ಜಮ್ಮು ಮತ್ತು ಕಾಶ್ಮೀರ ಆಡಳಿತದಿಂದ ರೋಶನಿ ಭೂಮಿ ಯೋಜನೆ ರದ್ದು

ಹಿಂದೂಗಳ ಭೂಮಿಯನ್ನು ಅತಿಕ್ರಮಿಸಲು ಮತಾಂಧರಿಂದ ಈ ಕಾನೂನಿನ ದುರುಪಯೋಗ !

ಆಡಳಿತದ ಶ್ಲಾಘನೀಯ ನಿರ್ಧಾರ ! ಈ ಯೋಜನೆಯ ದುರುಪಯೋಗ ಮಾಡಿ ಹಿಂದೂಗಳಿಗೆ ಕಿರುಕುಳ ನೀಡುತ್ತಿರುವವರಿಗೆ ಕಠಿಣ ಶಿಕ್ಷೆ ವಿಧಿಸುವುದು ಆವಶ್ಯಕ !

ಶ್ರೀನಗರ (ಜಮ್ಮು – ಕಾಶ್ಮೀರ) – ರೋಶನಿ ಭೂಮಿ ಯೋಜನೆಯಡಿಯಲ್ಲಿ ನಡೆದ ಹಗರಣದ ತನಿಖೆ ನಡೆಸುವಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ. ಈಗ ಈ ಯೋಜನೆಯಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಮಂಜೂರು ಮಾಡಿದ ಭೂಮಿಯ ನೋಂದಣಿಯನ್ನು ರದ್ದುಪಡಿಸಲಾಗುವುದು. ಅಲ್ಲದೆ ಮುಂದಿನ ೬ ತಿಂಗಳಲ್ಲಿ ಈ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಲಿದೆ. ಸರಕಾರಕ್ಕೆ ಕೇವಲ ಒಂದು ಅರ್ಜಿ ಸಲ್ಲಿಸಿದಾಗ ಆ ಜಮೀನು ಅವರ ಹೆಸರಿನಲ್ಲಿ ಮಾಡುವಂತಹ ಯೋಜನೆ ಇದಾಗಿತ್ತು. ಕಾಶ್ಮೀರದ ಮತಾಂಧರು ಬೃಹತ್ ಪ್ರಮಾಣದಲ್ಲಿ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿದ್ದರು. ಇದರೊಂದಿಗೆ ಜಮ್ಮುವಿನಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರನ್ನಾಗಿ ಮಾಡಲು ದೊಡ್ಡ ಪಿತೂರಿ ನಡೆಸಲಾಯಿತು. ಈಗ ಈ ನಿರ್ಧಾರವು ಆ ಪಿತೂರಿಯನ್ನು ವಿಫಲಗೊಳಿಸಿದೆ.