ರಾಷ್ಟ್ರಧ್ವಜವನ್ನು ಅವಮಾನಿಸಿದವನನ್ನು ಬಂಧಿಸಿ! – ಪ್ರಧಾನಮಂತ್ರಿ ಮೋದಿಗೆ ರಾಕೇಶ್ ಟಿಕೈತ್ ಪ್ರತ್ಯುತ್ತರ

ಪ್ರಧಾನಮಂತ್ರಿ ನರೇಂದ್ರ ಮೋದಿ

ನವ ದೆಹಲಿ: ‘ದೇಶದ ರಾಷ್ಟ್ರಧ್ವಜವು ಕೇವಲ ಪ್ರಧಾನಮಂತ್ರಿಯವರಿಗೆ ಮಾತ್ರ ಸೀಮಿತವಾಗಿದೆಯೇ? ಇಡೀ ದೇಶಕ್ಕೆ ರಾಷ್ಟ್ರಧ್ವಜದ ಮೇಲೆ ಪ್ರೀತಿಯಿದೆ. ಹಾಗಾಗಿ ದೇಶದ ಧ್ವಜವನ್ನು ಅವಮಾನಿಸಿದ ವ್ಯಕ್ತಿಯನ್ನು ಬಂಧಿಸಿ’ ಎಂದು ರೈತ ಮುಖಂಡ ರಾಕೇಶ್ ಟಿಕೈತ್ ಇವರು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಪ್ರತಿಕ್ರಯಿಸಿದ್ದಾರೆ. ಟ್ರಾಕ್ಟರ್ ಮೆರವಣಿಗೆಯಲ್ಲಿ ರಾಷ್ಟ್ರಧ್ವಜವನ್ನು ಅವಮಾನಿಸಲಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದರು.

ಹೊಸ ಕೃಷಿ ಕಾನೂನುಗಳ ಕುರಿತು ಸರಕಾರ ಮತ್ತು ರೈತರ ನಡುವೆ ಚರ್ಚೆಗಳು ಪುನರಾರಂಭವಾಗುತ್ತದೆಯೇ ಎಂಬ ಪ್ರಶ್ನೆಗೆ ರಾಕೇಶ್ ಟಿಕೈತ್ ಇವರು, “ನಾವು ಪ್ರಧಾನಿ ನರೇಂದ್ರ ಮೋದಿಯವರನ್ನು ಗೌರವಿಸುತ್ತೇವೆ” ಎಂದು ಹೇಳಿದರು. ‘ರೈತರ ಸಮಸ್ಯೆಗಳಿಗೆ ನಾವು ಅವರಿಂದ ಪರಿಹಾರವನ್ನು ನಿರೀಕ್ಷಿಸುತ್ತೇವೆ; ಆದರೆ ನಮ್ಮ ಮೇಲೆ ಒತ್ತಡದ ರಾಜಕೀಯ ಮಾಡಿದರೆ ನಾವು ಚರ್ಚೆಗೆ ಸಿದ್ಧರಿಲ್ಲ. ಬಂದೂಕುಗಳ ಭಯವನ್ನು ತೋರಿಸಿ ಚರ್ಚೆಯಾಗಲು ಸಾಧ್ಯವಿಲ್ಲ. ಯಾವುದೇ ಷರತ್ತುಗಳನ್ನಿಡದೇ ಮಾತುಕತೆ ನಡೆಸುವ ಸಿದ್ಧತೆಯನ್ನು ಸರಕಾರವು ಇಟ್ಟುಕೊಂಡಿರಬೇಕು’ ಎಂದಿದ್ದಾರೆ.