ಮುಂಬಯಿ : ‘ಲಕ್ಷ್ಮಿ ಬಾಂಬ್’ ಎಂಬ ಹೆಸರಿನಿಂದಾಗಿ ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದೆ. ನನ್ನನ್ನು ಕೇಳಿದರೆ, ಈ ಚಿತ್ರವನ್ನು ನಿಷೇಧಿಸುವುದು ಈ ಸಮಯದಲ್ಲಿ ಸೂಕ್ತವಲ್ಲ; ಏಕೆಂದರೆ ಅದರ ಟ್ರೇಲರ್ ಮಾತ್ರ ಪ್ರಸಾರವಾಗಿದೆ. ಚಲನಚಿತ್ರ ನೋಡುವುದು ಬಾಕಿ ಇದೆ; ಆದರೆ ಲಕ್ಷ್ಮಿ ಹೆಸರಿನ ನಂತರ ‘ಬಾಂಬ್’ ಪದವನ್ನು ಸೇರಿಸುವುದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ. ನೀವು ಎಂದಾದರೂ ಚಲನಚಿತ್ರಕ್ಕೆ ‘ಅಲ್ಲಾಹ್ ಬಾಂಬ್’ ಅಥವಾ ‘ಜೀಸಸ್ ಬಾಂಬ್’ ಎಂದು ಹೆಸರಿಡಬಹುದೇ ? ಇಲ್ಲವಲ್ಲ ? ಹಾಗಾದರೆ ನೀವು ‘ಲಕ್ಷ್ಮಿ ಬಾಂಬ್’ ಎಂದು ಹೇಗೆ ಹೆಸರಿಡುತ್ತೀರಿ ? ಎಂದು ಪ್ರಸಿದ್ಧ ‘ಮಹಾಭಾರತ’ ಸರಣಿಯಲ್ಲಿ ಭೀಷ್ಮಾ ಪಿತಾಮಹ ಪಾತ್ರವನ್ನು ನಿರ್ವಹಿಸಿದ ಹಾಗೂ ಜನಪ್ರಿಯ ’ಶಕ್ತಿಮಾನ್’ ಧಾರವಾಹಿಯ ಪಾತ್ರದಲ್ಲೂ ನಟಿಸಿದ ನಟ ಮುಖೇಶ್ ಖನ್ನಾ ಪ್ರಶ್ನಿಸಿದ್ದಾರೆ. ಜನರು ಸ್ವಲ್ಪ ಸಮಯ ಕೂಗಾಡುತ್ತಾರೆ ನಂತರ ಶಾಂತರಾಗುತ್ತಾರೆ ಇದು ಅವರಿಗೆ ಗೊತ್ತಿರುವುದರಿಂದ ಅವರು ಹೀಗೆ ಮಾಡಲು ಧೈರ್ಯ ಮಾಡುತ್ತಾರೆ ಎಂದು ಹೇಳಿದರು. ಈ ಅವಧಿಯಲ್ಲಿ ಚಲನಚಿತ್ರ ಪ್ರಸಿದ್ಧವಾಗಲಿದೆ. ಇದು ಮುಂದುವರಿಯುತ್ತದೆ; ಆದರೆ ಜನರು ಇದನ್ನು ತಡೆಯಬಹುದು.
ಮುಕೇಶ ಖನ್ನಾ ತಮ್ಮ ಮಾತನ್ನು ಮುಂದುವರೆಸುತ್ತಾ, ವ್ಯಾಪಾರಸ್ಥರಲ್ಲಿ ಹಿಂದೂಗಳ ಬಗ್ಗೆ ಭಯವಿಲ್ಲ. ಅವರು ಅವರನ್ನು ‘ಸಾಫ್ಟ ಟಾರ್ಗೇಟ’ ಎಂದು ತಿಳಿದುಕೊಳ್ಳುತ್ತಾರೆ. ಬೇರೆ ಯಾವುದೇ ಧರ್ಮವನ್ನು ಈ ರೀತಿ ಅವಮಾನಿಸಿದರೆ ಕತ್ತಿ ಎತ್ತಲಾಗುತ್ತದೆ ಎಂದು ಅವರಿಗೆ ತಿಳಿದಿದೆ. ಇದಕ್ಕಾಗಿ ಅವರ ಧರ್ಮಗಳ ಹೆಸರನ್ನು ಚಲನಚಿತ್ರದ ಶೀರ್ಷಿಕೆಯಲ್ಲಿ ನೀಡುವುದಿಲ್ಲ. ಚಲನಚಿತ್ರ ನಿರ್ಮಾಪಕರು ಪ್ರಚಾರಕ್ಕಾಗಿ ಈ ರೀತಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾರೆ. ಇದು ನನ್ನ ೪೦ ವರ್ಷಗಳ ಅನುಭವದಿಂದ ನಾನು ಹೇಳಬಲ್ಲೆ ಎಂದು ಹೇಳಿದರು.