ನವ ದೆಹಲಿಯಲ್ಲಿ ನವರಾತ್ರಿಯ ನಿಮಿತ್ತ ಕೆಲವು ಹೋಟೆಲ ಮಾಲೀಕರು ರೋಹಿಂಗ್ಯಾ ನುಸುಳುಕೋರರಿಗೆ ಆಹಾರ ವಿತರಿಸುತ್ತಿದ್ದಾರೆ !

ಈ ಹೋಟೆಲ ಮಾಲೀಕರಿಗೆ ಆಹಾರವನ್ನು ವಿತರಿಸಲು ಬಡ ಭಾರತೀಯ ಅಥವಾ ಪಾಕಿಸ್ತಾನದ ನಿರಾಶ್ರಿತರ ಹಿಂದೂಗಳು ಸಿಗಲಿಲ್ಲವೇ ? ಅದಕ್ಕಾಗಿಯೇ ಭಾರತವು ನುಸುಳುಕೋರರ ಆಶ್ರಯ ತಾಣವಾಗಿದೆ, ಎಂಬುದು ಗಮನಕ್ಕೆ ಬರುತ್ತದೆ !

ನವ ದೆಹಲಿ – ದೆಹಲಿಯಲ್ಲಿರುವ ‘ದ ಮಾರ್ಕೆಟ್ ಪ್ಲೆಸ್’, ‘ಜೊಶ-ದ-ಹೈ ಎನರ್ಜಿ’, ‘ಸ್ವಾಗತ ರೆಸ್ಟೊಬಾರ್’ ಇತ್ಯಾದಿ ಹೋಟೆಲಗಳ ಮಾಲಿಕರು ನವರಾತ್ರಿಯ ನಿಮಿತ್ತ ರಾತ್ರಿಯ ಸಮಯದಲ್ಲಿ ಜಸೊಲಾ ಕೊಳೆಗೇರಿಯಲ್ಲಿ ವಾಸಿಸುವ ನುಸುಳುಕೋರ ರೊಹಿಂಗ್ಯಾ ಮುಸಲ್ಮಾನರಿಗೆ ಉಚಿತವಾಗಿ ಆಹಾರವನ್ನು ವಿತರಿಸುತ್ತಿದ್ದಾರೆ.

೧. ಜೋಶ್-ದಿ-ಹೈ ಎನರ್ಜಿ ಹೋಟೆಲ್‌ನ ಮಾಲೀಕ ಶಿವಮ್ ಸೆಹಗಲ್ ಅವರು, ಆಹಾರಕ್ಕೆ ಯಾವುದೇ ಧರ್ಮ ಅಥವಾ ಸಂಸ್ಕೃತಿ ಇರುವುದಿಲ್ಲ, ನಾವು ಅದನ್ನು ಯಾರಿಗೆ ನೀಡುತ್ತಿದ್ದೇವೆ ಎಂಬುದು ಮುಖ್ಯವಲ್ಲ. ಹಬ್ಬಗಳ ಸಮಯದಲ್ಲಿ ನನಗೆ ಸಂತೋಷವಾಗಲು ಇದು ಒಂದು ಕಾರಣವಾಗಿದೆ. ಬಡವರಿಗೆ ಆಹಾರವನ್ನು ನೀಡುವುದರಿಂದ ಅವರ ಆಶೀರ್ವಾದ ಸಿಗುತ್ತದೆ ಎಂದು ಹೇಳಿದರು.

೨. ‘ಇದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ’ ಎಂದು ಸ್ವಾಗತ್ ರೆಸ್ಟೋ ಬಾರ್ ಸಂಸ್ಥಾಪಕ ವರುಣ ಅಹುಜಾ ಹೇಳಿದರು. ನಾನು ಕಳೆದ ಕೆಲವು ವರ್ಷಗಳಿಂದ ಆಹಾರ ನೀಡುತ್ತಿದ್ದೇನೆ ಎಂದು ಹೇಳಿದರು.

೩. ಮ್ಯಾನ್ಮಾರ್‌ಗಿಂತ ಭಾರತದಲ್ಲಿ ಹೆಚ್ಚಿನ ಸೌಲಭ್ಯಗಳು ಸಿಗುತ್ತಿವೆ ಹಾಗೂ ಕೊರೋನಾ ಕಾಲದಲ್ಲಿ ಜನರು ಆಹಾರ, ಎಣ್ಣೆ, ಸಾಬೂನು, ಶಾಂಪೂ ಇತ್ಯಾದಿಗಳನ್ನು ಒದಗಿಸಿದರು ಎಂದು ರೋಹಿಂಗ್ಯಾ ಮುಸಲ್ಮಾನ ಮೊಹಮ್ಮದ್ ಶಿರಾಜುಲ್ಲಾಹ ಹೇಳಿದರು.

೪. ‘ಇಲ್ಲಿಯವರೆಗೆ ನಮ್ಮಲ್ಲಿ ಯಾರೂ ಗುರುತಿನ ಚೀಟಿ ಅಥವಾ ಯಾವುದೇ ದಾಖಲೆಗಳನ್ನು ಕೇಳಿಲ್ಲ, ಭಾರತ ನಮಗೆ ಸಹಾಯ ಮಾಡುತ್ತಿದೆ. ನಾವು ಅದಕ್ಕೆ ಆಭಾರಿಯಾಗಿದ್ದೇವೆ’ ಎಂದು ಉಸ್ಮಾನ್ ಹೇಳಿದ್ದಾರೆ. (ದಾಖಲೆಗಳನ್ನು ಕೇಳದಿರುವುದು ಅಂದರೆ ನುಸುಳುಕೋರರಿಗೆ ಸಹಾಯ ಮಾಡುವುದಾಗಿದೆ ! ಅದಕ್ಕಾಗಿ ಅವರು ಭಾರತಕ್ಕೆ ಆಭಾರ ವ್ಯಕ್ತಪಡಿಸುತ್ತಾರೆ ! ಇದು ಭಾರತೀಯ ಆಡಳಿತ, ಪೊಲೀಸ್ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ನಾಚಿಕೆಗೇಡು ! – ಸಂಪಾದಕ)