‘ಗುಂಜನ ಸಕ್ಸೆನಾ – ದಿ ಕಾರಗಿಲ್ ಗರ್ಲ್’ ಚಲನಚಿತ್ರವನ್ನು ತಕ್ಷಣ ನಿಷೇಧಿಸಿ ! – ರಾಷ್ಟ್ರೀಯ ಮಹಿಳಾ ಆಯೋಗ

ಭಾರತೀಯ ವಾಯುಸೇನೆಯ ಬಗ್ಗೆ ಅಯೋಗ್ಯ ಚಿತ್ರಣ ಮೂಡಿಸುವ ವಿವಾದಿತ ಚಲನಚಿತ್ರವನ್ನು ಸರಕಾರವು ಏಕೆ ನಿಷೇಧಿಸುತ್ತಿಲ್ಲ ?

ನವ ದೆಹಲಿ – ಭಾರತೀಯ ವಾಯುಸೇನೆಯ ಬಗ್ಗೆ ಅಯೋಗ್ಯ ಚಿತ್ರಣವನ್ನು ಮೂಡಿಸುವ ವಿವಾದಿತ ‘ಗುಂಜನ ಸಕ್ಸೆನಾ – ದಿ ಕಾರಗಿಲ್ ಗರ್ಲ್’ ಈ ಹಿಂದಿ ಭಾಷೆಯ ಚಲನಚಿತ್ರದ ಬಗ್ಗೆ ಈಗ ರಾಷ್ಟ್ರೀಯ ಮಹಿಳಾ ಆಯೋಗವೂ ಆಕ್ಷೇಪವೆತ್ತಿದೆ. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಚಲನಚಿತ್ರವನ್ನು ‘ನೆಟ್‌ಫ್ಲಿಕ್ಸ್’ನಲ್ಲಿ ಇತ್ತೀಚೆಗಷ್ಟೆ ಪ್ರದರ್ಶಿಸಲಾಗಿದೆ. ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಇವರು ಟ್ವಿಟ್ ಮಾಡಿ, ‘ಭಾರತೀಯ ಸೈನ್ಯದ ಬಗ್ಗೆ ಅಯೋಗ್ಯ ಚಿತ್ರಣವನ್ನು ಮೂಡಿಸುವ ಚಲನಚಿತ್ರವನ್ನು ನಾವು ಏನೆಂದು ನೋಡಬೇಕು ? ಚಲನಚಿತ್ರದ ನಿರ್ಮಾಪಕರು ಕ್ಷಮೆ ಕೇಳಬೇಕು, ಹಾಗೆಯೇ ಈ ಚಲನಚಿತ್ರ ಪ್ರದರ್ಶನವನ್ನು ತಕ್ಷಣ ನಿಷೇಧಿಸಬೇಕು. ಈ ಚಲನಚಿತ್ರದಿಂದಾಗಿ ಮಹಿಳಾ ಆಯೋಗವು ತೀವ್ರವಾಗಿ ಅಸಮಾಧಾನಗೊಂಡಿದೆ’, ಎಂದು ಹೇಳಿದ್ದಾರೆ.

ವಾಯುಸೇನೆಯ ಆಕ್ಷೇಪಣೆಯನ್ನು ದುರ್ಲಕ್ಷಿಸಿ ‘ಧರ್ಮಾ ಪ್ರೋಡಕ್ಶನ್’ವತಿಯಿಂದ ಚಲನಚಿತ್ರದ ನಿರ್ಮಿತಿ !

ಸೈನ್ಯಕ್ಕೂ ಬಗ್ಗದ ‘ಧರ್ಮಾ ಪ್ರೋಡಕ್ಶನ್’ ಮೇಲೆಯೇ ಸರಕಾರವು ನಿಷೇಧಿಸಬೇಕು !

ಈ ಚಲನಚಿತ್ರವು ಪ್ರದರ್ಶನಗೊಂಡ ನಂತರ ಭಾರತೀಯ ವಾಯುಸೇನೆಯೂ ಕೇಂದ್ರೀಯ ಚಲನಚಿತ್ರದ ಪರಿವೀಕ್ಷಣೆ ಮಂಡಳಿಗೆ ಪತ್ರ ಬರೆದು ಪ್ರಸಕ್ತ ಚಲನಚಿತ್ರದಲ್ಲಿ ಭಾರತೀಯ ವಾಯುಸೇನೆಯ ಬಗ್ಗೆ ಅಯೋಗ್ಯ ಚಿತ್ರಣವನ್ನು ಬಿಂಬಿಸಲಾಗಿದೆ ಎಂದು ಹೇಳಿತ್ತು. ‘ವಾಯುಸೇನೆಯಲ್ಲಿ ಯಾವಾಗಲೂ ಲಿಂಗತಾರತಮ್ಯ ಮಾಡುವುದಿಲ್ಲ. ಆದ್ದರಿಂದ ಈ ಚಲನಚಿತ್ರದಲ್ಲಿ ತೋರಿಸಲಾದ ದೃಶ್ಯಗಳು ಅಯೋಗ್ಯವಾಗಿವೆ. ನಾವು ಈ ಚಲನಚಿತ್ರವು ಪ್ರದರ್ಶನವಾಗುವ ಮೊದಲು ‘ಧರ್ಮಾ ಪ್ರೊಡಕ್ಶನ್’ ಇವರಲ್ಲಿ ನಮ್ಮ ಆಕ್ಷೇಪಣೆಯನ್ನು ನೋಂದಾಯಿಸಿದ್ದೆವು. ಆದರೂ ಆ ಬಗ್ಗೆ ದುರ್ಲಕ್ಷ ಮಾಡಲಾಯಿತು’, ಎಂದು ವಾಯುಸೇನೆಯು ಹೇಳಿದೆ.