ಇದನ್ನು ಇದು ವರೆಗೆ ಅನೇಕ ಕಲಾವಿದರು ಬಹಿರಂಗಪಡಿಸಿದ್ದರೂ ಸರಕಾರ ಇದರ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಏಕೆ ಕ್ರಮಕೈಗೊಳ್ಳುತ್ತಿಲ್ಲ ?
ನವ ದೆಹಲಿ – ಬಾಲಿವುಡ್‌ನ ಸಮಾರಂಭಗಳಲ್ಲಿ ಮಾದಕ ವಸ್ತುಗಳನ್ನು ಸರಾಗವಾಗಿ ಸೇವಿಸುತ್ತಾರೆ, ಎಂದು ನಟ ಅಧ್ಯಯನ ಸುಮನ ಇವರು ಒಂದು ಸಂದರ್ಶನದಲ್ಲಿ ಹೇಳಿದರು. ಸುಮನ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, “ಚಿತ್ರರಂಗದಲ್ಲಿ ಮಾದಕವಸ್ತುಗಳ ಸೇವನೆ ಮಾಡಲಾಗುತ್ತದೆ, ಇದು ಸತ್ಯವೇ ಆಗಿದೆ. ಅನೇಕ ಗಣ್ಯವ್ಯಕ್ತಿಗಳ ಸಮಾರಂಭಗಳಲ್ಲಿ ದಿಗ್ಗಜ ಕಲಾವಿದರು ಮಾದಕ ವಸ್ತುಗಳನ್ನು ಸೇವಿಸುತ್ತಿರುವುದನ್ನು ನೋಡಿದ್ದೇನೆ. ನನ್ನ ಕಲಾಜೀವನದ ಆರಂಭದಲ್ಲಿ ನಾನೂ ಅನೇಕ ಸಮಾರಂಭಗಳಲ್ಲಿ ಭಾಗವಹಿಸಿದ್ದೇನೆ; ಆದರೆ ಕೆಲವು ವರ್ಷಗಳಿಂದ ನಾನು ಅಲ್ಲಿಗೆ ಹೋಗುತ್ತಿಲ್ಲ ಎಂದು ಹೇಳಿದರು. ಮಾದಕ ವಸ್ತುಗಳ ಸೇವನೆ ಕೇವಲ ಬಾಲಿವುಡ್‌ನಲ್ಲಿ ಮಾತ್ರ ಆಗುತ್ತದೆಯೇ ? ದೆಹಲಿಯಲ್ಲಿ ಆಗುವುದಿಲ್ಲವೇ ? ವಿವಾಹ ಕಾರ್ಯಕ್ರಮಗಳಲ್ಲಿ ಆಗುವುದಿಲ್ಲವೇ ? ದೊಡ್ಡ ಉದ್ಯಮಿಗಳ ಮನೆಗಳಲ್ಲಿ ಆಗುವುದಿಲ್ಲವೇ ? ವಿಶ್ವವಿದ್ಯಾಲಯಗಳಲ್ಲಿ ಆಗುವುದಿಲ್ಲವೇ ? ಹೀಗಿರುವಾಗ ‘ಮಾದಕವಸ್ತುಗಳ ಸೇವನೆ ಕೇವಲ ಬಾಲಿವುಡ್‌ನಲ್ಲಿಯೇ ಆಗುತ್ತದೆ’, ಎಂದು ಹೇಳಿ ಬಾಲಿವುಡ್‌ನ ತೇಜೋವಧೆ ಮಾಡುವುದು ತಪ್ಪಾಗಿದೆ”, ಎಂದರು.
(ಸೌಜನ್ಯ : ನವ ಭಾರತ ಟೈಮ್ಸ್)
ಬಾಲಿವುಡ್‌ನ ಸಮಾರಂಭಗಳಲ್ಲಿ ಮಾದಕ ವಸ್ತುಗಳ ಸೇವನೆಯಾಗುತ್ತಿರುವ ಬಗ್ಗೆ ಇಲ್ಲಿಯವರೆಗೆ ನಟಿ ಕಂಗನಾ ರನಾವತ್ ಹಾಗೂ ದಕ್ಷಿಣ ಭಾರತದ ನಟಿ ಮಾಧವಿ ಲತಾ ಇವರು ಬಹಿರಂಗಪಡಿಸಿದ್ದಾರೆ.