ಬಿಲೀವರ್ಸ್ ಈಸ್ಟರ್ನ್ ಚರ್ಚ್ ಮತ್ತು ಕೆ.ಪಿ. ಯೋಹಾನನ್ ಅವರ ಆಸ್ತಿ ಮುಟ್ಟುಗೋಲು ಹಾಕಿ !

ಅಂತರರಾಷ್ಟ್ರೀಯ ಹಿಂದೂ ಪರಿಷತ್ತು ಮತ್ತು ರಾಷ್ಟ್ರೀಯ ಭಜರಂಗದಳದ ಬೇಡಿಕೆ

ನವ ದೆಹಲಿ – ರಾಷ್ಟ್ರೀಯ ಭಜರಂಗದಳದ ಕೇರಳದ ಪ್ರಧಾನ ಕಾರ್ಯದರ್ಶಿ ವಿಪಿನ್ ಲಾಲ್‌ಜಿ ಅವರ ನೇತೃತ್ವದಲ್ಲಿ ನವೆಂಬರ್ ೧೪ ರಂದು ಬಿಲೀವರ್ಸ್ ಈಸ್ಟರ್ನ್ ಚರ್ಚ್‌ನ ತಿರುವಲ್ಲಾ ಕೇಂದ್ರ ಕಚೇರಿ ಬಳಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ ಕೇರಳದ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಪಲೋಡ್ ಉಪಸ್ಥಿತರಿದ್ದರು. ಈ ಸಮಯದಲ್ಲಿ ಕೆ.ಪಿ. ಯೋಹಾನನ್ ಅವರನ್ನು ಬಂಧಿಸಿ ಮತ್ತು ಆ ಚರ್ಚ್‌ನ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಒತ್ತಾಯಿಸಿದರು. ‘ಯೋಹಾನನ್ ಇವರು ದೇಶವಿರೋಧಿ ಶಕ್ತಿಯ ಕೈಗೊಂಬೆಯಾಗಿದ್ದು ಅವರು ಆರ್ಥಿಕ ಹಗರಣ ಹಾಗೂ ಬಲವಂತವಾಗಿ ಮತಾಂತರ ಮಾಡುತ್ತಾರೆ’, ಎಂದು ಆರೋಪಿಸಲಾಗಿದೆ.

(ಸೌಜನ್ಯ : TIMES NOW)