‘ಕಾಶ್ಮೀರಿಗಳು ತಮ್ಮನ್ನು ಭಾರತೀಯರೆಂದು ಪರಿಗಣಿಸುವುದಿಲ್ಲ, ಅವರಿಗೆ ಚೀನಾದ ಆಡಳಿತ ಬೇಕು !’(ಅಂತೆ) – ಭಾರತದ್ವೇಷಿ ಫಾರುಖ್ ಅಬ್ದುಲ್ಲಾ ಇವರ ನುಡಿಮುತ್ತು

  • ರಾಷ್ಟ್ರವನ್ನು ಒಗ್ಗೂಡಿಸಲು ಸರ್ಕಾರವು ತಕ್ಷಣವೇ ಇಂತಹ ಪ್ರತ್ಯೇಕತಾವಾದಿ ಮತಾಂಧರನ್ನು ದೇಶದಿಂದ ಹೊರಗಟ್ಟಬೇಕು ! ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ ಹಾಗೂ ಇರಲಿದೆ ಎಂಬುದನ್ನು ಅವರು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಅದರ ವಿರುದ್ಧ ಕ್ರಮಕೈಗೊಳ್ಳಲು ಪ್ರಯತ್ನಿಸಿದರೆ ಅವರು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’, ಎಂದು ಭಾರತ ಸರಕಾರ ಅವರಿಗೆ ಹೇಳಬೇಕು !

  • ಹಿಂದೂಗಳು ‘ಹಿಂದೂ ರಾಷ್ಟ್ರ’ ಎಂದು ಉಚ್ಚರಿಸಿದಾಗ ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಕೂಗಾಡುವ ಕಾಂಗ್ರೆಸ್ಸಿಗರು, ಎಡಪಂಥೀಯರು, ಮತಾಂಧರು, ಪ್ರಗತಿ (ಅಧೋಗತಿ)ಪರರಿಗೆ ಅಬ್ದುಲ್ಲಾರವರು ಕಾಶ್ಮೀರವನ್ನು ಚೀನಾಕ್ಕೆ ಹಸ್ತಾಂತರಿಸುವ ಬಗ್ಗೆ ಮಾತನಾಡುತ್ತಿರುವಾಗ ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಅನಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಶ್ರೀನಗರ – ಕಾಶ್ಮೀರಿ ನಾಗರಿಕರು ತಮ್ಮನ್ನು ಭಾರತೀಯರೆಂದು ತಿಳಿಯುವುದಿಲ್ಲ ಮತ್ತು ಭಾರತೀಯರಾಗಲು ಬಯಸುವುದಿಲ್ಲ. ಬದಲಾಗಿ ಚೀನಾ ತಮ್ಮ ಮೇಲೆ ಆಳ್ವಿಕೆ ನಡೆಸಬೇಕೆಂದು ಅವರಿಗೆ ಅನಿಸುತ್ತದೆ, ಎಂದು ನ್ಯಾಶನಲ್ ಕಾನ್ಫರನ್ಸ್‌ನ ನಾಯಕ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ‘ದಿ ವಯರ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಫಾಕುಖ್ ಅಬ್ದುಲ್ಲಾ ತಮ್ಮ ಮಾತನ್ನು ಮುಂದುವರಿಸುತ್ತಾ, ಚೀನಾ ಮುಸ್ಲಿಮರಿಗೆ ಏನು ಮಾಡಿದೆ ಎಂದು ಕಾಶ್ಮೀರಿ ಜನರಿಗೆ ತಿಳಿದಿದೆ ಆದರೂ ಚೀನಾ ಭಾರತದಲ್ಲಿ ಬರಬೇಕು ಎಂದು ಅನಿಸುತ್ತಿದೆ. ನಾನು ಈ ಬಗ್ಗೆ ಹೆಚ್ಚು ಗಂಭೀರವಾಗಿಲ್ಲ; ಆದರೆ ನಾನು ಇದನ್ನು ಪ್ರಾಮಾಣಿಕವಾಗಿ ಹೇಳುತ್ತಿದ್ದು ಇದನ್ನು ಕೇಳಲು ಜನರಿಗೆ ಇಷ್ಟವಾಗುವುದಿಲ್ಲ ಎಂದು ಹೇಳಿದರು.