ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಅಸುರಕ್ಷಿತ !
|
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮುಂಶಿಗಂಜ್ ಜಿಲ್ಲೆಯ ಸಿರಜ್ದಿಖಾನ್ ಉಪ ಜಿಲ್ಲೆಯಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನದಲ್ಲಿ ಶ್ರೀ ದುರ್ಗಾ ದೇವಿ, ಶ್ರೀ ಸರಸ್ವತಿ ಮತ್ತು ಶ್ರೀ ಕಾರ್ತಿಕೇಯರ ವಿಗ್ರಹಗಳನ್ನು ಮತಾಂಧರು ಧ್ವಂಸಗೊಳಿಸಿದರು. ದೇವಾಲಯದ ಮೇಲೆ ದಾಳಿ ಮಾಡಿದ ಮತಾಂಧರನ್ನು ಇನ್ನೂ ಗುರುತಿಸಲಾಗಿಲ್ಲ; ಆದರೆ, ತನಿಖೆ ನಡೆಯುತ್ತಿದೆ ಎಂದು ಸಿರಾಜ್ದಿಖಾನ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮೊಹಮ್ಮದ್ ರಿಜೌಲ್ ಹಕ್ ಇವರು ಹೇಳಿದ್ದಾರೆ.
ದೇವಾಲಯದ ಆವರಣ ತೆರೆದಿರುವುದರಿಂದ ಅಲ್ಲಿ ಬೇಲಿ ಹಾಕಲು ಸ್ಥಳೀಯ ಆಡಳಿತ ಮತ್ತು ಪೊಲೀಸರು ಸ್ವಲ್ಪ ಹಣವನ್ನು ದಾನದ ರೂಪದಲ್ಲಿ ನೀಡಿದ್ದಾರೆ.