ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾವನ್ನು ನಿಷೇಧಿಸಲು ಪ್ರಯತ್ನಿಸುವೆವು! – ಉಪಮುಖ್ಯಮಂತ್ರಿ ಅಶ್ವತ ನಾರಾಯಣ

  • ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇವು ಅನೇಕ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿವೆ ಹಾಗೂ ಅವು ಈಗಲೂ ಮಾಡುತ್ತಿವೆ. ಹೀಗಿರುವಾಗ ಇಷ್ಟರಲ್ಲಿ ಅವುಗಳನ್ನು ನಿಷೇಧಿಸಬೇಕಿತ್ತು, ಎಂದು ಜನರಿಗೆ ಅನಿಸುತ್ತದೆ!

  • ತಥಾಕಥಿತ ಕೇಸರಿ ಭಯೋತ್ಪಾದನೆಯ ಹೆಸರಿನಲ್ಲಿ ಹಿಂದೂ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸುವ ಜಾತ್ಯತೀತವಾದಿ, ಪ್ರಗತಿ(ಅಧೋಗತಿ)ಪರರು, ಅದೇ ರೀತಿ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ, ತೃಣಮೂಲ ಕಾಂಗ್ರೆಸ್, ಸಾಮ್ಯವಾದಿ ಈ ರಾಜಕೀಯ ಪಕ್ಷಗಳು ಇಂತಹ ಸಂಘಟನೆಗಳ ಮೇಲೆ ನಿರ್ಬಂಧ ಹೇರುವ ಬಗ್ಗೆ ಎಂದೂ ಆಗ್ರಹಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ!

ಬೆಂಗಳೂರು – ಇಲ್ಲಿಯ ಗಲಭೆಯ ಪ್ರಕರಣದಲ್ಲಿ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ೪ ಮುಖಂಡರನ್ನು ಬಂಧಿಸಲಾಗಿದೆ. ಈ ಸಂಘಟನೆಯು ಇತರ ಅಪರಾಧಿ ಕೃತ್ಯಗಳಲ್ಲಿಯೂ ತೊಡಗಿರುವ ಸಾಕ್ಷಿಗಳು ಪತ್ತೆಯಾಗಿವೆ. ಇಂತಹ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಸರಕಾರದಿಂದ ಕಠಿಣ ನಿರ್ಣಯವನ್ನು ಕೈಗೊಳ್ಳಲಾಗುವುದು. ಅದಕ್ಕೆ ಬೇಕಾಗುವ ಸಾಕ್ಷಿಗಳು ಒಟ್ಟು ಮಾಡಿ ನಿರ್ಬಂಧ ಹೇರಲಾಗುವುದು, ಎಂದು ಉಪಮುಖ್ಯಮಂತ್ರಿ ಅಶ್ವತ ನಾರಾಯಣ ಇವರು ಹೇಳಿದ್ದಾರೆ. ಈ ಗಲಭೆಯ ಪ್ರಕರಣದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್‌ನ ನಗರಸೇವಕಿ ಇರ್ಶಾದ್ ಬೇಗಮ್‌ನ ಪತಿ ಖಲಿಂ ಪಾಶಾನನ್ನು ಬಂಧಿಸಲಾಗಿದೆ. ಈ ಗಲಭೆಯ ಪ್ರಕರಣದಲ್ಲಿ ಇಲ್ಲಿಯವರೆಗೆ ೬೦ ಜನರನ್ನು ಬಂಧಿಸಿದರೆ, ೨೦೬ ಜನರನ್ನು ವಶಕ್ಕೆ ಪಡೆದುಕೊಂದಿದ್ದಾರೆ. ಈ ಗಲಭೆಯ ತನಿಖೆಗಾಗಿ ೪ ತಂಡಗಳನ್ನು ನಿರ್ಮಿಸಲಾಗಿದೆ.

ಪೊಲೀಸರನ್ನು ಹತ್ಯೆ ಮಾಡುವ ಉದ್ದೇಶವನ್ನಿಟ್ಟುಕೊಂಡಿದ್ದ ಮತಾಂಧರು

ಪೊಲೀಸರು ಈ ಗಲಭೆಯ ಪ್ರಕರಣದಲ್ಲಿ ೪ ಅಪರಾಧಗಳನ್ನು ದಾಖಲಿಸಿದ್ದಾರೆ. ಅದರಲ್ಲಿ. ‘೫ ಜನರ ತಂಡವು ೨೦೦ ರಿಂದ ೩೦೦ ಜನರಿಗೆ ಶಸ್ತ್ರಾಸ್ತ್ರಗಳನ್ನು ಒಟ್ಟು ಮಾಡುವ ನೇತೃತ್ವ ವಹಿಸಿತ್ತು. ಪೊಲೀಸರ ಹತ್ಯೆ ಮಾಡುವುದು ಅವರ ಉದ್ದೇಶವಾಗಿತ್ತು. ‘ಪೊಲೀಸರನ್ನು ಬಿಡಬೇಡಿರಿ, ಅವರನ್ನು ಹಿಡಿಯಿರಿ ಅವರ ಹತ್ಯೆ ಮಾಡಿರಿ’, ಎಂದು ಗಲಭೆಖೋರರು ಹೇಳುತ್ತಿದ್ದರು. ಪೊಲೀಸರ ಮೇಲೆ ದಾಳಿ ಮಾಡಲು ಅವರು ಗೊರಿಲ್ಲ ಪದ್ಧತಿಯ ಉಪಯೋಗವನ್ನು ಮಾಡಿದ್ದರು.’ (ಯಾವಾಗಲೂ ಮತಾಂಧರ ಪರವಾಗಿದ್ದು ಹಿಂದೂಗಳ ಮೇಲೆ ದೌರ್ಜನ್ಯ ನಡೆಸುವ ಪೊಲೀಸರು ಇನ್ನಾದರೂ ಎಚ್ಚೆತ್ತುಕೊಳ್ಳಬಹುದೇ ? – ಸಂಪಾದರು)