ಕಾಂಗ್ರೆಸ್ಸಿನ ಜಾತ್ಯತೀತ ಸಿದ್ಧಾಂತವು ಸಂಪೂರ್ಣವಾಗಿ ರಾಜಕೀಯವಾಗಿತ್ತು, ಮತ್ತು ಅದರಲ್ಲಿ ಹಿಂದೂಗಳನ್ನು ಮೆಟ್ಟಿ ಮತಾಂಧರನ್ನು ಹಾಡಿಹೊಗಳುವ ಪ್ರಯತ್ನವಾಗಿತ್ತು. ತರೂರ್ ಇದರ ಬಗ್ಗೆ ಮಾತನಾಡುತ್ತಾರೆಯೇ ?
ನವ ದೆಹಲಿ – ನಮ್ಮಲ್ಲಿಯ ಹಿಂದುತ್ವದ ಸಿದ್ಧಾಂತವು ಧಾರ್ಮಿಕವಾಗಿರದೇ ರಾಜಕೀಯವೇ ಹೆಚ್ಚಾಗಿದೆ, ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿದ್ದಾರೆ. ಅವರ ಪುಸ್ತಕ ‘ದಿ ಬ್ಯಾಟಲ್ ಆಫ್ ಬಿಲೊಂಗಿಂಗ್’ ಇತ್ತೀಚೆಗೆ ಪ್ರಕಟವಾಗಿದ್ದು ಅದರ ಬಗ್ಗೆ ಅವರು ಮಾತನಾಡುತ್ತಿದ್ದರು.
೧. ತರೂರ್ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, “ಜಾತ್ಯತೀತತೆಯ ತತ್ವ ಮತ್ತು ಅದರ ಕಾರ್ಯಾಚರಣೆ ಈ ಎರಡೂ ಭಾರತದಲ್ಲಿ ಅಪಾಯದಲ್ಲಿದೆ. ದೇಶದ ಜಾತ್ಯತೀತ ಸ್ವರೂಪವನ್ನು ಬದಲಿಸುವಲ್ಲಿ ದ್ವೇಷಪೂರಿತ ಶಕ್ತಿಗಳು ಯಶಸ್ವಿಯಾಗುವುದಿಲ್ಲ.(ಭಾರತದಲ್ಲಿ ಎಂದಿಗೂ ಧರ್ಮನಿರಪೇಕ್ಷತೆಯಿರಲಿಲ್ಲ, ಏನು ಕಾಣಿಸುತ್ತಿದೆಯೋ ಅದು ಹಿಂದೂಗಳು ತೋರಿಸಿರುವ ಸಹಿಷ್ಣತೆಯಾಗಿದೆ. ಈಗ ಹಿಂದೂಗಳಿಗೆ ನೈಜಸ್ಥಿತಿ ಅರ್ಥವಾಗಿದ್ದು ಅವರು ಜಾಗೃತವಾಗುತ್ತಿದ್ದಾರೆ. ಇದನ್ನೇ ತರೂರ್ ಇವರು ವಿರೋಧಿಸುತ್ತಿದ್ದಾರೆ. – ಸಂಪಾದಕರು)
೨. ‘ಹಿಂದುತ್ವದ ಜನಪ್ರಿಯತೆಯನ್ನು ಗಮನಿಸಿದರೆ, ಕಾಂಗ್ರೆಸ್‌ಗೆ ಸೌಮ್ಯವಾದ ಹಿಂದುತ್ವದ ಆಧಾರವನ್ನು ತೆಗೆದುಕೊಳ್ಳುತ್ತಾರೆಯೇ ?’ ಎಂಬ ಪ್ರಶ್ನೆಗೆ ಉತ್ತರಿಸುತ್ತಿರುವಾಗತರೂರ್ ಇವರು, ನಾವು ಕಾಂಗ್ರೆಸ್ ಅನ್ನು ಸೌಮ್ಯ ಭಾಜಪದ ಸ್ವರೂಪ ನೀಡುವುದಿಲ್ಲ; ಕಾರಣ ಇದರಿಂದಾಗಿ ಕಾಂಗ್ರೆಸ್ ಶೂನ್ಯವಾಗಬಹುದು. (ಇವತ್ತು ಕಾಂಗ್ರೆಸ್ ಯಾವ ಘನ ಕಾರ್ಯ ಮಾಡುತ್ತಿದೆ? ಈಗಲೂ ವಿನಾಶದ ಅಂಚಿನಲ್ಲಿದೆ ! – ಸಂಪಾದಕ) ಕಾಂಗ್ರೆಸ್ ಎಂದರೆ ಬಿಜೆಪಿಯಲ್ಲ. ಆದ್ದರಿಂದ ಸೌಮ್ಯ ಹಿಂದುತ್ವವನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಹಿಂದುತ್ವನಿಷ್ಠ ಮತ್ತು ಹಿಂದುತ್ವ ನಡುವೆ ವ್ಯತ್ಯಾಸವಿದೆ ಎಂದು ಹೇಳಿದರು.

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!