ಲೀವ್-ಇನ್ ರಿಲೇಶ‌ನ್ ಶಿಪ್ ‌ನಲ್ಲಿ ಸಹಮತದಿಂದ ದೈಹಿಕ ಸಂಬಂಧವಿರಿಸಿದರೆ ಅದನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ! – ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ: ಲೀವ್-ಇನ್ ರಿಲೇಶ‌ನ್ ಶಿಪ್ ನಲ್ಲಿರುವ ಸಂಗಾತಿಗಳು ಸಹಮತದಿಂದ ದೈಹಿಕ ಸಂಬಂಧವಿರಿಸಿದರೆ ಅದನ್ನು ಅತ್ಯಾಚಾರ ಎಂದು ಕರೆಯಲಾಗುವುದಿಲ್ಲ ಎಂದು ಒಂದು ಖಟ್ಲೆಯ ಆಲಿಕೆಯ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

೧. ದೀರ್ಘಕಾಲದಿಂದ ಇಬ್ಬರಲ್ಲಿ ಇರುವ ನಂಟಿನಿಂದ ಈ ಸಂಬಂಧವನ್ನಿಟ್ಟಿದ್ದರೆ ಮತ್ತು ಅದರಲ್ಲಿ ಪುರುಷ ಅಥವಾ ಮಹಿಳೆ ವಿವಾಹದ ಭರವಸೆಯನ್ನು ಪಾಲಿಸುತ್ತಿಲ್ಲವಾದರೆ ಆಗ ಅತ್ಯಾಚಾರವಾಗಿದೆ ಎಂಬ ಆರೋಪವನ್ನು ಒಪ್ಪಲಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ.

೨. ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಜೋಡಿಯೊಂದು ೫ ವರ್ಷಗಳಿಂದ ಲೀವ್-ಇನ್ ರಿಲೇಶ‌ನ್ ಶಿಪ್ ‌ನಲ್ಲಿ ವಾಸಿಸುತ್ತಿದ್ದರು. ಅನಂತರ ಪುರುಷನು ಇನ್ನೊಬ್ಬ ಯುವತಿಯನ್ನು ಮದುವೆಯಾದನು ಆಗ ಲೀವ್-ಇನ್ ನಲ್ಲಿದ್ದ ಯುವತಿಯು ಪುರುಷನು ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಳು