ಬಂಗಾಲದ ಓಂಕರನಾಥ ಮಠದ ಭೂಮಿ ಬಿಲ್ಡರ್‌ನಿಂದ ಅತಿಕ್ರಮಣ !

ಮಠಾಧೀಶರನ್ನು ಕೊಲ್ಲುವ ಬೆದರಿಕೆ

ಬಂಗಾಲದಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಈಗಾಗಲೇ ಹದಗೆಟ್ಟಿರುವಾಗ, ಮಠದ ಮೇಲೆ ಅತಿಕ್ರಮಣ ಆಗುವುದು ಮತ್ತು ಮಠಾಧೀಶರಿಗೆ ಬೆದರಿಕೆ ಒಡ್ಡುವುದು ಇವುಗಳ ಮೇಲೆ ನಿಯಂತ್ರಣ ಸಾಧಿಸುವ ಸಾಧ್ಯತೆ ಕಡಿಮೆ ಇದೆ. ಕೇಂದ್ರ ಸರಕಾರವು ಆದಷ್ಟು ಬೇಗ ಬಂಗಾಲದ ಸರಕಾರವನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಮೂಲಕ ಜನರನ್ನು ಮತ್ತು ಹಿಂದೂಗಳನ್ನು ರಕ್ಷಿಸಬೇಕು !

ಕೋಲಕಾತಾ – ರಾಜ್ಯದ ತಾರಕೇಶ್ವರದಲ್ಲಿರುವ ಓಂಕರನಥ ಮಠದ ಭೂಮಿಯನ್ನು ಅತಿಕ್ರಮಿಸಲಾಗಿದೆ. ಅತಿಕ್ರಮಣ ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಬಿಲ್ಡರ‍್ಸ್‌ಗಳು ನಡೆಸಿದ್ದಾರೆ. ಮಠಾಧೀಶರಾ ತ್ರಿವೇಣಿ ಸ್ವಾಮಿ ಕೇಶವ್ ರಾಮಾನುಜ ಜಿಯೂರ ಮಹಾರಾಜರು ವಿರೋಧಿಸಲು ಆರಂಭಿಸಿದಾಗ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ.

೧. ಮಠದ ಪಕ್ಕದ ಭೂಮಿಯನ್ನು ಬಿಲ್ಡರ್ ಒಬ್ಬರು ಖರೀದಿಸಿದ್ದಾರೆ. ಈ ಭೂಮಿಯ ಹತ್ತಿರದಿಂದ ಹೋಗಿಬರಲು ಯಾವುದೇ ಮಾರ್ಗವಿಲ್ಲದ ಕಾರಣ, ಬಿಲ್ಡರ್ ಮಠದ ಜೌಗು ಭೂಮಿಯಿಂದ ರಸ್ತೆ ನಿರ್ಮಿಸಲು ಪ್ರಾರಂಭಿಸಿದರು. ಇದನ್ನು ಮಠವು ವಿರೋಧಿಸಿತು.

೨. ಇದಕ್ಕೂ ಮೊದಲು, ೨೦೧೭ ರಲ್ಲಿ ಮಠದ ಪಕ್ಕದಲ್ಲಿ ನಿರ್ಮಿಸಲಾದ ಕಟ್ಟಡದ ನಿರ್ಮಾಣದ ಸಮಯದಲ್ಲಿ ಮಠದ ಗೋಡೆಯನ್ನು ಕೆಡವಲಾಯಿತು. ಆ ಸಮಯದಲ್ಲಿ ಅಪರಾಧ ದಾಖಲಿಸಲಾಗಿತ್ತು. ಇದರ ವಿಚಾರಣೆ ಇನ್ನೂ ನಡೆಯುತ್ತಿದೆ.

೩. ಈಗ ಸ್ವಾಮಿ ಕೇಶವ ರಾಮಾನುಜ ಜಿಯೂರ್ ಮಹಾರಾಜರಿಗೆ ಬೆದರಿಕೆ ಹಾಕಿದ ನಂತರ, ಗೂಂಡಾಗಳು ಅವರಿಗೆ ಮಾನಸಿಕವಾಗಿ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆಯ ಮಾಹಿತಿಯು ಬೆಳಕಿಗೆ ಬಂದ ನಂತರ ವಿಶ್ವ ಹಿಂದೂ ಪರಿಷತ್ ಇತರ ಸಂಸ್ಥೆಗಳ ಸಹಾಯದಿಂದ ಮಠಕ್ಕೆ ಸಹಾಯ ಮಾಡಲು ಪ್ರಾರಂಭಿಸಿದೆ.