* ಕೇವಲ ಅಪರಾಧವನ್ನು ದಾಖಲಿಸಿ ಪೊಲೀಸರು ಸುಮ್ಮನಿರಬಾರದು, ಇಂತಹವರನ್ನು ಸೆರೆಮನೆಗೆ ತಳ್ಳಬೇಕು ಮತ್ತು ಶೀಘ್ರ ನ್ಯಾಯಾಲಯದಲ್ಲಿ ಖಟ್ಲೆ ನಡೆಸಿ ಅವರಿಗೆ ಕಠೋರ ಶಿಕ್ಷೆಯಾಗುವಂತೆ ಪ್ರಯತ್ನಿಸಬೇಕು * ರಾಜದೀಪ ಸರದೇಸಾಯಿಯಂತಹ ಪತ್ರಕರ್ತರ ಪತ್ರಿಕೋದ್ಯಮವು ಎಷ್ಟು ಶಿಥಿಲಗೊಂಡಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ, ಇಂತಹ ಪತ್ರಕರ್ತರು ಸಮಾಜಕ್ಕೆ ಮಾರಕರಾಗಿದ್ದಾರೆ |
ನೊಯ್ಡಾ (ಉತ್ತರಪ್ರದೇಶ) – ‘ಗಣರಾಜ್ಯೋತ್ಸವ ದಿನದಂದು ರೈತರ ಟ್ರಾಕ್ಟರ್ ಮೊರ್ಚಾದ ಸಮಯದಲ್ಲಾದ ಹಿಂಸಾಚಾರದ ಸಮಯದಲ್ಲಿ ಪೊಲೀಸರ ಗೋಲಿಬಾರಿನಲ್ಲಿ ಓರ್ವ ರೈತನು ಮೃತಪಟ್ಟ’ ಎಂಬ ಗಾಳಿಸುದ್ದಿಯನ್ನು ಹರಡಿದ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್‌ನ ಶಾಸಕ ಶಶಿ ತರೂರ, ‘ಇಂಡಿಯಾ ಟುಡೆ’ ಪತ್ರಕರ್ತ ರಾಜದೀಪ ಸರದೇಸಾಯಿ, ‘ನ್ಯಾಶನಲ್ ಹೆರಾಲ್ಡ್’ ಪತ್ರಿಕೆಯ ಸಲಹೆಗಾರ ಮೃಣಾಲ ಪಾಂಡೆ, ಪತ್ರಕರ್ತ ಜಫರ ಆಗಾ, ಪರೇಶನಾಥ, ಅನಂತ ನಾಥ, ವಿನೋದ ಕೆ., ಜೊಸ್ ಮುಂತಾದವರ ವಿರುದ್ಧ ದೇಶದ್ರೋಹ, ಅಶಾಂತಿ ಹರಡುವುದು, ಹಿಂಸೆಯನ್ನು ಭುಗಿಲೆಬ್ಬಿಸುವುದು ಮುಂತಾದ ಕಲಂಗಳಡಿಯಲ್ಲಿ ಅಪರಾಧವನ್ನು ನೋಂದಾಯಿಸಿದ್ದಾರೆ.
ट्रैक्टर परेड हिंसाः शशि थरूर, राजदीप सरदेसाई और अन्य के ख़िलाफ़ राजद्रोह का केस दर्ज#TractorParade #Sedition #RepublicDay #ShashiTharoor #RajdeepSardesai #रिपब्लिकडे #ट्रैक्टरपरेड #राजद्रोह #शशिथरूर #राजदीपसरदेसाई https://t.co/VEZqr6L3fQ
— द वायर हिंदी (@thewirehindi) January 29, 2021