ಗೋರಕ್ಷಕರಿಂದಾಗಿ ಮುಸಲ್ಮಾನರಿಗೆ ಬದುಕುವುದು ಕಷ್ಟವಾಗಿದೆ(ಅಂತೆ) ! – ಅಸದುದ್ದೀನ್ ಓವೈಸಿಯ ಅಸಂಬದ್ಧ ಮಾತು

ಮತಾಂಧ ಕಸಾಯಿಯವರಿಂದ ಅಮಾಯಕ ಗೋವುಗಳ ಹತ್ಯೆ ಮಾಡುವುದರಿಂದ ಅವುಗಳ ಜೀವನ ಕಷ್ಟವಾಗಿದೆ, ಇದರ ಬಗ್ಗೆ ಓವೈಸಿ ಏಕೆ ಮಾತನಾಡುತ್ತಿಲ್ಲ ?

  • ಅಕ್ರಮವಾಗಿ ಗೋ ಸಾಗಾಟ ಮಾಡುವವರನ್ನು ಹಿಡಿಯುವ ಪೊಲೀಸರ ಮೇಲೆ ಗುಂಡು ಹಾರಿಸುತ್ತಾರೆ, ಅದೇರೀತಿ ಗೋರಕ್ಷಕರನ್ನು ಅಮಾನವೀಯವಾಗಿ ಹತ್ಯೆ ಮಾಡುತ್ತಾರೆ. ಇದರ ಬಗ್ಗೆ ಓವೈಸಿ ಏಕೆ ಮಾತನಾಡುವುದಿಲ್ಲ ? ಇದು ಅವರಿಗೆ ಒಪ್ಪಿಗೆ ಇದೆಯೇ ?
  • ಅನೇಕ ರಾಜ್ಯಗಳಲ್ಲಿ ಗೋಹತ್ಯಾ ನಿರ್ಬಂಧ ಇರುವಾಗಲೂ ಗೋಹತ್ಯೆ ಆಗುವುದನ್ನು ತಡೆಗಟ್ಟಲು ಓವೈಸಿ ಏಕೆ ಮಾತನಾಡುವುದಿಲ್ಲ ಅಥವಾ ಕೃತಿ ಮಾಡುವುದಿಲ್ಲ ? ಅಥವಾ ‘ಮತಾಂಧ ಕಸಾಯಿಗಳು ಕಾನುನು ದ್ರೋಹ ಮಾಡುವುದು ಯೋಗ್ಯವಾಗಿದೆ’, ಎಂದು ಹೇಳುವುದಿದೆಯೇ ?
  • ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕರಿಂದ ಹಾಗೂ ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳಿಗೆ ಬದುಕುವುದು ಕಷ್ಟವಾಗಿದೆ, ಇದು ಓವೈಸಿಗೆ ಏಕೆ ಕಾಣುವುದಿಲ್ಲ ?

ಭಾಗ್ಯನಗರ (ತೆಲಂಗಾಣಾ) – ಗೋರಕ್ಷಕರಿಂದ ಮುಸಲ್ಮಾನರಿಗೆ ಬದುಕುವುದು ಕಷ್ಟವಾಗಿದೆ. ಅವರಿಗೆ ಜೀವಿಸಲು ಭಯವಾಗುತ್ತಿದೆ. ಈ ಗುಂಪಿನ ಮೇಲೆ ಶೀಘ್ರವಾಗಿ ಕ್ರಮ ಕೈಗೊಂಡು ಅವರಿಗೆ ಶಿಕ್ಷೆಯನ್ನು ನೀಡಬೇಕು; ಆದರೆ ಕೇಂದ್ರ ಸರಕಾರದ ಕೆಲವು ಮಂತ್ರಿಗಳು ಗೋರಕ್ಷಕರ ಕೊರಳಲ್ಲಿ ಹಾರ ಹಾಕುತ್ತಿದ್ದಾರೆ ಹಾಗೂ ಕೆಲವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಹಸ್ತಕ್ಷೇಪ ಮಾಡಿ ಅವರನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದರಿಂದ ಅವರ ಧೈರ್ಯ ಹೆಚ್ಚಾಗಿದೆ, ಎಂದು ಎಮ್.ಐ.ಎಮ್.ನ ಅಧ್ಯಕ್ಷ ಸಂಸದ ಅಸದುದ್ದೀನ್ ಓವೈಸಿ ಇವರು ಟ್ವೀಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಹರಿಯಾಣಾದ ಗುರುಗ್ರಾಮದಲ್ಲಿ ಗೋರಕ್ಷಕರು ಅಕ್ರಮವಾಗಿ ಮಾಂಸವನ್ನು ತೆಗೆದುಕೊಂಡು ಹೋಗುವ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದರು ಹಾಗೂ ಈ ಬಗ್ಗೆ ವಿಡಿಯೋ ಪ್ರಸಾರವಾಗಿತ್ತು. ತದನಂತರ ಪೊಲೀಸರು ಕ್ರಮ ಕೈಗೊಂಡಿದ್ದರು. ಇದರ ಬಗ್ಗೆ ಓವೈಸಿಯವರು ಟ್ವೀಟ್ ಮಾಡಿದ್ದಾರೆ.