ಫೆಬ್ರವರಿ ೧ ರಂದು ಸಂಸತ್ತಿನಲ್ಲಿ ನಡೆಸಲಾಗುವ ರೈತರ ಮೊರ್ಚಾವನ್ನು ರದ್ದು

ನವ ದೆಹಲಿ – ಫೆಬ್ರವರಿ ೧ರಂದು ಸಂಸತ್ತಿನಲ್ಲಿ ನಡೆಸಲಾಗುವ ರೈತರ ಮೊರ್ಚಾವನ್ನು ರದ್ದುಗೊಳಿಸಲಾಗಿದೆ. ದೆಹಲಿಯಲ್ಲಾದ ಹಿಂಸಾಚಾರದ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಭಾರತೀಯ ರೈತರ ಯುನಿಯನ್‌ನ ಬಲಬಿರಸಿಂ ರಾಜೆವಾಲ ಇವರು ಮಾತನಾಡುತ್ತಾ, ‘ರೈತ ಆಂದೋಲನದ ಅಂತರ್ಗತ ಹುತಾತ್ಮರಾದ ರೈತರಿಗಾಗಿ ನಾವು ದೇಶದಾದ್ಯಂತ ಮೆರವಣಿಗೆ ನಡೆಸಲಿದ್ದೇವೆ. ಅಲ್ಲದೆ ಒಂದು ದಿನದ ಉಪವಾಸವನ್ನು ಸಹ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

ರಾಜೆವಾಲ ಇವರು ಸರಕಾರದ ಮೇಲೆ ಆರೋಪ ಮಾಡುವಾಗ, ಸರಕಾರದ ಕಾರಸ್ತಾನದಿಂದ ಟ್ರಾಕ್ಟರ್ ಮೊರ್ಚಾ ವಿಫಲವಾಯಿತು. ಇದರಲ್ಲಿ ಅಡಚಣೆ ತರಲು ಸರಕಾರವು ಪ್ರಯತ್ನ ಮಾಡಿತು. ಇದರಲ್ಲಿ ಶೇ. ೯೯.೯೦ ಜನರು ಶಾಂತವಾಗಿ ಆಂದೋಲನ ಮಾಡುತ್ತಿದ್ದರು. ಆದರೆ ಕೆಲವು ತಪ್ಪು ಘಟನೆಗಳಾದವು. ಸರಕಾರವು ನಮಗೆ ಬಹಳ ಅಡಚಣೆಗಳನ್ನು ಉಂಟುಮಾಡಿತು ಎಂದರು.