ಶ್ರೀ ಹನುಮಾನನ ಚಿತ್ರವನ್ನು ಪೋಸ್ಟ ಮಾಡಿ ಆಭಾರ ವ್ಯಕ್ತ ಮಾಡಿದ ಬ್ರಾಝಿಲ್‌ನ ರಾಷ್ಟ್ರಪತಿಗಳು !

ಬ್ರಾಝಿಲ್‌ಗೆ ಕೊರೋನಾ ಲಸಿಕೆಯ ೨೦ ಲಕ್ಷ ಡೋಸ್ ಕಳಿಸಿದ ಭಾರತ !

ವಿದೇಶದ ಕ್ರೈಸ್ತ ರಾಷ್ಟ್ರಪತಿಗಳಿಗೂ ಶ್ರೀ ಹನುಮಾನನ ಮಹತ್ವವು ಗೊತ್ತಿದೆ ಮತ್ತು ಆ ಕುರಿತು ಗೌರವವೂ ಅನಿಸುತ್ತದೆ, ಹಾಗೆಯೇ ಅವರು ಭಾರತದ ಕಡೆಗೆ ಹಿಂದೂ ರಾಷ್ಟ್ರವೆಂದು ನೋಡುತ್ತಾರೆ, ಎಂಬುದೇ ಇದರಿಂದ ಕಂಡು ಬರುತ್ತದೆ. ಇದು ಭಾರತದ ಬುದ್ಧಿಜೀವಿಗಳಿಗೆ ಕಪಾಳಮೋಕ್ಷ !

ಬ್ರಾಝಿಲ್‌ನ ರಾಷ್ಟ್ರಪತಿ ಜೆಯರ್ ಬೊಲಸೊನಾರೊ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ

ಹೊಸ ದೆಹಲಿ – ಬ್ರಾಝಿಲ್‌ನ ರಾಷ್ಟ್ರಪತಿ ಜೆಯರ್ ಬೊಲಸೊನಾರೊ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕೊರೋನಾ ಲಸಿಕೆಯ ೨೦ ಲಕ್ಷ ಡೋಸ್ ಕಳುಹಿಸಲು ವಿನಂತಿಸಿದ ಮೇರೆಗೆ ಭಾರತವು ಮಾನವೀಯತೆಯ ಆಧಾರದಲ್ಲಿ ಬ್ರಾಝಿಲ್‌ಗೆ ೨೦ ಲಕ್ಷ ಡೋಸ್ ಕಳುಹಿಸಿತು. ಇದರಿಂದ ರಾಷ್ಟ್ರಪತಿ ಜೆಯರ್ ಬೊಲಸೊನಾರೊ ಇವರು ಭಾರತಕ್ಕೆ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅವರು ಟ್ವಿಟರ್‌ನಲ್ಲಿ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಶ್ರೀ ಹನುಮಾನ ಭಾರತದಿಂದ ಸಂಜೀವನಿ ಇರುವ ಬೆಟ್ಟವನ್ನು ಕೈಯಲ್ಲಿ ತೆಗೆದುಕೊಂಡು ಬ್ರಾಝಿಲ್ ಗೆ ಹೋಗುತ್ತಿದ್ದಂತೆ ತೋರಿಸಲಾಗಿದೆ. ರಾಮಾಯಣದಲ್ಲಿ ಶ್ರೀ ಹನುಮಾನ ಸಂಜೀವನಿ ಗಿಡವನ್ನು ತಂದು ಲಕ್ಷ್ಮಣನ ಪ್ರಾಣವನ್ನು ಕಾಪಾಡುತ್ತಾನೆ. ಇದರಿಂದ ಭಾರತವು ‘ಕೊರೋನಾ ವಿರೋಧಿ ಲಸಿಕೆಯನ್ನು ಪೂರೈಸಿ ಒಂದು ರೀತಿಯಲ್ಲಿ ಬ್ರಾಝಿಲ್‌ಗೆ ‘ಸಂಜೀವನಿ’ಯನ್ನು ಪೂರೈಸಿದೆ ಎಂದು ಬೊಲಸೊನಾರೊ ಇವರು ಪರೋಕ್ಷವಾಗಿ ಹೇಳಿದ್ದಾರೆ.

೧. ಜೆಯರ್ ಬೊಲಸೊನಾರೊ ಇವರು, ‘ಜಾಗತಿಕ ಸಂಕಟವನ್ನು ದೂರ ಮಾಡುವ ಪ್ರಯತ್ನಗಳಲ್ಲಿ ಓರ್ವ ಮಿತ್ರನು ಬ್ರಾಝಿಲ್‌ಗೆ ಲಭಿಸಿದ್ದಾನೆ, ಎಂದು ಅಭಿಮಾನವೆನಿಸುತ್ತದೆ. ಬ್ರಾಝಿಲ್‌ಗೆ ಲಸಿಕೆಯನ್ನು ಪೂರೈಸಿ ಸಹಕಾರ ನೀಡಿದ ಭಾರತದ ಆಭಾರಿಯಾಗಿದ್ದೇವೆ’, ಎಂದು ಇದರಲ್ಲಿ ಹೇಳಿದ್ದಾರೆ.

೨. ಬೊಲಸೊನಾರೊ ಇವರ ಟ್ವೀಟ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಉತ್ತರ ನೀಡುತ್ತಾ, ಬೊಲಸೊನಾರೊರವರೇ ಕೊವಿಡ್ ಮಹಾಮಾರಿಯ ವಿರುದ್ಧ ಒಟ್ಟಾಗಿ ಹೋರಾಡಲು ಬ್ರಾಝಿಲ್‌ನ ವಿಶ್ವಾಸಾರ್ಹ ಸಹಾಯಕನಾಗುವುದು, ನಮ್ಮ ಸನ್ಮಾನವಾಗಿದೆ. ಎರಡೂ ದೇಶಗಳು ಪರಸ್ಪರರಿಗೆ ಸಹಾಯ ಮಾಡಿ ಸಂಬಂಧವನ್ನು ಸುದೃಢ ಮಾಡುವವು’, ಎಂದು ಹೇಳಿದರು.