ಜಗತ್ತಿನಾದ್ಯಂತ ತಂಬಾಕು ಸೇವನೆಯಿಂದಾಗಿಗುವ ರೋಗಿಗಳ ಪೈಕಿ ಶೇ. ೭೦ ರಷ್ಟು ರೋಗಿಗಳು ಭಾರತದಲ್ಲಿದ್ದಾರೆ

ಈ ಚಿತ್ರಣ ಸ್ವಾತಂತ್ರ್ಯದ ನಂತರದಿಂದ ಇಲ್ಲಿಯವರೆಗಿನ ಎಲ್ಲ ಸರಕಾರಗಳಿಗೆ ನಾಚಿಕೆಯ ವಿಷಯವಾಗಿದೆ ! ಸರಕಾರ ಈಗಲಾದರೂ ತಂಬಾಕು, ಸಿಗರೇಟ್, ಸರಾಯಿ ಇತ್ಯಾದಿಗಳನ್ನು ಸಂಪೂರ್ಣ ನಿಷೇಧಿಸುವುದೇ ?

ತಂಬಾಕಿನ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧೀಸುವಂತೆ ಬ್ರಿಟನ್‌ನ ವಿಶ್ವವಿದ್ಯಾಲಯದ ಸೂಚನೆ

ಲಂಡನ – ಜಗತ್ತಿನಾದ್ಯಂತ ತಂಬಾಕುವಿನ ಸೇವನೆಯಿಂದ ಆಗುವ ಅನಾರೋಗ್ಯದ ಶೇ. ೭೦ ರಷ್ಟು ರೋಗಿಗಳು ಭಾರತದಲ್ಲಿದ್ದಾರೆ ಎಂದು ಬ್ರಿಟನನಲ್ಲಿ ‘ಯಾರ್ಕ್ ವಿದ್ಯಾಪೀಠ’ವು ಮಾಡಿದ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ. ‘ಬಿಎಮ್‌ಸಿ ಮೆಡಿಸಿನ್’ ಈ ನಿಯತಕಾಲಿಕೆಯಲ್ಲಿ ಈ ಶೋಧನೆಯು ಪ್ರಕಟಿಸಿದೆ. ತಂಬಾಕುವಿನ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರುವ ಬಗ್ಗೆ ಸೂಚನೆಯನ್ನು ಈ ಶೋಧನೆಯಲ್ಲಿ ಮಾಡಲಾಗಿದ್ದು ‘ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಿದರೇ ತಂಬಾಕು ಸೇವಿಸುವ ಪ್ರಮಾಣ ಕಡಿಮೆ ಆಗುವುದು ಹಾಗೂ ಕೊರೋನಾದ ಸೋಂಕು ಹರಡುವುದನ್ನು ತಡೆಗಟ್ಟಬಹುದು’, ಎಂಬುದು ತಿಳಿದುಬಂದಿದೆ.

ಈ ಸಂಶೋಧನೆಯಲ್ಲಿ, ‘ತಂಬಾಕುವಿನ ಸೇವನೆಯಿಂದ ಜಗತ್ತಿನಾದ್ಯಂತ ಮೃತರ ಸಂಖ್ಯೆ ಕಳೆದ ೭ ವರ್ಷಗಳಲ್ಲಿ ೩ ಪಟ್ಟು ಏರಿಕೆಯಾಗಿದ್ದು ತಂಬಾಕುವಿನ ಸೇವನೆಯಿಂದ ೩ ಲಕ್ಷದ ೫೦ ಸಾವಿರ ಜನರು ಮೃತಪಟ್ಟಿರುವ ಬಗ್ಗೆ ನೋಂದಾಯಿಸಲಾಗಿದೆ.’ ಈ ಶೋಧನೆಯಲ್ಲಿ, ಸಿಗರೇಟ್, ಹುಕ್ಕಾ ಇತ್ಯಾದಿಗಳ ಮೂಲಕ ಮಾಡಲಾಗುವ ತಂಬಾಕುವಿನ ಸೇವನೆಯು ಸೇರ್ಪಡೆಗೊಂಡಿಲ್ಲ ಎಂದು ಹೇಳಿದೆ.

ಪಾಕಿಸ್ತಾನದಲ್ಲಿ ಶೇ.೭ ಮತ್ತು, ಬಾಂಗ್ಲಾದೇಶದಲ್ಲಿ ಶೇ.೫ ರಷ್ಟು ಪ್ರಮಾಣ !

‘ಯಾರ್ಕ್ ವಿದ್ಯಾಪೀಠ’ದ ಕಾಮರಾನ ಸಿದ್ದಕಿಯವರು, ‘ತಂಬಾಕಿವಿನಿಂದ ಆಗುವ ಅನಾರೋಗ್ಯವಾಗುವವರಲ್ಲಿ ದಕ್ಷಿಣ ಪೂರ್ವ ಏಷ್ಯಾದ ಅತೀಹೆಚ್ಚು ಪ್ರಮಾಣ ಭಾರತದಲ್ಲಿದೆ. ಪಾಕಿಸ್ತಾನದಲ್ಲಿ ಶೇ. ೭ ರಷ್ಟು ಹಾಗೂ ಬಾಂಗ್ಲಾದೇಶದಲ್ಲಿ ಶೇ. ೫ ರಷ್ಟು ಪ್ರಮಾಣ ಇದೆ. ಕೊರೋನಾದಿಂದಾಗಿ ಜಗತ್ತು ಅಸ್ತವ್ಯಸ್ತಗೊಂಡಿದೆ. ತಂಬಾಕು ಸೇವಿಸುವುದರಿಂದ ಹೆಚ್ಚು ಲಾಲಾರಸವು ತಯಾರಾಗುತ್ತದೆ ಹಾಗೂ ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ಉಗುಳಬೇಕಾಗುತ್ತದೆ. ಈ ಉಗುಳಿನಿಂದ ಕೊರೋನಾ ಹರಡುವ ಸಾಧ್ಯತೆ ದಟ್ಟವಾಗಿದೆ’, ಎಂದು ಹೇಳಿದ್ದಾರೆ.