ಕರ್ನಾಟಕದ ಐಫೋನ್ ಉತ್ಪಾದನೆಯ ಘಟಕ ಧ್ವಂಸ ಮಾಡಿದ ಹಿಂದೆ ಕಮ್ಯುನಿಸ್ಟರ ಕೈವಾಡ !

ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಸ್ಥಳೀಯ ಅಧ್ಯಕ್ಷನ ಬಂಧನ

ಭಾರತ ಮತ್ತು ಚೀನಾದ ಮೊಬೈಲ್ ಫೋನ್ ಉತ್ಪಾದಕರ ನಡುವೆ ಸ್ಪರ್ಧೆ ಇರುವುದರಿಂದ, ಕಮ್ಯುನಿಸ್ಟರು ಚೀನಾಕ್ಕೆ ಸಹಾಯ ಮಾಡಲು ಈ ವಿಧ್ವಂಸಕ ಕೃತ್ಯವನ್ನು ಮಾಡಿದ್ದಾರೆಯೇ ? ಇದರ ಬಗ್ಗೆಯೂ ತನಿಖೆಯಾಗಬೇಕು !

ಕಾಮ್ರೇಡ್ ಶ್ರೀಕಾಂತ

ಬೆಂಗಳೂರು – ವೇತನ ಕಡಿತವನ್ನು ವಿರೋಧಿಸಿ ‘ಆಪಲ್’ನ ಐಫೋನ್ ತಯಾರಕ ಸಂಸ್ಥೆ ‘ವಿಂಸ್ಟ್ರಾನ್ ಕಾರ್ಪೊರೇಶನ್’ನ ಕಾರ್ಖಾನೆಯನ್ನು ಡಿಸೆಂಬರ್ ೧೨ ರಂದು ಅದರ ನೌಕರರು ಧ್ವಂಸ ಮಾಡಿದ್ದಾರೆ. ಆದ್ದರಿಂದ ಸಂಸ್ಥೆಗೆ ೪೩೭ ಕೋಟಿ ೪೦ ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಸಂಸ್ಥೆಯು ಹೇಳಿದೆ.

ಈ ಪ್ರಕರಣದಲ್ಲಿ ಕಮ್ಯುನಿಸ್ಟ್ ವಿದ್ಯಾರ್ಥಿಗಳ ಸಂಘಟನೆಯಾದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ಸ್ಥಳೀಯ ಅಧ್ಯಕ್ಷ ಕಾಮ್ರೇಡ್ ಶ್ರೀಕಾಂತ ಎಂಬವನನ್ನು ಬಂಧಿಸಲಾಗಿದೆ. ಪೊಲೀಸರು, ಸಂಸ್ಥೆಯ ವಿರುದ್ಧ ಶ್ರೀಕಾಂತ ವಾಟ್ಸಾಪ್ ಸಂದೇಶವನ್ನು ಬರೆದು ಎಲ್ಲೆಡೆ ಪ್ರಸಾರ ಮಾಡಿದ ನಂತರ ಹಿಂಸಾಚಾರ ಭುಗಿಲೆದ್ದಿದೆ ಎಂದು ತಿಳಿಸಿದ್ದಾರೆ.