ದಕ್ಷಿಣಕಾಶಿ ಎಂದು ಪ್ರಸಿದ್ಧವಾಗಿರುವ ಕಪಿಲೇಶ್ವರ ದೇವಸ್ಥಾನ ಸಹಿತ ಬೆಳಗಾವಿ ಜಿಲ್ಲೆಯ ೧೬ ದೇವಸ್ಥಾನಗಳಿಗೆ ಆಡಳಿತಮಂಡಳಿ ನೇಮಕ

ದೇವಸ್ಥಾನಗಳ ಸರಕಾರೀಕರಣದ ದುಷ್ಟರಿಣಾಮವನ್ನು ಅರಿತು ಅವುಗಳನ್ನು ಭಕ್ತರ ವಶಕ್ಕೆ ಒಪ್ಪಿಸಲು ಹಿಂದೂ ರಾಷ್ಟ್ರವೇ ಬೇಕು !

* ಭಾಜಪದ ರಾಜ್ಯದಲ್ಲಿ ದೇವಸ್ಥಾನಗಳ ಸರಕಾರೀಕರಣವು ಅಪೇಕ್ಷಿತವಿರದೇ ಅದು ಎಲ್ಲ ದೇವಸ್ಥಾನಗಳನ್ನು ಭಕ್ತರ ವಶಕ್ಕೆ ಒಪ್ಪಿಸುವುದು ಅಪೇಕ್ಷಿತವಾಗಿದೆ !

* ಸರಕಾರವು ಒಂದೆಡೆಗೆ ತನ್ನ ಒಡೆತನದ ಕಂಪನಿಗಳ ಖಾಸಗೀಕರಣ ಮಾಡುತ್ತಿರುವಾಗ ದೇವಸ್ಥಾನಗಳ ಸರಕಾರೀಕರಣ ಮಾಡುತ್ತಿದೆ, ಎಂಬುದನ್ನು ಗಮನದಲ್ಲಿಡಿ !

* ಭಾರತದ ಸಂವಿಧಾನವು ಧರ್ಮನಿರಪೇಕ್ಷವಾಗಿರುವಾಗ ಮಸೀದಿ ಮತ್ತು ಚರ್ಚ್‌ಗಳ ಸರಕಾರೀಕರಣ ಮಾಡದೇ ಕೇವಲ ಹಿಂದೂಗಳ ದೇವಸ್ಥಾನಗಳ ಸರಕಾರೀಕಾರಣವನ್ನು ಮಾಡಲಾಗುತ್ತಿದೆ, ಎಂಬುದನ್ನು ಗಮನದಲ್ಲಿಡಿ !

ಬೆಳಗಾವಿ – ಬೆಳಗಾವಿ ನಗರ ಸಹಿತ ಜಿಲ್ಲೆಯ ೧೬ ದೇವಸ್ಥಾನಗಳಲ್ಲಿ ಆಡಳಿತಮಂಡಳಿಯ ನೇಮಕ ಮಾಡುವ ಆದೇಶವನ್ನು ಜಿಲ್ಲಾ ಮುಜರಾಯಿ ಇಲಾಖೆಯು ನೀಡಿದೆ. ಈ ವಿಷಯದಲ್ಲಿ ೧೮ ಫೆಬ್ರುವರಿ ಈ ದಿನದಂದು ಆದೇಶವನ್ನು ಜಾರಿಗೆ ತರಲಾಯಿತು. ಇದರಲ್ಲಿ ಪ್ರಮುಖವಾಗಿ ನಗರದ ದಕ್ಷಿಣಕಾಶಿಯೆಂದು ಗುರುತಿಸಲ್ಪಡುವ ಶ್ರೀ ಕಪಿಲೇಶ್ವರ ದೇವಸ್ಥಾನ, ಶಹಾಪೂರದ ಶ್ರೀ ಅಂಬಾಬಾಯಿ ದೇವಸ್ಥಾನ ಇವುಗಳ ಸಮಾವೇಶವಿದೆ. ಆಡಳಿತವು ಇದ್ದಕ್ಕಿದ್ದಂತೆ ತೆಗೆದುಕೊಂಡ ಈ ನಿರ್ಣಯದಿಂದ ಭಕ್ತರಲ್ಲಿ ತೀವ್ರ ಅಸಮಾಧಾನ ನಿರ್ಮಾಣವಾಗಿದೆ.

ಜಿಲ್ಲಾ ಮುಜರಾಯಿ ಇಲಾಖೆಯ ೪ ಫೆಬ್ರುವರಿ ಈ ದಿನದಂದು ಸಭೆಯಾಯಿತು. ಅದರಲ್ಲಿ ವಿವಿಧ ದೇವಸ್ಥಾನಗಳಲ್ಲಿ ಆಡಳಿತ ಮಂಡಳಿಯವರನ್ನು ನೇಮಕ ಮಾಡುವ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಆಡಳಿತಮಂಡಳಿಯವರು ಎಂದಿನಿಂದ ಕಾರ್ಯಕಲಾಪವನ್ನು ನೋಡಿಕೊಳ್ಳುವರು, ಎಂದು ಇಲ್ಲಿಯವರೆಗೆ ಸ್ಪಷ್ಟವಿರದೇ ಚಾಲ್ತಿ ತಿಂಗಳ ಮೊದಲ ಅಥವಾ ಎರಡನೇಯ ವಾರದಲ್ಲಿ ಆಡಳಿತಂಮಡಳಿಯ ನಿರ್ವಾಹಕರು ದೇವಸ್ಥಾನಗಳನ್ನು ವಶಕ್ಕೆ ತೆಗೆದುಕೊಳ್ಳುವರು, ಎಂಬ ಸಂಕೇತವು ದೊರಕುತ್ತಿದೆ. ನಿರ್ವಾಹಕರ ನಿಯುಕ್ತಿಯ ಆದೇಶದ ವಿರುದ್ಧ ದೇವಸ್ಥಾನ ಸಮಿತಿಯ ಸದಸ್ಯರಿಂದ ವಿರೋಧವಾಗುತ್ತಿದೆ. ಈ ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ ನಡೆಸುವುದು, ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದು ಇಂತಹ ವಿವಿಧ ಮಾರ್ಗಗಳನ್ನು ಅವಲಂಬಿಸಲಿದೆ.

ನಿರ್ವಾಹಕರನ್ನು ನೇಮಿಸಿದ ಕೆಲವು ಪ್ರಮುಖ ದೇವಸ್ಥಾನಗಳು

೧. ಕಪಿಲೇಶ್ವರ ದೇವಸ್ಥಾನ, ಬೆಳಗಾವ

. ಶ್ರೀ ಬನಶಂಕರಿ ದೇವಸ್ಥಾನ, ವಡಗಾವ

. ಶ್ರೀ ಅಂಬಾಬಾಯಿ ದೇವಸ್ಥಾನ, ಶಹಾಪೂರ

. ಶ್ರೀ ಜಿವ್ಹೇಶ್ವರ ದೇವಸ್ಥಾನ, ವಡಗಾವ

. ಶ್ರೀ ಜಾಲಗಾವ ಮಾರುತಿ ದೇವಸ್ಥಾನ, ಚವ್ಹಾಟ್ ಗಲ್ಲಿ

. ಶ್ರೀ ಗಜಾನನ ಭಕ್ತ ಪರಿವಾರ ಮಂಡಳ, ಶಾಂತಿನಗರ, ಟಿಳಕವಾಡಿ

. ಶ್ರೀ ಭೈರವದೇವ ಕಲಮೇಶ್ವರ ದೇವಸ್ಥಾನ, ಹೋನಗರ

. ಶ್ರೀ ಬಸವೇಶ್ವರ, ಕಲಮೇಶ್ವರ ಮತ್ತು ಬ್ರಹ್ಮದೇವ ದೇವಸ್ಥಾನ, ಕುಡಚಿ

. ಶ್ರೀ ಲಕ್ಕಬ್ಬಾದೇವ ದೇವಸ್ಥಾನ, ಬೆಕ್ಕೆರಿ

೧೦. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುನ್ನೋಳಿ, ತಾ. ಸೌಂದತ್ತಿ

೧೧. ಶ್ರೀ ಬಸವೇಶ್ವರ ದೇವಸ್ಥಾನ, ಖಿಳೆಗಾವ, ತಾ. ಅಥಣಿ

೧೨. ಶ್ರೀ ಹನುಮಾನ ದೇವಸ್ಥಾನ, ಸೌಂದತ್ತಿ

ಕೇವಲ ಹಿಂದೂಗಳ ದೇವಸ್ಥಾನಗಳ ಸರಕಾರೀಕರಣ ಏಕೆ ? – ಕಿರಣ ಗಾವಡೆ, ಜಿಲ್ಲಾಧ್ಯಕ್ಷ, ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನ, ಬೆಳಗಾವಿ

ದೇವಸ್ಥಾನಗಳ ಸರಕಾರೀಕರಣಕ್ಕೆ ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನದ ತೀವ್ರ ವಿರೋಧ

ಬೆಳಗಾವ, ೧ ಮಾರ್ಚ್ – ಜಿಲ್ಲೆಯಲ್ಲಿ ೧೬ ದೇವಸ್ಥಾನಗಳಲ್ಲಿ ಆಡಳಿತ ಮಂಡಳಿ ನೇಮಕ ಮಾಡುವ ಸರಕಾರದ ನಿಲುವನ್ನು ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನದ ತೀವ್ರ ವಿರೋಧವಿದೆ. ಹಿಂದೂ ದೇವಸ್ಥಾನಗಳ ಸರಕಾರೀಕರಣವನ್ನು ಹಿಂಪಡೆದುಕೊಳ್ಳದಿದ್ದರೆ ತೀವ್ರ ಆಂದೋಲನವನ್ನು ಮಾಡಲಾಗುವುದು. ಮುಸಲ್ಮಾನ್, ಕ್ರೈಸ್ತ, ಜೈನ್, ಸಿಕ್ಖ್, ಪಾರಸಿ ಮುಂತಾದವರನ್ನು ಹೊರತುಪಡಿಸಿ ಕೇವಲ ಹಿಂದೂಗಳ ದೇವಸ್ಥಾನಗಳನ್ನೇ ಏಕೆ ಸರಕಾರೀಕರಣ ಮಾಡಲಾಗುತ್ತಿದೆ ? ಇತರ ಪಂಥಗಳ ಒಂದೂ ಪ್ರಾರ್ಥನಾಸ್ಥಳದ ಸರಕಾರೀಕರಣ ಏಕಿಲ್ಲ ? ಸರಕಾರವು ಕೇವಲ ಹಿಂದೂಗಳ ದೇವಸ್ಥಾನಗಳಲ್ಲಿನ ಹಣವನ್ನು ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿದೆ. ಪ್ರತಿಯೊಂದು ಸರಕಾರೀ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತರ ಓಲೈಕೆ ಮತ್ತು ಹಿಂದೂಗಳ ಶೋಷಣೆಯನ್ನು ಮಾಡಲಾಗುತ್ತಿದೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ, ಎಂದು ಶ್ರೀ ಶಿವಪ್ರತಿಷ್ಠಾನ ಹಿಂದುಸ್ಥಾನದ ಬೆಳಗಾವ ಜಿಲ್ಲಾಧ್ಯಕ್ಷ ಶ್ರೀ. ಕಿರಣ ಗಾವಡೆಯವರು ಹೇಳಿದ್ದಾರೆ.