ದೇವಾಲಯದ ಬಳಿ ಮತಾಂಧರಿಂದ ಹೂವಿನ ಬುಟ್ಟಿಗಳ ಮೂಲಕ ಮಾಂಸವನ್ನು ಸಾಗಿಸಲಾಗುತ್ತದೆ !
|
ಭಾಗ್ಯನಗರ (ತೆಲಂಗಾಣಾ) – ಆಂಧ್ರಪ್ರದೇಶದ ಶ್ರೀಶೈಲಂ ದೇವಾಲಯದ ಮೇಲೆ ಮತಾಂಧರು ಹಿಡಿತ ಸಾಧಿಸಿದ್ದಾರೆ ಎಂದು ಗೋಶಾಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಹೇಳಿದ್ದಾರೆ. ಅವರು ‘ಡೆಕ್ಕನ್ ಕ್ರಾನಿಕಲ್’ನ ವರದಿಯ ಬಗ್ಗೆ ಮಾತನಾಡುತ್ತ, ದೇವಾಲಯದ ಸುತ್ತಮುತ್ತಲಿನ ಎಲ್ಲಾ ಅಂಗಡಿಗಳಲ್ಲಿ ಮುಸ್ಲಿಮರ ಏಕಸ್ವಾಮ್ಯತೆ ಸಾಧಿಸಲಾಗಿದೆ. ಇಲ್ಲಿನ ಗೋಶಾಲೆಯ ಹಸುಗಳನ್ನು ಗೋಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ.
ಗೋಶಾಲೆಯನ್ನು ಶ್ರೀಶೈಲಂ ಬ್ರಹ್ಮಾರಂಭ ಮಲ್ಲಿಕರ್ಜುನ ಸ್ವಾಮಿ ದೇವಸ್ಥಾನದ ವತಿಯಿಂದ ನಡೆಸಲಾಗುತ್ತದೆ. ಅಲ್ಲಿ ೧೫೪೨ ಹಸುಗಳು ಮತ್ತು ಎತ್ತುಗಳಿವೆ ಎಂದು ಹೇಳಿದರು.
೧. ಟಿ. ರಾಜಾ ಸಿಂಗ್ ಇವರು, ರಝಾಕ್ ಹೆಸರಿನ ವ್ಯಕ್ತಿ ಶ್ರೀಶೈಲಂ ದೇವಾಲಯದ ಗುತ್ತಿಗೆದಾರರಾಗಿದ್ದಾರೆ ಮತ್ತು ಅವರ ಪತ್ನಿ ಅಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. (ದೇವಾಲಯಗಳ ನಿರ್ವಹಣೆಯಲ್ಲಿ ಮತಾಂಧರನ್ನು ಹೇಗೆ ತೊಡಗಿಸಿಕೊಂಡಿದ್ದಾರೆ ? ಚರ್ಚ್‌ಗಳಲ್ಲಿ ಅಥವಾ ಮಸೀದಿಗಳ ನಿರ್ವಹಣೆಯಲ್ಲಿ ಹಿಂದೂಗಳನ್ನು ಎಂದಾದರೂ ತೊಡಗಿಸಿಕೊಂಡಿದ್ದಾರೆಯೇ ? – ಸಂಪಾದಕ) ರಝಾಕ್ ಆಢಳಿತಾರೂಢ ವೈ.ಎಸ್.ಆರ್. ಪಕ್ಷದ ಸ್ಥಳೀಯ ಶಾಸಕ ಶಿಲ್ಪಾ ಚಕ್ರಪಾಣಿ ರೆಡ್ಡಿ ಅವರ ಹತ್ತಿರದವರೆಂದು ಹೇಳಲಾಗುತ್ತಿದೆ. (ಆಂಧ್ರಪ್ರದೇಶದಲ್ಲಿ ಮತಾಂಧರು ಏಕೆ ಹೆಚ್ಚಾಗುತ್ತಿದ್ದಾರೆ ಎಂಬುದಕ್ಕೆ ಉದಾಹರಣೆ ! – ಸಂಪಾದಕ) ರಝಾಕ್ನ ಸಹೋದರ ತೆಲುಗು ದೇಶಂ ಪಕ್ಷದ ನಾಯಕನಾಗಿದ್ದಾನೆ. ಆದ್ದರಿಂದ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ರಜಾಕ್‌ಗೆ ದೇವಾಲಯದ ಮೇಲೆ ಹಿಡಿತವಿರುತ್ತದೆ.
Andhra Pradesh: BJP’s Raja Singh accuses YSRCP MLA of aiding one Razaq in controlling Srisailam Temple, says cows from goshala slaughteredhttps://t.co/UTsghCOOaS
— OpIndia.com (@OpIndia_com) December 27, 2020
೨. ಟಿ. ರಾಜಾ ಸಿಂಗ್ ಇವರು, ರಝಾಕ್ ವಿರುದ್ಧ ಅನೇಕ ಗಂಭೀರ ಅಪರಾಧಗಳ ತನಿಖೆ ಬಾಕಿ ಉಳಿದಿವೆ ಎಂದು ಆರೋಪಿಸಿದ್ದು, ಅವನು ಹೂವಿನ ಬುಟ್ಟಿಯಲ್ಲಿ ಮೇಕೆ ಮಾಂಸವನ್ನು ಸಾಗಿಸುತ್ತಾನೆ. ಈ ಹೂವುಗಳನ್ನು ದೇವಾಲಯದ ಪೂಜೆಗೆ ಬಳಸಲಾಗುತ್ತದೆ. ಗೋ ಹತ್ಯೆ ನಿಷೇಧವಿದ್ದರೂ ರಜಾಕ್ ಅವರ ಹೆಂಡತಿಯ ಸಹಾಯದಿಂದ ಅಲ್ಲಿ ಗೋಹತ್ಯೆ ಮಾಡಲಾಗುತ್ತದೆ.
೩. ಶಾಸಕ ಶಿಲ್ಪಾ ಚಕ್ರಪಾಣಿ ರೆಡ್ಡಿ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಅವರು, ‘ಸಂಕ್ರಾಂತಿಯ ನಂತರ ಟಿ. ರಾಜಾ ಸಿಂಗ್ ಅವರೊಂದಿಗೆ ಚರ್ಚಿಸಲು ಸಿದ್ಧ ಎಂದು ಹೇಳಿದ್ದಾರೆ. ಈ ಎಲ್ಲಾ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ. ಕೇವಲ ಜನರನ್ನು ಪ್ರಚೋದಿಸಲಾಗುತ್ತಿದೆ. ನಾನು ಕಟ್ಟರ ಹಿಂದೂ ಆಗಿದ್ದೇನೆ ಮತ್ತು ನನ್ನ ಸ್ವಂತ ಹಣದಿಂದ ದೇವಾಲಯವನ್ನು ನಿರ್ಮಿಸಿದ್ದೇನೆ.” ಎಂದು ಹೇಳಿದರು. (ಒಂದುಕಡೆ ‘ನಾನು ಕಟ್ಟರ ಹಿಂದೂ ಆಗಿದ್ದೇನೆ’, ಎಂದು ಹೇಳುವುದು ಮತ್ತು ಇನ್ನೊಂದು ಕಡೆ ‘ದೇವಸ್ಥಾನದ ನಿರ್ವಹಣೆಯಲ್ಲಿ ಮತಾಂಧರನ್ನು ಸೇರಿಸಿಕೊಳ್ಳುವುದು’, ಇದು ಹೇಗೆ ಸಾಧ್ಯ ? – ಸಂಪಾದಕ)
‘No antagonism towards Muslims in AP’: #YSRCP MLA counters Raja Singh’s allegations#AndhraPradesh#Srisailamhttps://t.co/Hjn5smEmnt
— The News Minute (@thenewsminute) December 27, 2020
೪. ಗೋಶಾಲೆಯ ಮೇಲ್ವಿಚಾರಕಿಯಾದ ರಝಾಕನ ಪತ್ನಿಯನ್ನು ಟಿ. ರಾಜಾ ಸಿಂಗ್ ಅವರ ಆರೋಪದ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ. (ಇದರಿಂದ, ’ರಝಾಕ ಅವರ ಹೆಂಡತಿಯ ಕೆಲಸ ಹಿಂದೂ ವಿರೋಧಿಯಾಗಿತ್ತು’ ಎಂದು ಹೇಳುವುದು ಸೂಕ್ತವಾಗಿದೆ ! – ಸಂಪಾದಕ)
BJP MLA Raja Singh Warning To Srisailam YCP MLA Don’t Give Temple Shops To Muslims and Suggests CM (Courtesy : HT News) |