ಭಾರತೀಯ ಸೈನಿಕರು ಯುದ್ಧ ಸಿದ್ಧತೆಯಲ್ಲಿರುವುದು ಎಷ್ಟು ಅಗತ್ಯವಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ!
ಬೀಜಿಂಗ್(ಚೀನಾ) – ಚೀನಾವು ‘ಡಿಎಫ್-೨೬’ ಹಾಗೂ ‘ಡಿಎಫ್-೧೬’ ಈ ಅಣ್ವಸ್ತ್ರವಾಹಕ ಕ್ಷಿಪಣಿಗಳ ಪರೀಕ್ಷಣೆಯನ್ನು ಮಾಡಿದೆ. ಈ ಕ್ಷಿಪಣಿಗಳು ದೆಹಲಿಯ ತನಕ ಹೊಡೆಯಬಹುದು. ‘ಡಿಎಫ್-೨೬’ ಈ ಕ್ಷಿಪಣಿಯು ೪ ಸಾವಿರ ಕಿ.ಮೀ. ತನಕ ಹೊಡೆಯಬಹುದು. ಅದರಲ್ಲಿ ಭಾರತದೊಂದಿಗೆ ಪೆಸಿಫಿಕ್ ಮಹಾಸಾಗರದಲ್ಲಿರುವ ಅಮೇರಿಕಾದ ಗುಆಮ್ ನೌಕಾದಳದ ತಾಣವೂ ಹದ್ದಿನಲ್ಲಿ ಬರುತ್ತದೆ. ಈ ಕ್ಷಿಪಣಿಗಳಲ್ಲಿ ೧ ಸಾವಿರದ ೨೦೦ ರಿಂದ ೧ ಸಾವಿರದ ೮೦೦ ಕೆಜಿಯಷ್ಟು ಅಣ್ವಸ್ತ್ರವನ್ನು ಹೊತ್ತೊಯ್ಯುವ ಕ್ಷಮತೆ ಹೊಂದಿದೆ. ‘ಡಿಎಫ್ ೧೬’ನ ಮಾರಕ ಕ್ಷಮತೆ ೮೦೦ ರಿಂದ ೧ ಸಾವಿಕ ಕಿ.ಮೀ. ನಷ್ಟಿದೆ.