ಪತ್ರಕರ್ತೆ ಗೌರಿ ಲಂಕೇಶರಿಗೆ ನಕ್ಸಲರೊಂದಿಗಿರುವ ನಂಟಿನಿಂದ ಅವರ ಹತ್ಯೆಯಾಗಿದೆಯೇ ?’, ಈ ನಿಟ್ಟಿನಲ್ಲಿಯೂ ತನಿಖೆ ಮಾಡುವಂತೆ ಟ್ವಿಟರ್‌ನಲ್ಲಿ ಆಗ್ರಹ

‘#TrueFaceOfGauriLankesh’ ಈ ‘ಹ್ಯಾಶ್‌ಟ್ಯಾಗ್’ ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ಮೂರನೇ ಸ್ಥಾನ

ಮುಂಬಯಿ – ಅಜ್ಞಾತರು ೫ ಸಪ್ಟೆಂಬರ್ ೨೦೧೭ ರಂದು ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ಮಾಡಿದ್ದರು. ನಂತರ ಕೂಡಲೇ ಕಮ್ಯುನಿಸ್ಟ್ ಹಾಗೂ ಪ್ರಸಾರ ಮಾಧ್ಯಮಗಳು ಸಂದೇಹದ ದಿಕ್ಕನ್ನು ಹಿಂದುತ್ವನಿಷ್ಠೆಯ ಕಡೆ ಹೊರಳಿಸಿದರು. ಇಲ್ಲಿಯವರೆಗೆ ಈ ಹತ್ಯೆಯ ಆರೋಪದಡಿ ಅನೇಕ ಅಮಾಯಕ ಹಿಂದೂಗಳನ್ನು ಬಂಧಿಸಲಾಗಿದೆ; ಆದರೆ ಪೊಲೀಸರಿಗೆ ಯಾವುದೇ ರೀತಿಯ ನಿಧಿಷ್ಠ ಸಾಕ್ಷಿಗಳು ಸಿಗಲಿಲ್ಲ ಹಾಗೂ ಅಪರಾಧವೂ ಸಿದ್ಧವಾಗಲಿಲ್ಲ. ಗೌರಿ ಲಂಕೇಶ ಇವರ ಸಹೋದರನು ಸಹ, ‘ಈ ಹತ್ಯೆಯ ಹಿಂದೆ ನಕ್ಸಲರ ಕೈವಾಡ ಇರಬಹುದು. ನಕ್ಸಲರೊಂದಿಗೆ ಗೌರಿ ಲಂಕೇಶರ ಸಂಬಂಧವಿತ್ತು’, ಎಂದು ಆರೋಪಿಸಿದ್ದರು; ಆದರೆ ತನಿಖಾ ತಂಡವು ಈ ದಿಕ್ಕಿನಿಂದ ಎಂದೂ ತನಿಖೆ ಮಾಡಲಿಲ್ಲ. ಆದ್ದರಿಂದ ಇಂದಿಗೂ ನಿಜವಾದ ಹಂತಕರು ಮುಕ್ತವಾಗಿದ್ದಾರೆ. ಸಪ್ಟೆಂಬರ ೫ ರಂದು ಗೌರಿ ಲಂಕೇಶ ಇವರ ಹತ್ಯೆಯಾಗಿ ೩ ವರ್ಷಗಳು ಪೂರ್ಣವಾಯಿತು. ಅವರ ನೈಜ್ಯ ರೂಪವನ್ನು ಬಹಿರಂಗ ಪಡಿಸುವ, ಅದೇರೀತಿ ನಿಜವಾದ ಹಂತಕರನ್ನು ಹಿಡಿಯಲು ಆಗ್ರಹಿಸುವ ಟ್ವಿಟರ್ ‘#TrueFaceOfGauriLankesh’ ಈ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿರುವುದು ಕಂಡುಬಂದಿತು. ಇದರಲ್ಲಿ ಧರ್ಮಪ್ರೇಮಿಗಳು ಟ್ವೀಟ್ಸ್ ಮಾಡಿದರು. ಇದರಲ್ಲಿ ನಕ್ಸಲರೊಂದಿಗೆ ಗೌರಿ ಲಂಕೇಶರ ಯಾವರೀತಿ ನಂಟಿತ್ತು ಎಂಬುದನ್ನು ಜನರು ತೋರಿಸುತ್ತಾ ಹತ್ಯೆಯ ತನಿಖೆಯನ್ನು ಆ ದಿಕ್ಕಿನಿಂದ ಮಾಡುವಂತೆ ಆಗ್ರಹಿಸಿದರು. ಈ ಟ್ರೆಂಡ್ ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೂರನೇಯ ಸ್ಥಾನದಲ್ಲಿತ್ತು. ಈ ಟ್ರೆಂಡ್‌ನಲ್ಲಿ ೨೦ ಸಾವಿರಕ್ಕೂ ಹೆಚ್ಚು ಜನರು ಟ್ವೀಟ್ ಮಾಡಿದ್ದಾರೆ.