ನವ ದೆಹಲಿ – ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಡಾ. ಝಾಕೀರ್ ನಾಯಿಕ್‌ರವರ ‘ಪೀಸ್ ಟಿವಿ ಆಪ್’, ‘ಯೂಟ್ಯೂಬ್ ಚಾನೆಲ್’ ಮತ್ತು ‘ಫೇಸ್‌ಬುಕ್ ಪೇಜ್’ಗಳನ್ನು ನಿಷೇಧಿಸಲು ಕೇಂದ್ರ ಗೃಹ ಸಚಿವಾಲಯವು ಪ್ರಯತ್ನಿಸುತ್ತಿದೆ. ಇದಕ್ಕೂ ಮೊದಲು ಸರಕಾರ ಪೀಸ್ ಟಿವಿಯನ್ನು ನಿಷೇಧಿಸಿದ ನಂತರ, ಝಾಕೀರ್‌ನು ಆಪ್ ಮತ್ತು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿ ತಮ್ಮ ಪ್ರಚೋದನಕಾರಿ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದಾನೆ.