ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ವಿಜ್ಞಾನವು ವಿವಿಧ ಯಂತ್ರಗಳನ್ನು ಹುಡುಕಿ ಮಾನವನ ಸಮಯವನ್ನು ಉಳಿಸಿತು. ಆದರೆ ಆ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಕಲಿಸದಿರುವುದರಿಂದ ಮಾನವನು ಪರಾಕಾಷ್ಠೆಯ ಅಧೋಗತಿಗೆ ತಲುಪಿದ್ದಾನೆ.

ಸಚ್ಚಿದಾನಂದ ಈಶ್ವರನನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳುವುದು ಎಂಬುದನ್ನು ಅಧ್ಯಾತ್ಮಶಾಸ್ತ್ರವು ಹೇಳುತ್ತದೆ ಆದರೆ ವಿಜ್ಞಾನವಾದಿಗಳು ಮತ್ತು ಬುದ್ಧಿಜೀವಿಗಳು ಈಶ್ವರನಿಲ್ಲ, ಎಂದು ಕೂಗಿ ಕೂಗಿ ಹೇಳುತ್ತಾರೆ.

‘ಹಿಂದೂ ಧರ್ಮದಲ್ಲಿ ಹೇಳಿರುವಷ್ಟು ಆಳವಾದ ಜ್ಞಾನವು ಇತರ ಒಂದಾದರೂ ಪಂಥಗಳಲ್ಲಿ ಇದೆಯೇ ? ವಿಜ್ಞಾನಕ್ಕಾದರೂ ತಿಳಿದಿದೆಯೇ ?

ಬುದ್ಧಿಜೀವಿಗಳಿಗೆ ಜಿಜ್ಞಾಸೆಯಿಲ್ಲದಿರುವುದರಿಂದ ಅವರು ತಮ್ಮಲ್ಲಿರುವಷ್ಟು ಸಣ್ಣ ಜ್ಞಾನದಲ್ಲಿ (ಅಜ್ಞಾನ) ಉಳಿಯುತ್ತಾರೆ; ಅವರಿಗೆ ಮುಂದುಮುಂದಿನದ್ದು ಏನೂ ತಿಳಿಯುವುದಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ