೧೯ ವರ್ಷಗಳ ನಂತರ ಗೋಧ್ರಾ ಗಲಭೆಯ ಮುಖ್ಯ ಆರೋಪಿ ರಫೀಕ್ ಹುಸೇನ್ ಬಂಧನ

* ಸಂವೇದನಾಶೀಲ ಪ್ರಕರಣದ ಆರೋಪಿಯನ್ನು ೧೯ ವರ್ಷಗಳ ನಂತರ ಬಂಧಿಸುವ ಪೊಲೀಸರ (ಅ)ದಕ್ಷತೆ!

* ಈಗ ಆರೋಪಿಯನ್ನು ಪೋಷಿಸುವ ಬದಲು, ಶೀಘ್ರಗತಿ ನ್ಯಾಯಾಲಯದಲ್ಲಿ ಖಟ್ಲೆ ನಡೆಸಿ ಅವರಿಗೆ ಮರಣದಂಡನೆ ವಿಧಿಸಲು ಗುಜರಾತ್ ಸರಕಾರ ಪ್ರಯತ್ನಿಸಬೇಕು !

ಕರ್ಣಾವತಿ (ಗುಜರಾತ್) – ೨೦೦೨ ನೇ ಇಸವಿಯಲ್ಲಿ ರಾಜ್ಯದ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕಾರಸೇವಕರು ಇದ್ದ ಡಬ್ಬಿಗೆ ಬೆಂಕಿ ಹಚ್ಚಿ ೫೯ ಕಾರಸೇವಕರನ್ನು ಜೀವಂತವಾಗಿ ಸುಟ್ಟುಹಾಕಿದ ಪ್ರಕರಣದ ಪ್ರಮುಖ ಆರೋಪಿ ರಫೀಕ್ ಹುಸೇನ್ ಭಟುಕ್ ನನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಕುಟುಂಬದವರನ್ನು ಭೇಟಿ ಮಾಡಲು ಗೋಧ್ರಾಗೆ ಬಂದಾಗ ರಫೀಕ್‌ನನ್ನು ಬಂಧಿಸಲಾಯಿತು. ಘಟನೆಯ ಸಮಯದಲ್ಲಿ ರಫೀಕ್ ಗೋಧ್ರಾ ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.