗಕಾಮಿಗಳೊಂದಿಗೆ ಸಭ್ಯವಾಗಿಯೆ ನಡೆದುಕೊಳ್ಳಬೇಕು; ಆದರೆ ಇಂತಹ ಮದುವೆಗಳಿಗೆ ಆಶೀರ್ವದಿಸಲು ಸಾಧ್ಯವಿಲ್ಲ; ಏಕೆಂದರೆ ಈಶ್ವರನ ಪ್ರಕಾರ, ಮದುವೆ ಎನ್ನುವುದು ಪುರುಷ ಮತ್ತು ಸ್ತ್ರೀಯ ಜೀವನಕ್ಕಾಗಿ ಸ್ವಇಚ್ಛೆಯಿಂದ ಒಟ್ಟಿಗೆ ಸೇರುವ ಒಂದು ಪದ್ದತಿಗಿದೆ. ಅದಕ್ಕಾಗಿಯೇ ಸಲಿಂಗಕಾಮಿ ವಿವಾಹದಂತಹ ‘ಕೆಟ್ಟ ವಿಷಯಗಳನ್ನು’ ದೇವರು ಆಶೀರ್ವದಿಸುವುದಿಲ್ಲ, ಎಂದು ವ್ಯಾಟಿಕನ್ ಚರ್ಚ್ ಸ್ಪಷ್ಟಪಡಿಸಿದೆ.

‘ಕ್ಯಾಥೊಲಿಕ್ ಚರ್ಚ್‌ಗೆ ಸಂಬಂಧಿಸಿದ ಮಹಿಳಾ ಪಾದ್ರಿ ಸಲಿಂಗ ಮದುವೆಗೆ ಹೋಗಿ ದಂಪತಿಗಳನ್ನು ಆಶೀರ್ವದಿಸಬಹುದೇ ?’ ಎಂಬ ಪ್ರಶ್ನೆಗೆ ಉತ್ತರಿಸುವಾಗ ವ್ಯಾಟಿಕನ್ ಇದನ್ನು ಸ್ಪಷ್ಟಪಡಿಸಿದೆ. ಈ ಸಂದರ್ಭದಲ್ಲಿ, ೨ ಪುಟಗಳ ವಿವರಣೆಯನ್ನು ನೀಡಲಾಗಿದೆ. ಈ ವಿಚಾರಕ್ಕೆ ಪೋಪ್ ಫ್ರಾನ್ಸಿಸ್ ಅವರ ಒಪ್ಪಿಗೆ ಇದೆ ಎಂದು ಚರ್ಚ್ ಸ್ಪಷ್ಟಪಡಿಸಿದೆ. ಇದನ್ನು ೭ ವಿವಿಧ ಭಾಷೆಗಳಿಗೆ ಅನುವಾದಿಸಲಾಗಿದೆ.