ಇಸ್ಲಾಮಾಬಾದ್ (ಪಾಕಿಸ್ತಾನ) – ಚೀನಾದಿಂದ ಲಸಿಕೆ ಪಡೆದಿದ್ದರೂ ಪಾಕಿಸ್ತಾನದಲ್ಲಿ ಮೂವರು ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಮೂವರೂ ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಇದರಲ್ಲಿ ಒಬ್ಬರು ಡಾಕ್ಟರ್, ಒಬ್ಬ ಹೆಡ್ ನರ್ಸ್ ಮತ್ತು ವಾರ್ಡ್ ಹೆಡ್ ಆಗಿದ್ದಾರೆ. ಲಸಿಕೆ ಪಡೆದ ಹದಿನೈದು ದಿನಗಳ ನಂತರ, ಅವರಿಗೆ ಕೊರೋನಾ ಸೋಂಕು ತಗುಲಿದೆ.
೧. ಪಾಕಿಸ್ತಾನ ಮೆಡಿಕಲ್ ಅಸೋಸಿಯೇಶನ್‌ದ ಅಧ್ಯಕ್ಷ ಡಾ. ಅಶ್ರೋ ನಿಜಾಮಿಯವರು ಈ ಬಗ್ಗೆ ಹೇಳುತ್ತಾ, ‘ಯಾವುದೇ ಲಸಿಕೆ ಶೇ. ೧೦೦ ರಷ್ಟು ಪರಿಣಾಮಕಾರಿಯಾಗುವುದಿಲ್ಲ. ಕೊರೋನಾವನ್ನು ತಪ್ಪಿಸಲು ನಿಯಮಗಳನ್ನು ಪಾಲಿಸಬೇಕು’ ಎಂದರು.
दुनिया को कोरोना महामारी में धकेलने वाले चीन की कोरोना वैक्सीन एक बार फिर सवालों में घिर गई है#China #Pakistan #Vaccine https://t.co/kiQN4l2BaJ
— Zee News (@ZeeNews) March 4, 2021
೨. ಚೀನಾ ತನ್ನ ‘ಸಿನೋಫಾರ್ಮ್’ ಲಸಿಕೆಯ ೫ ಲಕ್ಷ ಡೋಸೇಜ್ ಗಳನ್ನು ಪಾಕಿಸ್ತಾನಕ್ಕೆ ನೀಡಿದೆ ಮತ್ತು ಚೀನಾ ಇನ್ನೂ ಕೆಲವು ಲಕ್ಷ ಡೋಸೇಜ್ ನೀಡಲಿದೆ. ಚೀನಾದ ಲಸಿಕೆಯ ಬಗ್ಗೆ ಈಗಾಗಲೇ ವಿಶ್ವದಾದ್ಯಂತ ಸಂದೇಹ ವ್ಯಕ್ತಪಡಿಸಲಾಗಿದೆ. ಇದರ ಬೆನ್ನಲ್ಲೇ ಚೀನಾದ ಬದಲಾಗಿ ಭಾರತದಿಂದ ಲಸಿಕೆ ಪಡೆಯಲು ಶ್ರೀಲಂಕಾ ನಿರ್ಧರಿಸಿದೆ.