ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

‘ವಿಜ್ಞಾನವು ಮಾನವನ ಸಮಯವನ್ನು ಉಳಿಸುವ ವಿವಿಧ ಯಂತ್ರಗಳನ್ನು ಕಂಡುಹಿಡಿದಿದೆ; ಆದರೆ ‘ಆ  ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಕಲಿಸಲಿಲ್ಲ. ಆದುದರಿಂದ, ಮಾನವನು ಪರಾಕಾಷ್ಠೆಯ ಅಧೋಗತಿಗೆ ತಲುಪಿದ್ದಾನೆ !

ವಿಜ್ಞಾನ ಮತ್ತು ಅಧ್ಯಾತ್ಮದ ನಡುವಿನ ವ್ಯತ್ಯಾಸ

‘ವಿಜ್ಞಾನವು ಪೃಥ್ವಿತತ್ತ್ವಕ್ಕೆ ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದೆ. ಅಧ್ಯಾತ್ಮವು ‘ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ’ ಈ ಪಂಚಮಹಾಭೂತಗಳು ಹಾಗೂ ನಿರ್ಗುಣ ತತ್ತ್ವಕ್ಕೆ ಸಂಬಂಧಿಸಿವೆ; ಅದಕ್ಕಾಗಿಯೇ ವಿಜ್ಞಾನವು ಪೃಥ್ವಿಯ ಹೊರಗಿನ ಇತರ ಪೃಥ್ವಿಗಳ ಅಧ್ಯಯನ ಮಾಡುತ್ತದೆ, ಆದರೆ ಅಧ್ಯಾತ್ಮವು ಪಂಚಮಹಾಭೂತಗಳ ಆಚೆಗಿನ ನಿರ್ಗುಣ ತತ್ತ್ವದ ಬಗ್ಗೆಯೂ ಅಧ್ಯಯನ ಮಾಡುತ್ತದೆ ಮತ್ತು ಅನುಭೂತಿ ಪಡೆಯಲು ಕಲಿಸುತ್ತದೆ.’

ಒಂದು ಸಣ್ಣ ‘ಸನಾತನ ಪ್ರಭಾತ’ವು ಸಾವಿರಾರು ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳನ್ನು ರೂಪಿಸಿತು. ಮತ್ತೊಂದೆಡೆ, ಲಕ್ಷಾಂತರ ವಾಚಕರನ್ನು ಹೊಂದಿರುವ ನಿಯತಕಾಲಿಕೆಗಳು ಮತ್ತು ದೂರಚಿತ್ರವಾಹಿನಿಗಳು ಬೆರಳೆಣಿಕೆಯಷ್ಟಾದರೂ ರಾಷ್ಟ್ರ ಮತ್ತು ಧರ್ಮ ಪ್ರೇಮಿಗಳನ್ನು ರೂಪಿಸಿವೆಯೇ ? ’

ಕಾಲದ ಸ್ತರದಲ್ಲಿ ಅಹಂಕಾರಿ ರಾಜಕಾರಣಿಗಳ ಮಿತಿಗಳು ಮತ್ತು ನಿರರ್ಥಕತೆ !

ಕುಟುಂಬದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿಯರ ಹೆಸರುಗಳು ೨-೩ ತಲೆಮಾರುಗಳ ಕಾಲ ನೆನಪಿರಬಹುದು. ಸಮಾಜದ ಸುತ್ತಮುತ್ತಲಿನ ಸಂತರ ಹೆಸರುಗಳನ್ನು ೨-೩ ತಲೆಮಾರುಗಳವರೆಗೆ ಸಮಾಜವು ನೆನಪಿನಲ್ಲಿಡುತ್ತದೆ. ಅಭಂಗ ಇತ್ಯಾದಿಗಳನ್ನು ಬರೆದ ಸಂತರ ಹೆಸರುಗಳನ್ನು ಕೆಲವು ಶತಮಾನಗಳ ಕಾಲ ಸಮಾಜವು ನೆನಪಿನಲ್ಲಿಡುತ್ತದೆ. ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಇತ್ಯಾದಿಗಳ ಬಗ್ಗೆ ಬರೆಯುವ ಋಷಿಗಳ ಹೆಸರುಗಳು ಸಾವಿರಾರು ವರ್ಷಗಳಿಂದ ಜನರ ಮನಸ್ಸಿನಲ್ಲಿ ಉಳಿಯುತ್ತವೆ. ತದ್ವಿರುದ್ಧ ಜೀವನದುದ್ದಕ್ಕೂ ಅಹಂಕಾರದಿಂದ ವರ್ತಿಸುವ ಈ ರಾಜಕಾರಣಿಗಳನ್ನು ಜನರು ಕೆಲವೇ ವರ್ಷಗಳಲ್ಲಿ ಮರೆತುಬಿಡುತ್ತಾರೆ ! ’

‘ಅಧ್ಯಾತ್ಮಶಾಸ್ತ್ರದಿಂದಾಗಿ ವಿಜ್ಞಾನವು ತಿಳಿಯುತ್ತದೆ; ಆದರೆ ವಿಜ್ಞಾನದಿಂದ ಅಧ್ಯಾತ್ಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ !’

– (ಪರಾತ್ಪರ ಗುರು) ಡಾ. ಆಠವಲೆ