ವಿಧಾನ ಪರಿಷತ್ತಿನಲ್ಲಿ ಪಾರ್ನ್ ವಿಡಿಯೋ ನೋಡುವವರು ನಿಜಜೀವನದಲ್ಲಿ ಏನು ಮಾಡುತ್ತಿರಬಹುದು ಎಂಬುದರ ವಿಚಾರವು ಈಗ ಜನರ ಮನಸ್ಸಿನಲ್ಲಿ ಬರುತ್ತಿರಬಹುದು. ಕಾಂಗ್ರೆಸ್ ನಲ್ಲಿ ನೈತಿಕತೆ ಎಂಬ ಹೆಸರಿನ ವಿಷಯವೇನಾದರೂ ಇದ್ದಲ್ಲಿ ಇಂತಹ ಶಾಸಕರ ಮೇಲೆ ಕಾರ್ಯಾಚರಣೆ ಯಾಗಬಹುದು, ಇಲ್ಲವಾದರೆ ಎಲ್ಲರೂ ಒಂದೇ ಮಾಲೆಯ ಮಣಿಗಳು ಎನ್ನಬಹುದು.
ಬೆಂಗಳೂರು – ರಾಜ್ಯದ ವಿಧಾನ ಪರಿಷತ್ತಿನ ಸಭಾಗೃಹದಲ್ಲಿ ಮೋಬೈಲ್ ಫೋನ್ ನಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ ರಾಠೋಡ ಅಶ್ಲೀಲ ವಿಡಿಯೋ (ಪಾರ್ನ್) ನೋಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಸಭಾಗೃಹದಲ್ಲಿ ಕಾರ್ಯಕಲಾಪ ನಡೆಯುತ್ತಿದ್ದ ಸಮಯದಲ್ಲಿ ಛಾಯಾಚಿತ್ರಕಾರನು ತೆಗೆದ ಛಾಯಾಚಿತ್ರಗಳಲ್ಲಿ ರಾಠೋಡ ಅಶ್ಲೀಲ ವಿಡಿಯೋ ನೋಡುತ್ತಿರುವುದು ಕಾಣಿಸುತ್ತಿದೆ. ಭಾಜಪದ ವಕ್ತಾರರು ರಾಠೋಡ ವಿರುದ್ಧ ಕಾಂಗ್ರೆಸ್ ನಿಂದ ಕಾರ್ಯಾಚರಣೆಯ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
೧. ಈ ವಿಷಯದಲ್ಲಿ ರಾಠೋಡ ಸ್ಪಷ್ಟೀಕರಣವನ್ನು ನೀಡುವಾಗ, ‘ನಾನು ಇಂಟರ್ ನೆಟ್ ನಲ್ಲಿ ಏನೋ ನೋಡುತ್ತಿದ್ದೆ. ನಾನು ಸಾಮಾನ್ಯವಾಗಿ ಸಭಾಗೃಹಕ್ಕೆ ಮೊಬೈಲ್ ತೆಗೆದುಕೊಂಡು ಹೋಗುವುದಿಲ್ಲ. ಆದರೆ ಈ ಸತ್ರದಲ್ಲಿ ನನಗೆ ಕೆಲವು ಪ್ರಶ್ನೆಗಳನ್ನು ವಿಚಾರಿಸಲಿಕ್ಕಿತ್ತು. ಇದೇ ಕಾರಣಕ್ಕಾಗಿ ನಾನು ಅದನ್ನು ತೆಗೆದುಕೊಂಡು ಹೋಗಿದ್ದೆ. ಆಗ ನಾನು ಅದನ್ನು ಹುಡುಕಾಡತೊಡಗಿದೆ. ಆ ಸಮಯದಲ್ಲಿ ಅದರಲ್ಲಿ ಮಾಹಿತಿ ಸಂಗ್ರಹಿಸಿಡುವ ಕ್ಷಮತೆ ಮುಗಿದಿದೆ ಎಂದು ಕಂಡುಬಂತು. ಅನಂತರ ನಾನು ಅದರಲ್ಲಿರುವ ವಿಡಿಯೋಗಳನ್ನು ಡಿಲಿಟ್ ಮಾಡತೊಡಗಿದೆ’, ಎಂದು ಹೇಳಿದ್ದಾರೆ.
೨. ೨೦೧೨ರಲ್ಲಿ ಲಕ್ಷ್ಮಣ ಸವದಿ ಹಾಗೂ ಇತರ ೨ ಶಾಸಕರು ಸಭಾಗೃಹದ ಕಾರ್ಯಕಲಾಪ ನಡೆಯುತ್ತಿರುವಾಗ ಅಶ್ಲೀಲ ವಿಡಿಯೋ ನೋಡುತ್ತಿರುವುದು ಕಂಡುಬಂದಿತ್ತು.
(ಸೌಜನ್ಯ : India Ahead)

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!